Asianet Suvarna News Asianet Suvarna News

ಗಂಡ ಹೊರಗಿದ್ದಾನೆ, ಸಲ್ಮಾನ್​ ಖಾನ್​ ಇಲ್ಲೇ ಇದ್ದಾನೆ! ಕತ್ರಿನಾ ಕೈಫ್​ ಉತ್ತರಕ್ಕೆ ಫ್ಯಾನ್ಸ್​ ಸುಸ್ತು...

ಗಂಡ ಹೊರಗಿದ್ದಾನೆ,  ಸಲ್ಮಾನ್​ ಖಾನ್​ ಇಲ್ಲೇ ಇದ್ದಾನೆ ಎಂದು ಫ್ಯಾನ್ಸ್​ಗೆ ಹೇಳಿದ ನಟಿ ಕತ್ರಿನಾ ಕೈಫ್. ನಟಿಯ ಉತ್ತರ ಕೇಳಿ ಸುಸ್ತಾಗಿದ್ದಾರೆ ಫ್ಯಾನ್ಸ್​
 

Katrina Kaifs Witty Reply  Whereabouts Of  Vicky Kaushal And Salman Khan suc
Author
First Published Nov 21, 2023, 12:00 PM IST

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್​ ಅಭಿನಯದ ಟೈಗರ್ 3 ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. 300 ಕೋಟಿ ರೂಪಾಯಿ ಬಜೆಟ್​ನಲ್ಲಿ ತಯಾರಿಸಲಾಗಿರುವ ಈ ಚಿತ್ರ ಇದೇ 12ರಂದು ಬಿಡುಗಡೆಯಾಗಿದೆ.  ಚಿತ್ರವು ಬಿಡುಗಡೆಯಾದ ಮೊದಲ  ಎರಡೇ ದಿನಗಳಲ್ಲಿ ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ಭರ್ಜರಿಯಾಗಿ ಓಡುತ್ತಿದೆ. ಟೈಗರ್ 3 ಸಿನಿಮಾ  ಆ್ಯಕ್ಷನ್ ಸಿನಿಮಾ ಆಗಿದೆ. ಕತ್ರಿನಾ ಕೈಫ್​ ಅವರ ತುಂಡು ಟವಲ್​ನಲ್ಲಿ ನಡೆಸಿದ ಫೈಟಿಂಗ್​ ಸೀನ್​, ಚಿತ್ರ ಬಿಡುಗಡೆಗೂ ಮುನ್ನವೇ ಸಕತ್​ ಹವಾ ಸೃಷ್ಟಿಸಿತ್ತು. ಚಿತ್ರದಲ್ಲಿಯೂ ಕತ್ರಿನಾ ಅವರ ಆ್ಯಕ್ಷನ್ ದೃಶ್ಯಗಳನ್ನು ಪ್ರೇಕ್ಷಕರು ಮೆಚ್ಚಿದ್ದಾರೆ.  ಇಮ್ರಾನ್ ಹಶ್ಮಿ ವಿಲನ್ ಆಗಿ ನಟಿಸಿದ್ದು,  ಹಿಂದೆಂದೂ ನೋಡಿರದ ಅವತಾರ ಕಂಡು ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

