ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಸಂಭಾವನೆ ಬೇಡವೆಂದಿದ್ದಾರಂತೆ  ಯಶ್​, ಹಾಗಿದ್ದರೆ ಮಾಡಿಕೊಂಡಿರುವ ಡೀಲ್​ ಏನು? ಇಲ್ಲಿದೆ ವಿವರ...  

ರಾಮಾಯಣವನ್ನು ಆಧರಿಸಿ ಇದಾಗಲೇ ಕೆಲವು ಚಿತ್ರಗಳು ಬಂದಿದ್ದು, ಇದೀಗ ಮತ್ತೊಂದು ರಾಮಾಯಣ ಚಿತ್ರದ ಶೂಟಿಂಗ್​ ನಡೆಯುತ್ತಿದೆ. ನಿತೇಶ್ ತಿವಾರಿ ಮಹಾಗ್ರಂಥವನ್ನು ತೆರೆಮೇಲೆ ತರುವುದಕ್ಕೆ ಹೊರಟಿರುವುದು ಅನೇಕ ತಿಂಗಳುಗಳಿಂದ ಸದ್ದು ಮಾಡುತ್ತಲೇ ಇತ್ತು. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಿಡುಗಡೆ ಕನ್ನಡಿಗರ ಪಾಲಿಗೆ ಬಹುನಿರೀಕ್ಷಿತವಾಗಿದೆ. ಇದಕ್ಕೆ ಕಾರಣ, ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್​ ಅವರು ನಟಿಸುತ್ತಿರುವುದು. ಕೆಲವು ಮೂಲಗಳ ಪ್ರಕಾರ ಸಿನಿಮಾ ಮೂರು ಭಾಗಗಳಲ್ಲಿ ಬರಲಿದ್ದು, ರಾವಣನ ಎಂಟ್ರಿ ಎರಡನೇ ಪಾರ್ಟ್​​ನಲ್ಲಿ ಆಗಲಿದೆಯಂತೆ. ಈಗ ಸೆಟ್​ನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಇದರ ನಡುವೆಯೇ ರಾಮಾಯಣಕ್ಕೆ ನಟರು ಪಡೆಯುತ್ತಿರುವ ಸಂಭಾವನೆ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಅದರಲ್ಲಿಯೂ ಯಶ್​ ಅವರು ರಾವಣನ ಪಾತ್ರಕ್ಕಾಗಿ ಯಶ್‌ ಸುಮಾರು 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದೇ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿ. ರಾಮಾಯಣ ಸಿನಿಮಾ ಮೂರು ಭಾಗಗಳಲ್ಲಿ ಬರುತ್ತಿದ್ದು ಅದಕ್ಕಾಗಿ ಯಶ್‌ ಸಾಕಷ್ಟು ತಯಾರಿ ನಡೆಸಬೇಕು. ಜೊತೆಗೆ ಕಾಲ್‌ಶೀಟ್‌ ಕೊಡಬೇಕು ಆದ ಕಾರಣ ಯಶ್‌ ಅಷ್ಟು ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದಾರೆ ಎಂದೂ ಹೇಳಲಾಗಿತ್ತು.

Add Asianetnews Kannada as a Preferred SourcegooglePreferred

ಆದರೆ ಇದೀಗ ಇನ್ನೊಂದು ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ, ಯಶ್​ ರಾಮಾಯಣ ಚಿತ್ರಕ್ಕೆ ಸಂಭಾವನೆನೇ ಪಡೆಯುತ್ತಿಲ್ಲ ಎನ್ನುವುದು! ಹೌದು. ಯಶ್​ ಅವರು ಪಡೆಯುತ್ತಿದ್ದಾರೆ ಎನ್ನಲಾದ ಭಾರಿ ಸಂಭಾವನೆ ಕುರಿತು ಚರ್ಚೆಯ ನಡುವೆಯೇ ಈ ವಿಷಯವೀಗ ಬಹಿರಂಗಗೊಂಡಿದೆ. ಹಾಗೆಂದು ಸಂಭಾವನೆ ಪಡೆಯದೇ ಪುಕ್ಕಟೆ ಕೆಲಸ ಮಾಡುತ್ತಾರೆ ಎಂದು ಅರ್ಥವಲ್ಲ, ಬದಲಿಗೆ ಇಲ್ಲೊಂದು ಟ್ವಿಸ್ಟ್​ ಇದೆ ಎನ್ನಲಾಗುತ್ತಿದೆ. ಅದೇನೆಂದರೆ ಯಶ್​ ಅವರು, ಸಂಭಾವನೆ ಬದಲು ಚಿತ್ರದ ನಿರ್ಮಾಪಕರಾಗುತ್ತಿದ್ದಾರೆ ಎನ್ನುವುದು. ಅಷ್ಟಕ್ಕೂ ಯಶ್​ ಅವರಿಗೆ ಇದಾಗಲೇ 80 ಕೋಟಿ ರೂಪಾಯಿಗಳನ್ನು ಕೊಡಲು ನಿರ್ಮಾಪಕರೂ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ ಇದೀಗ ಬಂದಿರುವ ಸುದ್ದಿಯಂತೆ ಯಶ್​, ಸಂಭಾವನೆ ಬದಲು ಸಹ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. 

