Asianet Suvarna News Asianet Suvarna News

Yash: ಕೆಜಿಎಫ್​-2 ಯಶಸ್ಸಿನ ಬೆನ್ನಲ್ಲೇ 'ರಾವಣ' ಆಗ್ತಿದ್ದಾರಾ ಯಶ್​? ಏನಿದು ಹೊಸ ಸುದ್ದಿ?

ಕೆಜಿಎಫ್​ 2 ಭರ್ಜರಿ ಯಶಸ್ಸಿನ ನಂತರ ಈಗ ನಟ ಯಶ್​ ರಾವಣನಾಗಲು ಹೊರಟಿದ್ದಾರಂತೆ, ಏನಿದು ಸುದ್ದಿ?
 

KGF Chapter 2 fame Yash may play Ravana in Nitesh Tiwari Ramayana
Author
First Published Jan 29, 2023, 4:37 PM IST

ಬಾಕ್ಸ್​ಆಫೀಸ್​ ಗಳಿಕೆ ಮೂಲಕ ಭಾರತೀಯ ಚಿತ್ರರಂಗದಲ್ಲೇ ನೂತನ ದಾಖಲೆ ಬರೆದ  ಕೆಜಿಎಫ್- 2 (KGF-2), ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿಯೂ ಭರ್ಜರಿ ಯಶಸ್ಸು ಗಳಿಸಿದೆ. ಈ  ಅಭೂತಪೂರ್ವ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ (Yash) ಅವರು ಸದ್ಯ ಸುದ್ದಿಯಲ್ಲದೇ ಸುಮ್ಮನಿದ್ದಾರೆ. ಆದರೆ ಇತ್ತೀಚೆಗೆ ಅವರು ಮತ್ತೊಮ್ಮೆ ಸುದ್ದಿಯಾಗಲು ಕಾರಣ,  ​ಪೆಪ್ಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯಶ್​ ಅವರು, ವಿದೇಶಿ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದಕ್ಕೆ ಹಲವರು ಭಾರಿ ಅಸಮಾಧಾನವನ್ನೂ ಹೊರಹಾಕುತ್ತಿದ್ದಾರೆ. ಕೊನೆಗೂ ಯಶ್​ ಕೀಟನಾಶಕದ ಪಾಲಾದರು ಎಂದು ಭಾರಿ ಟ್ರೋಲ್​ ಕೂಡ ಆಗುತ್ತಿದ್ದಾರೆ. ಯಶೋಮಾರ್ಗದಂಥ (Yashomarga) ಸಾಮಾಜಿಕ ಕಳಕಳಿ ತೋರಿ ಈಗ ಈ ಜಾಹೀರಾತಿಗೆ ಒಪ್ಪಿಕೊಂಡಿರುವುದಕ್ಕೆ ಹಲವರು ಗರಂ ಕೂಡ ಆಗುತ್ತಿದ್ದು, ನಟನ ಬಗ್ಗೆ ಇರುವ ಪ್ರೀತಿಯೆಲ್ಲಾ ಹೊರಟು ಹೋದವು ಎಂದೂ ಅಸಮಾಧಾನ ಹೊರಹಾಕುತ್ತಿದ್ದಾರೆ.

ಇದೀಗ ಯಶ್​ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಯಶ್​  'ರಾವಣ'ನಾಗಲು (Ravana) ಹೊರಟಿದ್ದಾರೆ ಎನ್ನುವುದು! ಅರ್ಥಾತ್​ ರಾವಣನ ಪಾತ್ರಧಾರಿಯಾಗಿ ಮಿಂಚಲು ಯಶ್​ ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.  'ದಂಗಲ್' (Dangal) ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಅವರು ನಿರ್ಮಾಪಕ ಮಧು ಮಂಟೇನಾ ಅವರೊಂದಿಗೆ 'ರಾಮಾಯಣ'  ಕಥೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ಬಯಸಿದ್ದಾರೆ. ಈ ಚಿತ್ರದಲ್ಲಿ ರಾಮನಾಗಿ ನಟಿಸಲು ರಣಬೀರ್​ ಕಪೂರ್​ ಮತ್ತು ರಾವಣನ ಪಾತ್ರದಲ್ಲಿ  ಹೃತಿಕ್ ರೋಷನ್ ನಟಿಸಲು ನಿರ್ಮಾಪಕರು  ಮಾತುಕತೆ ನಡೆಸುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಇದೀಗ ಬಂದಿರುವ ಹೊಸ ಸುದ್ದಿಯೇನಪ್ಪಾ ಎಂದರೆ, ರಾವಣನ ಪಾತ್ರಧಾರಿಯಾಗಿ ನಟಿಸಲು ಯಶ್ ಅವರನ್ನು ಸಂಪರ್ಕಿಸಿದ್ದು, ಈ ಬಗ್ಗೆ ಮಾತುಕತೆ ಕೂಡ ನಡೆಸುತ್ತಿದ್ದಾರೆ ಎನ್ನಲಾಗಿದೆ. 

Aishwarya Rajesh: ದೇವಾಲಯದೊಳಗೆ ಮುಟ್ಟಾದ ಸ್ತ್ರೀ: ನಟಿ ಐಶ್ವರ್ಯಾ ಹೇಳಿಕೆಗೆ ಆಸ್ತಿಕರು ಕಿಡಿ!

