Asianet Suvarna News Asianet Suvarna News

ಪ್ರಶಾಂತ್ ನೀಲ್ ಮತ್ತು ಜೂ.ಎನ್‌ಟಿಆರ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಆಮೀರ್ ಖಾನ್?

ಪ್ರಶಾಂತ್ ನೀಲ್ ಮತ್ತು ಜೂ.ಎನ್‌ಟಿಆರ್ ಸಿನಿಮಾಗೆ ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. 

KGF Director Prashanth Neel likely to Bring Aamir Khan for Jr NTR film sgk
Author
First Published Dec 31, 2022, 4:21 PM IST

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಲಾರ್ ಸಿನಿಮಾ ಜನವರಿಯಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸುವ ಪ್ಲಾನ್ ಮಾಡಿದೆ. ಅಂದಹಾಗೆ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಮುಗಿಯುತ್ತಿದ್ದಂತೆ ತೆಲುಗಿನ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಜೂ.ಎನ್ ಟಿ ಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರೆ. ಅಂದಹಾಗೆ ಸಲಾರ್ ಸಿನಿಮಾಗೂ ಮೊದಲೇ ಪ್ರಶಾಂತ್ ಮತ್ತು ಜೂ.ಎನ್ ಟಿ ಆರ್ ಸಿನಿಮಾ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ ಸಲಾರ್ ಮುಗಿಯುತ್ತಿದ್ದಂತೆ ಜೂ.ಎನ್‌ಟಿಆರ್ ಜೊತೆ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. 

ಜೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಸಿನಿಮಾ ಪ್ರಾರಂಭಕ್ಕೂ ಮೊದಲು ಇಂಟ್ರಸ್ಟಿಂಗ್ ಸುದ್ದಿ ಹೊರ ಬಿದ್ದಿದೆ. ಜೂ.ಎನ್‌ಟಿಆರ್ ಸಿನಿಮಾಗೆ ಬಾಲಿವುಡ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಹೌದು ಬಹುನಿರೀಕ್ಷೆಯ ಸಿನಿಮಾದಲ್ಲಿ ಬಾಲಿವುಡ್‌ನ ಖ್ಯಾತ ನಟ ಆಮೀರ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮೂಲಗಳ ಪ್ರಕಾರ ಈಗಾಗಲೇ ಪ್ರಶಾಂತ್ ನೀಲ್ ತಂಡ ಆಮೀರ್ ಖಾನ್ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದೆ. ಚಿತ್ರದ ಪ್ರಮುಖ ಪಾತ್ರಕ್ಕೆ ಆಮೀರ್ ಖಾನ್ ಅವರನ್ನು ಆಯ್ಕೆ ಮಾಡಿದೆಯಂತೆ ಸಿನಿಮಾತಂಡ. ಈ ಮೂಲಕ ಆಮೀರ್ ಖಾನ್ ಸೌತ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. 

ಆದರೆ ಆಮೀರ್ ಖಾನ್ ಎಂಟ್ರಿ ಬಗ್ಗೆ ಸಿನಿಮಾತಂಡದ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಅಂದಹಾಗೆ ಜೂ.ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಸಿನಿಮಾ ಮುಂದಿನ ಮಾರ್ಚ್ ಹಾಗೆ ಪ್ರಾರಂಭವಾಗುವ ಸಾಧ್ಯತೆ ಇದೆ.  ಅಂದಹಾಗೆ ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ಸಿನಿಮಾತಂಡ ಸಿದ್ಧತೆ ಮಾಡಿಕೊಂಡಿದೆ. ಆರ್ ಆರ್ ಆರ್ ಸಿನಿಮಾ ಬಳಿಕ ಜೂ ಎನ್ ಟಿ ಆರ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

Puneeth Rajkumar; Jr NTR ಮನೆಯಲ್ಲಿ ಅಪ್ಪು ಫೋಟೋ, ಗೆಳೆಯನಿಗೆ ತೆಲುಗು ಸ್ಟಾರ್ ವಿಶೇಷ ಗೌರವ

ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಲು ಅನೇಕ ಸ್ಟಾರ್ ಕಲಾವಿದರು ತುದಿಗಾಲಿನಲ್ಲಿ ನಿಂತಿದ್ದಾರೆ. ಕೆಜಿಎಫ್ ಸಿನಿಮಾದ ಬಗ್ಗೆ ಆಮೀರ್ ಖಾನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೆಜಿಎಫ್ ಹವಾಗೆ ಅಚ್ಚರಿ ಹೊರಹಾಕಿದ್ದರು. ಇದೀಗ ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಟಿಸಲು ಸಖತ್ ಎಗ್ಸಾಯಿಟ್ ಆಗಿದ್ದಾರೆ ಎನ್ನಲಾಗಿದೆ. ಅಂದಹಾಗೆ ಆಮೀರ್ ಖಾನ್ ಯಾವ ಪಾತ್ರದ ಮೂಲಕ ಸೌತ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

ವಿವಾಹ ವಾರ್ಷಿಕೋತ್ಸವ ಒಟ್ಟಿಗೆ ಆಚರಿಸಿದ ಪ್ರಶಾಂತ್ ನೀಲ್- Jr. NTR ಕುಟುಂಬ; ಫೋಟೋ ವೈರಲ್

ಅಂದಹಾಗೆ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲಿನ ಬಳಿಕ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಸದ್ಯ ಬ್ರೇಕ್ ಪಡೆಯುತ್ತಿರುವುದಾಗಿ ಸ್ವತಃ ಆಮೀರ್ ಖಾನ್ ಅವರೇ ಬಹಿರಂಗ ಪಡಿಸಿದ್ದಾರೆ. ನಟನೆಯಿಂದ ಬ್ರೇಕ್ ಪಡೆದು ಆಮೀರ್ ಖಾನ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. ನಿಜಕ್ಕೂ ಆಮೀರ್ ಖಾನ್, ಪ್ರಶಾಂತ್ ನೀಲ್ ಮತ್ತು ಜೂ.ಎನ್‌ಟಿಆರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಕಾದು ನೋಡಬೇಕು.
 

Follow Us:
Download App:
  • android
  • ios