ಟೈಗರ್​-3 ಚಿತ್ರದಲ್ಲಿ ನಟಿ ಕತ್ರಿನಾ ಕೈಫ್​ ಅವರು ಟವಲ್​ ಸುತ್ತಿಕೊಂಡು ಫೈಟ್​ ಮಾಡುವ ದೃಶ್ಯವಿದ್ದು, ಇದರ ಬಗ್ಗೆ ಓಪನ್​ ಚಾಲೆಂಜ್​ ಶುರುವಾಗಿದೆ. ಏನದು? 

ಬಾಲಿವುಡ್‌ನಲ್ಲಿ ‘ಬಾಕ್ಸ್‌ ಆಫೀಸ್ ಟೈಗರ್’ ಎಂದೇ ಖ್ಯಾತಿ ಪಡೆದಿರುವ ನಟ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಟೈಗರ್​-3 ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ವಾರ ಇದರ ಟ್ರೇಲರ್​ ಬಿಡುಗಡೆಯಾಗಿತ್ತು. ಇದರಲ್ಲಿ ಕತ್ರಿನಾ ಕೈಫ್​ ನೋಡಿ ಫ್ಯಾನ್ಸ್​ ಉಫ್​ ಎಂದಿದ್ದರು. ಏಕೆಂದರೆ, ಆ್ಯಕ್ಷನ್​ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕತ್ರಿಕಾ, ಈ ಟ್ರೇಲರ್​ನಲ್ಲಿ ಒಂದು ಹೆಜ್ಜೆ ಮುಂದೆಯೇ ಹೋಗಿದ್ದರು. ಚಿತ್ರದ ಟ್ರೇಲರ್​ ನೋಡಿದರೆ, ಫ್ಯಾಮಿಲಿ ಕಥೆ ಎಂದು ಎನಿಸುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಆ್ಯಕ್ಷನ್ ಸೀನ್​ಗಳು ಟ್ರೇಲರ್​ ಉದ್ದಕ್ಕೂ ಇವೆ. ಇದರಲ್ಲಿ ಗಮನ ಸೆಳೆದಿರುವುದು ಕತ್ರಿನಾ ಕೈಫ್​ ಅವರು ಚಿಕ್ಕ ಟವಲ್​ ಧರಿಸಿ ಫೈಟಿಂಗ್​ ಮಾಡುವ ದೃಶ್ಯ! ಅಷ್ಟಕ್ಕೂ ಅವರು ಇನ್ನೋರ್ವ ನಟಿ ಮಿಚೆಲ್ ಜೊತೆ ಭರ್ಜರಿ ಫೈಟಿಂಗ್​ ಮಾಡಿದ್ದಾರೆ. ಆ ಯುವತಿ ಕೂಡ ಇವರಂತೆಯೇ ಚಿಕ್ಕ ಟವೆಲ್ ಸುತ್ತಿಕೊಂಡಿದ್ದಾರೆ. ಫೈಟಿಂಗ್​ ವೇಳೆ ಈ ಟವಲ್​ಗಳನ್ನು ಇಬ್ಬರೂ ಎಳೆದಾಡಿದ್ದಾರೆ!ಇದನ್ನು ನೋಡಿ ಉಫ್​ ಇನ್ನು ಈ ಕಣ್ಣಿನಿಂದ ಇನ್ನು ಏನೇನು ನೋಡಬೇಕೋ ಎಂದು ಸಿನಿ ಪ್ರಿಯರು ಹೇಳುತ್ತಿದ್ದರು. 