ಇದೇ ಸಂದರ್ಭದಲ್ಲಿ ಕತ್ರಿನಾ ಕೈಫ್​ ಅವರು ತಮ್ಮ ಅಭಿಮಾನಿಗಳ ಜೊತೆ ಆಸ್ಕ್​ ಎನಿಥಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಭಿಮಾನಿಗಳು ಏನಾದರೂ ಪ್ರಶ್ನೆ ಕೇಳಬಹುದು ಎಂದು ಅವರು ಆಫರ್​ ಕೊಟ್ಟಿದ್ದಾರೆ. ಕಳೆದ ಅನೇಕ ತಿಂಗಳುಗಳಿಂದ ನಟ ಶಾರುಖ್​ ಖಾನ್​ ಅವರೂ ಇಂಥದ್ದೊಂದು ಸೆಷನ್​ ನಡೆಸುತ್ತಿದ್ದು, ಇದೀಗ ಕತ್ರಿನಾ ಕೂಡ ಶುರು ಮಾಡಿದ್ದಾರೆ. ಇಷ್ಟು ಆಫರ್​ ಕೊಟ್ರೆ ಅಭಿಮಾನಿಗಳು ಕೇಳಬೇಕೆ? ಒಂದಕ್ಕಿಂತ ಒಂದು ಪ್ರಶ್ನೆ ಕೇಳುತ್ತಿದ್ದಾರೆ. ಕೆಲವು ತಮಾಷೆಯ ಪ್ರಶ್ನೆಗಳೂ ಇದ್ದು, ನಟಿ ಅದಕ್ಕೆ ತಮಾಷೆಯ ಉತ್ತರವನ್ನೇ ನೀಡುತ್ತಿದ್ದಾರೆ.  ಕತ್ರಿನಾ ಅವರು, 'ನಾವಿಬ್ಬರೂ ರಾತ್ರಿಯಲ್ಲಿ ಎರಡು ಹಡಗುಗಳಂತೆ ಆಗಿದ್ದೇವೆ. ನಾನು ಟೈಗರ್ 3 ಚಿತ್ರದ ಬಿಡುಗಡೆ ಬಳಿಕ ಸಂದರ್ಶನಗಳನ್ನು ಮುಗಿಸಿ ಮನೆಗೆ ವಾಪಸ್ಸಾದರೆ, ನನ್ನ ಗಂಡ ವಿಕ್ಕಿ ಬಿಡುಗಡೆಗೆ  ಸಿದ್ಧವಾಗಿರುವ ತಮ್ಮ ಮುಂಬರುವ ಸಾಮ್ ಬಹಾದೂರ್ ಚಿತ್ರದ ಪ್ರಮೋಶನ್‌ಗೆಂದು ಕೋಲ್ಕತಾಗೆ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ ನಾವು ಇಬ್ಬರೂ ರಾತ್ರಿ ಒಟ್ಟಿಗೇ ಮನೆಯಲ್ಲಿ ಇರುವುದೇ ಅಪರೂಪ ಎಂಬಂತಾಗಿದೆ' ಎಂದಿದ್ದರು. ಇದಕ್ಕೆ ಫ್ಯಾನ್ಸ್​ ಸಕತ್​ ತಮಾಷೆಯ ಉತ್ತರ ನೀಡಿ, ಹೀಗಾದ್ರೆ ಮಕ್ಕಳಾಗೋದು ಹೇಗೆ ಎಂದು ಪ್ರಶ್ನಿಸಿದ್ದರು.

ನಾನು ಮನೆಗೆ ಬಂದಾಗ ವಿಕ್ಕಿ ಹೊರ ಹೋಗ್ತಾನೆ, ಒಟ್ಟಿಗೆ ರಾತ್ರಿ ಕಳೆಯೋಲ್ಲ: ಕತ್ರೀನಾ ಹಿಂಗಾದ್ರೆ ಮಗು ಆಗೋದ್ಹೇಗೆ ಕೇಳಿದ ಫ್ಯಾನ್ಸ್
 
ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ತರ್ಲೆ ಫ್ಯಾನ್ಸ್​, ನಿಮ್ಮ ಪತಿ ಹಾಗೂ ಸಲ್ಮಾನ್​ ಖಾನ್​ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಟೈಗರ್​-3 ಚಿತ್ರದಲ್ಲಿ ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಜೊತೆಯಾಗಿ ನಟಿಸಿರುವ ಕಾರಣ ಈ ಪ್ರಶ್ನೆ ಸಹಜ ಎನ್ನಿಸಿದರೂ, ಅಸಲಿಗೆ ಕತ್ರಿನಾ ಅವರ ಹೆಸರು ಈ ಮೊದಲು ಸಲ್ಮಾನ್​ ಖಾನ್​ ಜೊತೆ ಬಹಳವಾಗಿ ಕೇಳಿಬಂದಿತ್ತು. ಇವರಿಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂದೇ ಹೇಳಲಾಗಿತ್ತು. ಕತ್ರಿನಾ ಅವರು ವಿಕ್ಕಿ ಜೊತೆ ಮದುವೆಯಾಗುವವರೆಗೂ ಸಲ್ಮಾನ್​ ಜೊತೆ ಇವರ ಹೆಸರು ಥಳಕು ಹಾಕಿಕೊಂಡಿತ್ತು. ಇದೇ ಕಾರಣಕ್ಕೆ ಫ್ಯಾನ್ಸ್ ಈ ತರ್ಲೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಟಿ ಕತ್ರಿನಾ ಸ್ವಲ್ಪ ತರ್ಲೆಯಾಗಿಯೇ ಉತ್ತರಿಸಿದ್ದಾರೆ.