ಯಶ್​, ರಣಬೀರ್​-ಸಾಯಿ ಪಲ್ಲವಿ ನಟನೆಯ ರಾಮಾಯಣ ಶೂಟಿಂಗ್​ ಸೆಟ್​ ಹೀಗಿದೆ ನೋಡಿ: ವಿಡಿಯೋ ವೈರಲ್​

 ತಮಗೆ ಕೊಡಬೇಕಿರುವ 80 ಕೋಟಿ ರೂಪಾಯಿನ ಸಿನಿಮಾ ಮೇಲೆ ಹೂಡಿಕೆ ಮಾಡುವಂತೆ ಯಶ್​ ಕೋರಿದ್ದು, ಈ ಮೂಲಕ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಇದರ ಒಂದು ಪ್ರಯೋಜನವೆಂದರೆ, ಸಿನಿಮಾ ಏನಾದ್ರೂ ಸಕತ್​ ಹಿಟ್​ ಆಗಿ ಬ್ಲಾಕ್​ಬಸ್ಟರ್​ ಆದರೆ, ಸಹ ನಿರ್ಮಾಪಕರಿಗೂ ಒಳ್ಳೆಯ ಲಾಭ ಸಿಗಲಿದೆ. ರಾಮಾಯಣದ ಕುರಿತು ಇದಾಗಲೇ ಸಾಕಷ್ಟು ಚಿತ್ರಗಳು ಬಂದು ಹೋಗಿದ್ದರೂ ಈ ಚಿತ್ರ ಸೂಪರ್​ಹಿಟ್​ ಆಗಲಿದೆ ಎನ್ನುವ ಆಶಾ ಭಾವನೆ ಹೊಂದಿರುವ ಕಾರಣ, ಯಶ್​ ಅವರು ಸಂಭಾವನೆ ಬದಲು ಈ ರೀತಿಯ ಡೀಲ್​ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆಂದು ಈ ರೀತಿ ಸಹ ನಿರ್ಮಾಪಕರಾಗಿ ಲಾಭ ಪಡೆದುಕೊಳ್ಳುವುದು ಹೊಸ ವಿಷಯವಲ್ಲ. ಈ ಹಿಂದೆ ರಣಬೀರ್​ ಕಪೂರ್​ ಕೂಡ ಇದೇ ರೀತಿ ಮಾಡಿದ್ದರು. ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಇವರು ಸಂಭಾವನೆಯನ್ನು ಸಿನಿಮಾ ಮೇಲೆ ಹೂಡಿಕೆ ಮಾಡಿದ್ದರು. ಸಿನಿಮಾ ಗೆದ್ದ ಬಳಿಕ ಬಂದ ಲಾಭದಲ್ಲಿ ಪಾಲು ಪಡೆದಿದ್ದರು. ಹಾಗೆಂದು ಎಲ್ಲರೂ ಹೀಗೆಯೇ ಮಾಡುತ್ತಾರೆ ಎಂದೇನಲ್ಲ. ದುರದೃಷ್ಟವಶಾತ್​ ಸಿನಿಮಾ ಸೋತರೆ ಹೀಗೆ ಹೂಡಿಕೆ ಮಾಡಿದವರಿಗೂ ನಷ್ಟವೇ. ಸಿನಿಮಾದ ಮೇಲೆ ಅಷ್ಟು ವಿಶ್ವಾಸವಿದ್ದರೆ ಮಾತ್ರ ಹೀಗೆ ಹೂಡಿಕೆ ಮಾಡಲು ಸಾಧ್ಯ.

ಸೀರಿಯಲ್​ ತಾರೆಯರ ಯುಗಾದಿ ಸಂಭ್ರಮದ ಶೂಟಿಂಗ್​ ಹೇಗಿತ್ತು? ತೆರೆಮರೆಯ ಝಲಕ್​ ಇಲ್ಲಿದೆ ನೋಡಿ...