Add Asianetnews Kannada as a Preferred SourcegooglePreferred

ಟೈಗರ್ 3’ ಚಿತ್ರವನ್ನು ಟರ್ಕಿ, ಆಸ್ಟ್ರಿಯಾ, ರಷ್ಯಾ ಮುಂತಾದ ಕಡೆ ಚಿತ್ರೀಕರಿಸಲಾಗಿದೆ. ‘ಟೈಗರ್ 3’ ಚಿತ್ರದಲ್ಲಿ ರಾ ಏಜೆಂಟ್‌ ಅವಿನಾಶ್ ಸಿಂಗ್ ರಾಥೋಡ್ ಅಲಿಯಾಸ್ ಟೈಗರ್ ಆಗಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಝೋಯಾ ಪಾತ್ರಕ್ಕೆ ಕತ್ರಿನಾ ಕೈಫ್ ಜೀವ ತುಂಬಿದ್ದಾರೆ. ಇದೇ ಟವಲ್​ ಫೈಟಿಂಗ್​ ದೃಶ್ಯ ಇಟ್ಟುಕೊಂಡು ಜಾಲತಾಣದಲ್ಲಿ ಓಪನ್​ ಚಾಲೆಂಜ್​ ಶುರುವಾಗಿದೆ. ಅದೇನೆಂದರೆ ಕತ್ರಿನಾ ಮತ್ತು ಮಿಚೆಲ್ ಅವರು ಇಬ್ಬರೂ ಟವಲ್​ ಸುತ್ತಿಕೊಂಡು ರಾಜಾರೋಷವಾಗಿ ಫೈಟಿಂಗ್​ ಮಾಡುತ್ತಿದ್ದಾರೆ. ಈ ಫೈಟಿಂಗ್​ ದೃಶ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಯಾರ ಟವಲ್​ ಮೊದಲು ಬಿಚ್ಚುತ್ತದೆ ಎಂದು ಪ್ರಶ್ನಿಸಲಾಗಿದೆ. ಯಾರು ಇದರಲ್ಲಿ ವಿನ್​ ಆಗುತ್ತಾರೆ ಎಂದೂ ಪ್ರಶ್ನಿಸಲಾಗಿದೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಕೆಲವರು ಕತ್ರಿನಾ ಹೆಸರು ಹೇಳಿದರೆ, ಇನ್ನು ಕೆಲವರು ಮಿಚೆಲ್ ಅವರ ಹೆಸರು ಹೇಳುತ್ತಿದ್ದಾರೆ. ಯಾರ ಟವಲ್​ ಬಿಚ್ಚಿದರೂ ಚಿತ್ರದ ಹೀರೋ ಸಲ್ಮಾನ್​ ಖಾನ್ ಗೆಲ್ಲೋದು ಎಂದು ಕೆಲವರು ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಯಾರೇ ಗೆಲ್ಲಲಿ, ಅದು ಮುಂದಿನ ಮಾತು ಮೊದಲು ಈ ಫೈಟಿಂಗ್​ ಗಂಟೆಗಟ್ಟಲೆ ಮುಂದುವರೆಯಲಿ ಎಂದಿದ್ದಾರೆ. ಇನ್ನು ಕೆಲವರು ಈ ದೃಶ್ಯ ನೋಡಿದ ಮೇಲೆ ಟೈಗರ್​-3 ಚಿತ್ರ ಬಿಡುಗಡೆಗೆ ಕಾಯುತ್ತಿದ್ದೇವೆ ಎಂದಿದ್ದಾರೆ. 

Karachi to Noida: ಪ್ರೀತಿಗಾಗಿ ಪಾಕ್​ನಿಂದ ಬಂದ 4 ಮಕ್ಕಳ ತಾಯಿ ಸೀಮಾ ಹೈದರ್​ 'ರಾ' ಏಜೆಂಟ್​? ಏನಿದು ಟ್ವಿಸ್ಟ್​?