ಅಷ್ಟಕ್ಕೂ ಸದ್ಯ ವಿಕ್ಕಿ ಕೌಶಲ್ ತಮ್ಮ ಮುಂಬರುವ 'ಸ್ಯಾಮ್ ಬಹಾದ್ದೂರ್​' ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪತಿಯ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ, ಅವರು  'ಸ್ಯಾಮ್ ಬಹಾದ್ದೂರ್​' ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ ಎಂದು ಸರಿಯಾಗಿ ಉತ್ತರಿಸಿದ್ದಾರೆ. ಇದೇ ವೇಳೆ ಸಲ್ಮಾನ್​ ಖಾನ್​ ಅವರ ಕುರಿತು ಕೇಳಿದ ಪ್ರಶ್ನೆಗೆ ಕತ್ರಿನಾ, ಮನೆಯಲ್ಲಿ ಇದ್ದಾರೆ. ಅವರ ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ ಇದೆ. ಊಟ ಮಾಡಿ ಕಾಫಿ ಕುಡಿಯುತ್ತಿದ್ದಾರೆ. ನಿಮಗಾಗಿ ಸೆಲ್ಫೀ ತೆಗೆದು ಕೊಟ್ಟಿದ್ದಾರೆ ನೋಡಿ ಎಂದು  ಫೋಟೋ ಒಂದನ್ನು ಶೇರ್​ ಮಾಡಿದ್ದಾರೆ. ಅಷ್ಟಕ್ಕೂ ಟೈಗರ್​ 3 ಪ್ರಮೋಷನ್​ ಸಮಯದಲ್ಲಿ ಹೂ ಗುಚ್ಛವನ್ನು ತಂದು ಸಲ್ಮಾನ್​ ಖಾನ್​ ವಿಕ್ಕಿಗೆ ನೀಡಿದ್ದರು. ಆದರೆ ಅದು ಅಸಲಿಗೆ ಕತ್ರಿನಾ ಅವರಿಗೆ ಆಗಿತ್ತು. ಇದೇ ಕಾರಣಕ್ಕೆ ಇದೇ ಹೂಗುಚ್ಛದಿಂದಲೇ ನಿನಗೆ ಹೊಡೆಯುತ್ತೇನೆ ನೋಡು ಎಂದು ವಿಕ್ಕಿ ತಮಾಷೆ ಮಾಡಿದ್ದರು. ಇದೀಗ ಕತ್ರಿನಾ ಕೈಫ್​ ಗಂಡ ಹೊರಗೆ ಇದ್ದಾನೆ, ಸಲ್ಮಾನ್​ ಮನೆಯಲ್ಲಿ ಇದ್ದಾನೆ ಎನ್ನುವುದಷ್ಟನ್ನೇ ಉಲ್ಲೇಖಿಸಿ ತಮಾಷೆ ಮಾಡುತ್ತಿದ್ದಾರೆ. 

Tiger-3 ಯಾವ ನಟಿಯ ಟವಲ್​ ಮೊದಲು ಬಿಚ್ಚಿ ​ಹೋಗತ್ತೆ? ಜಾಲತಾಣದಲ್ಲಿ ಓಪನ್​ ಚಾಲೆಂಜ್!​

Follow Us:
Download App:
  • android
  • ios