ರಾವಣನ ಪಾತ್ರಕ್ಕೆ ಹೃತಿಕ್​ ರೋಷನ್​ (Hruthik Roshan) ಅವರನ್ನು ಸಂಪರ್ಕಿಸಿದ್ದಾಗ  ಅವರು  ನೆಗೆಟಿವ್ ರೋಲ್  ಮಾಡಲು ಒಪ್ಪಿರಲಿಲ್ಲ ಎನ್ನಲಾಗಿದೆ.  ಇದೀಗ ರಾವಣನ ಪಾತ್ರಕ್ಕೆ ನೋಟೇಶ್ ತಿವಾರಿ ಮತ್ತು ನಿರ್ಮಾಪಕ ಮಧು ಮಂಟೇನಾ ಅವರು ಯಶ್​ ಅವರನ್ನು ಆಯ್ಕೆ  ಮಾಡಿದ್ದು, ಅವರು ಈ ಪಾತ್ರದತ್ತ ಒಲವು ತೋರಿದ್ದಾರೆ ಎನ್ನಲಾಗಿದೆ.   ಯಶ್​ ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ ಕೆಲವು ಚಿತ್ರಗಳ ಸ್ಕ್ರಿಪ್ಟ್‌ಗಳನ್ನು (script) ಪರಿಶೀಲಿಸಿದ್ದಾರೆ. ಅದರಲ್ಲಿ ಐದು ಚಿತ್ರಗಳಿಗೆ ಓಕೆ ಮಾಡಿದ್ದಾರೆ. ಅದರಲ್ಲಿ ಒಂದು ರಾಮಾಯಣ ಎನ್ನಲಾಗಿದೆ. ಯಶ್​ ಅವರು ರಾವಣನ ಪಾತ್ರದಿಂದ  ತುಂಬಾ ಪ್ರಭಾವಿತರಾಗಿದ್ದಾರೆ ಮತ್ತು 'ರಾಮಾಯಣ' ತಂಡದೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಇನ್ನೆರಡು ತಿಂಗಳೊಳಗೆ ರಾಮಾಯಣ ಚಿತ್ರೀಕರಣವನ್ನು ಪ್ರಾರಂಭವಾಗಲಿದೆ ಎನ್ನಲಾಗಿದೆ.

ಕರಣ್ ಜೋಹರ್ ಅವರು ತಮ್ಮ 'ಬ್ರಹ್ಮಾಸ್ತ್ರ ಭಾಗ 2: ದೇವ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಯಶ್​ ಅವರನ್ನು ಸಂಪರ್ಕಿಸಿದ್ದರು. ಆದರೆ ಈ ಯೋಜನೆಯಲ್ಲಿ ಪ್ರಗತಿ ಕಂಡಿಲ್ಲ ಎಂದು ಸುದ್ದಿಯಾಗುತ್ತಿರುವ ನಡುವೆಯೇ, ಈಗ ರಾಮಾಯಣದ ಸುದ್ದಿ ಕೇಳಿಬರುತ್ತಿದೆ. ಗಮನಾರ್ಹವಾಗಿ, ನಿತೇಶ್ ತಿವಾರಿ (Nitesh Tiwari) ಮತ್ತು ಮಧು ಮಂಟೇನಾ (Madhu Mantena) ಅವರು 2019 ರಲ್ಲಿ 'ರಾಮಾಯಣ'ವನ್ನು ಘೋಷಿಸಿದ್ದರು, ಅವರು ದೊಡ್ಡ ಪ್ರಮಾಣದಲ್ಲಿ ಮಾಡಲು ಯೋಜಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ನಟಿಸಲು ನಿತೇಶ್ ಮತ್ತು ಮಧು ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ರದಲ್ಲಿ ಭಗವಾನ್ ರಾಮನ (Rama) ಪಾತ್ರದಲ್ಲಿ ನಟಿಸಲು ನಟ ರಣಬೀರ್ ಕಪೂರ್ (Ranbeer Kapur) ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಸ್ವತಃ ರಣಬೀರ್ ಕೂಡ ಈ ಪಾತ್ರ ಮಾಡಲು ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರು ಇನ್ನೂ ಯೋಜನೆಗೆ ಸಹಿ ಹಾಕಿಲ್ಲ. ಚಿತ್ರದ ಸಂಪೂರ್ಣ ತಾರಾಗಣವನ್ನು ಅಂತಿಮಗೊಳಿಸಲು ಅವರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

Urfi Javed: ಶಾರುಖ್​ ಖಾನ್​ ಎರಡನೇ ಹೆಂಡ್ತಿಯಾಗಲು ಉರ್ಫಿ ಸಿದ್ಧ , ಏನಿದು ಹೊಸ ವಿಷ್ಯ?

ಈ ವರ್ಷ ಬೇಸಿಗೆಯಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗುವ ನಿರೀಕ್ಷೆ ಇದೆ. ಯಶ್ ರಾವಣ ಪಾತ್ರಕ್ಕೆ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದಾರೋ, ಇಲ್ಲವೋ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.  ಯಶ್ ಇದುವರೆಗೂ ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು  ಹಂಚಿಕೊಂಡಿಲ್ಲ. ನಿತೇಶ್ ತಿವಾರಿ ಪ್ರಸ್ತುತ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅವರೊಂದಿಗೆ ಬವಾಲ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. 

Follow Us:
Download App:
  • android
  • ios