ತೆಲುಗು ಸ್ಟಾರ್ ಜೂ.ಎನ್ ಟಿ ಅರ್ ಅವರು ಕರನಾಡ ಗೆಳೆಯನಿಗೆ ಸಲ್ಲಿಸಿದ ವಿಶೇಷ ಗೌರವ ಅಪ್ಪು ಅಭಿಮಾನಿಗಳ ಹೃದಯ ಗೆದ್ದಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಭರ್ತಿ ಒಂದು ವರ್ಷ. ಅಭಿಮಾನಿಗಳು ಇನ್ನು ನೆಚ್ಚಿನ ನಟನ ನೆನಪಲ್ಲೇ ಇದ್ದಾರೆ. ಪುನೀತ್ ರಾಜ್ ಕುಮಾರ್ ಇಲ್ಲದ ಈ ಒಂದು ವರ್ಷ ಹೇಗೆ ಕಳೆದು ಹೋಯಿತು ಎನ್ನುವುದೇ ಗೊತ್ತಿಲ್ಲ. ನೋಡ ನೋಡುತ್ತಲೇ ಒಂದು ವರ್ಷ ಕಳೆಯಿತು. ಅಕ್ಟೋಬರ್ 28 ಒಂದು ವರ್ಷದ ಅಪ್ಪು ಪುಣ್ಯಸ್ಮರಣೆ ಮಾಡಲಾಯಿತು. ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯ ಹಾಗೂ ದೇಶಗಳಲ್ಲೂ ಅಪ್ಪು ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ತೆಲುಗು ಸ್ಟಾರ್ ಜೂ.ಎನ್ ಟಿ ಅರ್ ಅವರು ಸಹ ಕರನಾಡ ಗೆಳೆಯನಿಗೆ ಸಲ್ಲಿಸಿದ ವಿಶೇಷ ಗೌರವ ಅಪ್ಪು ಅಭಿಮಾನಿಗಳ ಹೃದಯ ಗೆದ್ದಿದೆ. ತೆಲುಗು ಸ್ಟಾರ್ ಜೂ.ಎನ್ ಟಿ ಆರ್ ಮತ್ತು ಪುನೀತ್ ರಾಜ್ ಕುಮಾರ್ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಅಪ್ಪುಗಾಗಿ ಜೂ.ಎನ್ ಟಿ ಆರ್ ಗೆಳೆಯ... ಗೆಳೆಯ...ಹಾಡನ್ನು ಸಹ ಹಾಡಿದ್ದರು. ಚಕ್ರವ್ಯೂಹ ಚಿತ್ರದ ಹಾಡಿಗೆ ಜೂ ಎನ್ ಟಿ ಆರ್ ಧ್ವನಿ ನೀಡಿದ್ದರು. ಅಪ್ಪು ಅಗಲಿಕೆ ಜೂ.ಎನ್ ಟಿ ಆರ್ ಅವರಿಗೂ ಕಾಡಿದೆ.
ಅಪ್ಪು ಅವರನ್ನು ಅಭಿಮಾನಿಗಳು ನಾನರೀತಿ ಆರಾಧಿಸುತ್ತಿದ್ದಾರೆ, ಗೌರವ ಸಲ್ಲಿಸುತ್ತಿದ್ದಾರೆ. ಬಹುತೇಕರ ಮನೆಯಲ್ಲಿ ಪುನೀತ್ ರಾಜ್ ಕುಮಾರ್ ಫೋಟೋ ಇಟ್ಟು ಪೂಜಿಸಲಾಗುತ್ತಿದೆ. ವಿಶೇಷ ಎಂದರೆ ತೆಲುಗು ಸ್ಟಾರ್ ಜೂ.ಎನ್ ಟಿ ಆರ್ ಸಹ ತಮ್ಮ ನಿವಾಸದಲ್ಲಿ ಅಪ್ಪು ಫೋಟೋ ಇಟ್ಟಿದ್ದಾರೆ. ಜೂ.ಎನ್ ಟಿ ಆರ್ ಮನೆಯಲ್ಲಿ ಗೆಳೆಯನ ಫೋಟೋ ಇಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಜೂ.ಎನ್ ಟಿ ಆರ್ ಅವರದ್ದು ಸಿನಿಮಾ ಕುಟುಂಬ. ಅವರ ತಾತ ನಂದಮೂರಿ ತಾರಕ ರಾಮ ರಾವ್ ಅವರು ಸೂಪರ್ ಸ್ಟಾರ್ ಆಗಿದ್ದರು. ತಾತನ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡಿರುವ ಜೂ.ಎನ್ಟಿಆರ್, ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರವನ್ನು ಇಟ್ಟಿದ್ದಾರೆ. ಜೂ.ಎನ್ ಟಿ ಆರ್‌ಗೆ ಅಪ್ಪು ಮೇಲಿನ ಪ್ರೀತಿಗೆ ಅಪ್ಪು ಅಭಿಮಾನಿಗಳು ಮನಸೋತಿದ್ದಾರೆ.
Puneeth Rajkumar ನೆನಪಿನಲ್ಲಿ 'ಬೊಂಬೆ ಹೇಳುತೈತೆ' ಹಾಡಿದ ಮಲಯಾಳಂ ನಟ ಜಯರಾಮ್!
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂ.ಎನ್ ಟಿ ಆರ್
ನವೆಂಬರ್ 1 ಪುನೀತ್ ರಾಜ್ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಸಮಾರಂಭ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಕರ್ನಾಟಕ ರತ್ನ ಗೌರವ ಸಲ್ಲಿಸಲಾಗುತ್ತಿದೆ. ಈ ಸಮಾರಂಭಕ್ಕೆ ತೆಲುಗು ಸ್ಟಾರ್ ಅಪ್ಪು ಗೆಳೆಯ ಜೂ ಎನ್ ಟಿ ಆರ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ.
ಅಪ್ಪು ಗಂಧದ ಗುಡಿ ಚಿತ್ರಕ್ಕೆ ಕುಂಬ್ಳೆ, ಲಕ್ಷ್ಮಣ್ ಸೇರಿ ಟೀಂ ಇಂಡಿಯಾ ಕ್ರಿಕೆಟಿಗರ ವಿಶ್!
ರಜನಿಕಾಂತ್ ಮತ್ತು ಜೂ.ಎನ್ ಟಿ ಆರ್ ಅವರಿಗೆ ಕರ್ನಾಟಕ ಸರ್ಕಾರದಿಂದ ಆಹ್ವಾನ ನೀಡಲಾಗಿದೆ. ಈ ಸಮಾರಂಭಕ್ಕೆ ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರು, ಸಾಹಿತಿಗಳು ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
