Asianet Suvarna News Asianet Suvarna News

KGF 2 ಸಕ್ಸಸ್; ತೆಲುಗಿನಲ್ಲಿ ನಟಿಸಲು ಭಾರಿ ಸಂಭಾವನೆ ಬೇಡಿಕೆ ಇಟ್ರಾ ನಟಿ ಶ್ರೀನಿಧಿ?

ಕೆಜಿಎಫ್-2ನಲ್ಲಿ ನಾಯಕಿಯಾಗಿ ಮಿಂಚಿರುವ ಶ್ರೀನಿಧಿ ಶೆಟ್ಟಿ ಇದೀಗ ಮುಂದಿನ ಭಾರಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಶ್ರೀನಿಧಿ ತೆಲುಗು ಸಿನಿಮಾಗೆ 2 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

KGF 2 Actress Srinidhi Shetty demands huge remuneration for telugu movie sgk
Author
Bengaluru, First Published May 29, 2022, 6:54 PM IST

ಕೆಜಿಎಫ್ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಶ್ರೀನಿಧಿ ಶೆಟ್ಟಿ(Srinidhi Shetty). ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಯಶಸ್ಸು ಕಂಡ ಶ್ರೀನಿಧಿ ಶೆಟ್ಟಿ ಸದ್ಯ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್-2 (KGF 2)ನಲ್ಲಿ ಶ್ರೀನಿಧಿ ರೀನಾ ಪಾತ್ರದ ಮೂಲಕ ಮಿಂಚಿದ್ದಾರೆ ಕೆಜಿಎಫ್-2 ಭಾರತದ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳಲ್ಲಿ 3ನೇ ಸ್ಥಾನದಲ್ಲಿದೆ. ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಕೆಜಿಎಫ್-2ನಲ್ಲಿ ನಾಯಕಿಯಾಗಿ ಮಿಂಚಿರುವ ಶ್ರೀನಿಧಿ ಶೆಟ್ಟಿ ಇದೀಗ ಮುಂದಿನ ಭಾರಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಹೌದು, ಕೆಜಿಎಫ್ ಸಿನಿಮಾ ಮೂಲಕ ಸಿನಿ ಪ್ರೇಕ್ಷಕರ ಹೃದಯ ಗೆದ್ದಿರುವ ನಟಿ ಶ್ರೀನಿಧಿ ಈ ಒಂದೇ ಸಿನಿಮಾಗಾಗಿ ತನ್ನ ಸಿನಿ ಜೀವನದ ಅನೇಕ ವರ್ಷಗಳನ್ನು ಮೀಸಲಿಟ್ಟಿದ್ದಾರೆ. ಅನೇಕ ವರ್ಷ ಕಾದಿದಕ್ಕೆ ಈಗ ಶ್ರೀನಿಧಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಇದೇ ಸಕ್ಸಸ್ ಶ್ರೀನಿಧಿ ಮುಂದಿನ ಸಿನಿಮಾಗೆ ದೊಡ್ಡ ಮೊತ್ತದ ಸಂಭಾವನೆ ಬೇಡಿಕೆ ಇಡಲು ಸಾಧ್ಯವಾಗಿದೆ. ಹೌದು, ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಶ್ರೀನಿಧಿ ತೆಲುಗು ಸಿನಿಮಾಗೆ 2 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ತೆಲುಗು ನಿರ್ಮಾಪಕರೊಬ್ಬರು ಶ್ರೀನಿಧಿ ಶೆಟ್ಟಿಗೆ ಸಿನಿಮಾ ಆಫರ್‌ಗಾಗಿ ಸಂಪರ್ಕ ಮಾಡಿದ್ದು ಶ್ರೀನಿಧಿ ಭಾರಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ.