ಟೈಗರ್ 3 ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಮಿಂಚಿದ್ದಾರೆ. ಟ್ರೇಲರ್ನಲ್ಲಿ ಇಮ್ರಾನ್ ಹಶ್ಮಿ ಅವರ ವಾಯ್ಸ್ ಓವರ್ ಕೂಡ ಇದೆ. ಟ್ರೇಲರ್​ನಲ್ಲಿ ಬಂದು ಇಳಿಯುವ ದೃಶ್ಯವೂ ಇದೆ. ಜೊತೆಗೆ ಟ್ರೇಲರ್​ನ ಒಂದು ದೃಶ್ಯದಲ್ಲಿ ಕತ್ರಿನಾ ಅವರು ಇನ್ನಾದರದ್ದೋ ಭುಜದ ಮೂಲಕ ಫೈರಿಂಗ್ ಮಾಡುವುದನ್ನು ನೋಡಬಹುದು. ಒಟ್ಟಿನಲ್ಲಿ ಕತ್ರಿನಾರ ವಿಭಿನ್ನ ರೀತಿಯ ಆ್ಯಕ್ಷನ್​ ಫ್ಯಾನ್ಸ್​ಗೆ ಥ್ರಿಲ್​ ನೀಡುತ್ತಿದೆ. ಅಂದಹಾಗೆ ಟೈಗರ್​ -3 ಯನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ ಮತ್ತು ಆದಿತ್ಯ ಚೋಪ್ರಾ ಕಥೆ ಬರೆದಿದ್ದಾರೆ. ಪಠಾಣ್ ಚಿತ್ರದಲ್ಲಿ ಸಲ್ಮಾನ್ ಖಾನ್ ಮಾಡಿದಂತೆಯೇ ಟೈಗರ್ 3 ನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.


 ಕಳೆದ ಮಾರ್ಚ್​ನ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಸಲ್ಮಾನ್​ ಖಾನ್​ ಈ ಹಿಂದೆ ಘೋಷಣೆ ಮಾಡಿದ್ದರು. ಹೀಗೆ ಮಾಡಿದರೆ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತೆ ಅನ್ನೋದು ಸಲ್ಮಾನ್ ಖಾನ್ ಅವರ ನಂಬಿಕೆ. ಇದಕ್ಕೆ ಕಾರಣವೂ ಇದೆ. ಈದ್ ಹಬ್ಬದ ಸಮಯದಲ್ಲೇ ಬಿಡುಗಡೆಯಾದ ‘ವಾಂಟೆಡ್‌’, ‘ದಬಂಗ್’, ‘ಬಾಡಿಗಾರ್ಡ್’, ‘ಏಕ್ ಥಾ ಟೈಗರ್’, ‘ಕಿಕ್’ ‘ಭಜರಂಗಿ ಭಾಯ್‌ಜಾನ್’, ‘ಸುಲ್ತಾನ್’ ಸಿನಿಮಾಗಳು ಸೂಪರ್ ಡ್ಯೂಪರ್ ಹಿಟ್ ಆಗಿದ್ದವು. ಇದೀಗ ಮತ್ತೊಮ್ಮೆ ‘ರಂಜಾನ್’ ಹಬ್ಬದ ಮೇಲೆಯೇ ನಟ ಸಲ್ಮಾನ್ ಖಾನ್ ಕಣ್ಣು ಹಾಕಿದ್ದರು. ಆದರೆ ಇದೀಗ ಚಿತ್ರ ನವೆಂಬರ್​ 12ರಂದು ಬಿಡುಗಡೆಯಾಗುವುದಾಗಿ ಹೇಳಲಾಗಿದೆ. ನವೆಂಬರ್​ 5ರಿಂದ ಬುಕಿಂಗ್​ ಶುರುವಾಗಲಿದೆ. 

ಕಂಗನಾ ದೀದಿ ಕೈಮುಗಿತೇನೆ, ನಿಮ್ಮ ಚಿತ್ರಗಳನ್ನು ಥಿಯೇಟರ್​ನಲ್ಲಿ ಬಿಡುಗಡೆ ಮಾಡ್ಬೇಡಿ ಎಂದ ಕೆಆರ್​ಕೆ!

View post on Instagram