ಕೆಜಿಎಫ್-2 ಚಿತ್ರತಂಡ ಅಭಿಮಾನಿಗಳಿಗೆ ಭರ್ಜರ್ ಆಫರ್ ನೀಡಿದೆ. ರಾಕಿ ಭಾಯ್ ಕಲಾಕೃತಿಗಳನ್ನು ರಚಿಸಿ ಹೊಂಬಾಳೆ ಫಿಲ್ಮ್ಸ್ ಜೊತೆ ಹಂಚಿಕೊಳ್ಳಿ ಅದನ್ನು ಪ್ರಚಾರ ಕಾರ್ಯದಲ್ಲಿ ಬಸಿಕೊಳ್ಳುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿದೆ.

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಬಹುನಿರೀಕ್ಷೆಯ ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಏಪ್ರಿಲ್ 14ರಂದು((April 14th)) ಕೆಜಿಎಫ್-2 ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಪ್ರಚಾರ ಕಾರ್ಯಕ್ಕೆ ಕೆಜಿಎಫ್-2(KGF 2) ಸಿನಿಮಾತಂಡ ಈಗಾಗಲೇ ತಯಾರಿ ನಡೆಯುತ್ತಿದೆ. ಕೆಜಿಎಫ್ 2 ಹವಾ ಜೋರಾಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

ಇದೀಗ ಚಿತ್ರತಂಡ ಕೊನೆಯ ಹಂತದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದು, ಅಭಿಮಾನಿಗಳಿಗೆ ಹಲವು ಆಫರ್ ​ಗಳನ್ನು ನೀಡಿದೆ. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ವಿಭಿನ್ನ ರೀತಿಯ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸಿನಿಮಾತಂಡ ಕಲಾವಿದರು, ಗ್ರಾಫಿಕ್ಸ್ ಡಿಸೈನ್ ​ಗಳಲ್ಲಿ ಆಸಕ್ತಿಯುಳ್ಳವರು ತಾವು ರಚಿಸಿದ ರಾಕಿ ಭಾಯ್ ಕಲಾಕೃತಿಗಳನ್ನು ಹೊಂಬಾಳೆ ಫಿಲ್ಮ್ಸ್ ಜೊತೆ ಹಂಚಿಕೊಳ್ಳಿ ಎಂದು ಹೇಳಿದ್ದಾರೆ. ಅದನ್ನು ಚಿತ್ರತಂಡ ವಿಶ್ವಾದ್ಯಂತ ನಡೆಸಲಿರುವ ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳಲಿದ್ದಾರಂತೆ. ಈ ಕುರಿತು ಪೂರ್ಣ ವಿವರ ನೀಡಿದೆ ಚಿತ್ರತಂಡ.

ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ. ಚಿತ್ರತಂಡ ಹಂಚಿಕೊಂಡಿರುವ ಮಾಹಿತಿಯಲ್ಲಿ 'ಕೆಜಿಎಫ್ 1 ರಿಲೀಸ್ ಆಗಿ ಮೂರು ವರ್ಷಗಳಾಗಿದೆ. ನಿಮ್ಮ ಅಪಾರವಾದ ಪ್ರೀತಿಗೆ ವಂದನೆಗಳು. ಇದು ಕೆಜಿಎಫ್​ 2 ಚಿತ್ರದ ಪಯಣವನ್ನು ಮತ್ತಷ್ಟು ವಿಶೇಷವಾಗಿಸಿದೆ’ ಎಂದಿದ್ದಾರೆ.

ಯಶ್ v/s ವಿಜಯ್; ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್

'ಈ ಚಿತ್ರ ನಿಜಕ್ಕೂ ನಿಮ್ಮೆಲ್ಲರದ್ದು. ಕೆಜಿಎಫ್ 2 ಪ್ರಚಾರಕ್ಕೆ ನೀವು ಭಾಗಿ ಆದರೆ ಚೆನ್ನಾಗಿರುತ್ತದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಬಾರಿಗೆ ಅಭಿಮಾನಿ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಇಟ್ಟುಕೊಂಡು ನಾವು ಪ್ರಚಾರ ನಡೆಸಲಿದ್ದೇವೆ. ಇಂದಿನಿಂದ ಆರಂಭಿಸಿ, ನೀವು ರಚಿಸಿದ ರಾಕಿ ಭಾಯ್ ಕಲಾಕೃತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಅದು ಚಿತ್ರತಂಡದ ಮುಖ್ಯ ಪ್ರಚಾರದ ಭಾಗವಾಗಲಿದೆ' ಎಂದಿದ್ದಾರೆ.

'ಈ ಚಿತ್ರ ಅಭಿಮಾನಿಗಳ ಹೊರತಾಗಿ ಏನೂ ಅಲ್ಲ. ಮತ್ತು ಇದರಿಂದ ರಾಕಿ ಭಾಯ್​ ಅನ್ನು ಪ್ರಪಂಚದ ನಕಾಶೆಯಲ್ಲಿ ಗುರುತಿಸಲು ಸಹಾಯಕವಾಗುತ್ತದೆ. ಯಾಕೆಂದರೆ ರಾಕಿ ಭಾಯ್ ​ಗೆ ಬೇಕಿರುವುದು ದುನಿಯಾ' ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ.

Scroll to load tweet…


KGF 2 ತೊಡೆ ತಟ್ಟಿನಿಂತ ಗಟ್ಟಿಗನೇ, ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ!

ಕೆಜಿಎಫ್-2 ಸಿನಿಮಾಗಾಗಿ ಅಭಿಮಾನಿಗಳು ಮೂರು ವರ್ಷಗಳಿಂದ ಕಾಯುತ್ತಿದ್ದಾರೆ. ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇತ್ತು. ಇದೀಗ ಕೊನೆಗೂ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಇತ್ತೀಚಿಗಷ್ಟೆ ಸಿನಿಮಾದಿಂದ ತೂಫಾನ್ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಎಲ್ಲಾ ಭಾಷೆಯಲ್ಲೂ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಅಂದಹಾಗೆ ಕೆಜಿಎಫ್ ಪಾರ್ಟ್-2ನಲ್ಲಿ ರಾಕಿಂಗ್ ಯಶ್ ಜೊತೆ ಬಾಲಿವುಡ್ ಸ್ಟಾರ್ ಸಂಜಯ್ ದತ್ ಕೂಡ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಅಧೀರ ಪಾತ್ರದಲ್ಲಿ ಬಣ್ಣ ಹಚ್ಚಿರುವ ಸಂಜಯ್ ದತ್ ಲುಕ್ ಭಯ ಹುಟ್ಟಿಸುವಂತಿದೆ. ಇನ್ನು ಇಬ್ಬರ ಕಾಳಗ ಸಿನಿಮಾದಲ್ಲಿ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ. ಇನ್ನು ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.