ಶ್ರೀನಿಧಿ ಭಾರಿ ಸಂಭಾವನೆ ಬೇಡಿಕೆ ಇಟ್ಟಿದ್ದು ಯಾವ ಸಿನಿಮಾಗೆ ಎನ್ನುವ ಮಾಹಿತಿ ಇನ್ನು ರಿವೀಲ್ ಆಗಿಲ್ಲ. ಆದರೆ ಹರಿದಾಡುತ್ತಿರುವ ಸುದ್ದಿ ಪ್ರಕಾರ ಜೂ.ಎನ್ ಟಿ ಆರ್ ಸಿನಿಮಾದ ನಾಯಕಿ ಪಾತ್ರಕ್ಕೆ ಶ್ರೀನಿಧಿಗೆ ಆಫರ್ ಮಾಡಲಾಗಿದಂತೆ. ಆದರೆ ತೆಲುಗಿನ ಮೊದಲ ಸಿನಿಮಾಗೆ ಈ ಪರಿ ಸಂಭಾವನೆ ಕೇಳಿದ್ದು ನೋಡಿ ತೆಲುಗು ನಿರ್ಮಾಪಕರು ಬೆಚ್ಚಿಬಿದ್ದಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ನಟಿ, ವಿಶ್ವಸುಂದರಿ ಮಾನುಷಿ ಚಿಲ್ಲರ್ ಮೊದಲ ಸಿನಿಮಾಗೆ 2.5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಮಾನುಷಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಾಯಕನಾಗಿ ಮಿಂಚಿರುವ ಪೃಥ್ವಿರಾಜ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚೊಚ್ಚಲ ಸಿನಿಮಾಗೆ ಮಾನುಷಿ ಭರ್ಜರಿ ಸಂಭಾವನೆ ಪಡೆದಿದ್ದಾರೆ. ಮಾನುಷಿ ಹಾಗೆಯೇ ಶ್ರೀನಿಧಿ ಶೆಟ್ಟಿ ಕೂಡ ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಬಿಕಿನಿಯಲ್ಲಿ ಮಿಂಚಿದ KGF 2 ನಟಿ ಶ್ರೀನಿಧಿ ಶೆಟ್ಟಿ; ಹಳೆ ಫೋಟೋ ವೈರಲ್

ಸದ್ಯ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರೆಂದರೆ ಸಮಂತಾ, ಪೂಜಾ ಹೆಗ್ಡೆ, ನಯನತಾರಾ ಮತ್ತು ರಶ್ಮಿಕಾ ಮಂದಣ್ಣ ಇನ್ನು ಕೆಲವೇ ನಟಿಯರು 2 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ಶ್ರೀನಿಧಿ ಕೂಡ ಅಷ್ಟೆ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ಪಡೆದು ನಟಿ ಶ್ರೀನಿಧಿ ತೆಲುಗು ಸಿನಿಮಾರಂಗದಲ್ಲಿ ಮಿಂಚುತ್ತಾರಾ ಅಥವಾ ಇಲ್ವ ಎಂದು ಕಾದುನೋಡಬೇಕು.

ಯೂಟ್ಯೂಬ್‌ ನಂಬ ಬೇಡಿ, ನಾನು ಈಗಲೂ ಇರುವುದು ಬಾಡಿಗೆ ಮನೆಯಲ್ಲಿ ಎಂದ ಕೆಜಿಎಫ್ ನಟಿ ಶ್ರೀನಿಧಿ

ನಟಿ ಶ್ರೀನಿಧಿ ಶೆಟ್ಟಿ ಸದ್ಯ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಬಳಿಕ ಶ್ರೀನಿಧಿ ನಟಿಸಿದ ಏಕೈಕ ಸಿನಿಮಾ ತಮಿಳಿನ ಕೋಬ್ರಾ. ವಿಕ್ರಮ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ಮಿಂಚಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿದ್ದು ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ನಂತರ ಶ್ರೀನಿಧಿ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಕಾದುನೋಡಬೇಕು.

Follow Us:
Download App:
  • android
  • ios