Asianet Suvarna News Asianet Suvarna News

Sooryavanshi: ತನ್ನ ಬಗ್ಗೆ ದೂರು ಹೇಳಿದ ಅಕ್ಷಯ್ ಪಾದ ಮುಟ್ಟಿದ ಕತ್ರೀನಾ

  • Sooryavanshi: ಅಕ್ಷಯ್ ಕುಮಾರ್ ಪಾದ ಮುಟ್ಟಿ ನಮಸ್ಕರಿಸಿದ ಕತ್ರೀನಾ ಕೈಫ್
  • ಕಪಿಲ್ ಶರ್ಮಾ ಶೋನಲ್ಲಿ ಇವರದ್ದೇನಪ್ಪಾ ಹೊಸ ಆಟ ?
Katrina Kaif touches Akshay Kumars feet after he complains about her to Kapil Sharma dpl
Author
Bangalore, First Published Nov 7, 2021, 6:55 PM IST
  • Facebook
  • Twitter
  • Whatsapp

ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಭಾನುವಾರದ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಚಿಕೆಯ ಪ್ರೀಮಿಯರ್‌ಗೆ ಮುಂಚಿತವಾಗಿ, ಹೊಸ ಪ್ರೋಮೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು ಇದರಲ್ಲಿ ಕತ್ರಿನಾ ಅಕ್ಷಯ್ ಅವರ ಪಾದಗಳನ್ನು ಸ್ಪರ್ಶಿಸುತ್ತಿರುವುದನ್ನು ಕಾಣಬಹುದು.

ಅಕ್ಷಯ್ ಹಾಗೂ ಕತ್ರೀನಾ ತಮ್ಮ ಲೇಟೆಸ್ಟ್ ರಿಲೀಸ್ ಸೂರ್ಯವಂಶಿ ಚಿತ್ರದ ಪ್ರಚಾರಕ್ಕಾಗಿ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ. ರೋಹಿತ್ ಶೆಟ್ಟಿ ನಿರ್ದೇಶನದ, ಸೂರ್ಯವಂಶಿ, 'ಕಾಪ್ ಯೂನಿವರ್ಸ್' ನಲ್ಲಿ ಅಕ್ಷಯ್ ಕುಮಾರ್ ಅವರ ಚೊಚ್ಚಲ ಚಿತ್ರವಾಗಿದೆ.

Sooryavanshi: ಮೊದಲ ದಿನವೇ ಭರ್ಜರಿ 26 ಕೋಟಿಬಾಚಿದ ಅಕ್ಷಯ್ ಸಿನಿಮಾ

ಇನ್‌ಸ್ಟಾಗ್ರಾಮ್‌ನಲ್ಲಿ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಹಂಚಿಕೊಂಡ ಪ್ರೋಮೋದಲ್ಲಿ, ಕತ್ರಿನಾ ಕೈಫ್ ಕಪಿಲ್ ಶರ್ಮಾ ಮತ್ತು ಅರ್ಚನಾ ಪುರಾನ್ ಸಿಂಗ್ ಅವರನ್ನು ಅಭಿನಂದಿಸಿದರು. ಆದರೆ ಅಕ್ಷಯ್ ಕುಮಾರ್ ಅವರನ್ನು ಏನೂ ಹೇಳಲಿಲ್ಲ. ಅಕ್ಷಯ್ ಕತ್ರೀನಾಳಿಂದ ಸ್ಪಷ್ಟವಾಗಿ ಅತೃಪ್ತಿ ಹೊಂದಿದ್ದ. ತಕ್ಷಣವೇ ಅದನ್ನು ಹೇಳಿ ತೋರಿಸಿದ್ದಾರೆ.

ನೀವೆಲ್ಲರೂ ಏನನ್ನಾದರೂ ಗಮನಿಸಿದ್ದೀರಾ? ಅವಳು ಬಂದು ಎಲ್ಲರಿಗೂ ನಮಸ್ಕಾರ ಮಾಡಿದಳು ಆದರೆ ನನಗೆ ಅಲ್ಲ ಎಂದು ಅವರು ಹೇಳಿದ್ದಾರೆ.

ಕತ್ರಿನಾ ಒಪ್ಪಿಗೆ ಸೂಚಿಸಿದರು. ತಕ್ಷಣವೇ ಸರಿ ಮಾಡಲು ಪ್ರಯತ್ನಿಸಿದರು. ಇಲ್ಲ, ಇಲ್ಲ, ನೀವು ಹೇಳಿದ್ದು ಸರಿ ಎಂದು ಅವಳು ಅಕ್ಷಯ್ ಅವರ ಪಾದಗಳನ್ನು ಮುಟ್ಟಿದ್ದಾರೆ. ಅಕ್ಷಯ್ ತಮಾಷೆ ಮಾಡಿ, ಇದನ್ನು ನೋಡಿ, ಹಿರಿಯರಿಗೆ ಗೌರವ ಕೊಡೋದು ಎಂದಿದ್ದಾರೆ.

'ಆ' ಒಂದು ಘಟನೆಯಿಂದ ಪಬ್ಲಿಕ್‌ನಲ್ಲೇ ಅಕ್ಷಯ್‌ ಕಾಲಿಗೆ ಬಿದ್ದು ಕ್ಷಮೆ ಕೇಳಿದ ರಣವೀರ್!

ಈ ವಾರದ ಆರಂಭದಲ್ಲಿ ಅಕ್ಷಯ್ ಮತ್ತು ಕತ್ರಿನಾ ಶೋಗಾಗಿ ಚಿತ್ರೀಕರಿಸಿದ್ದಾರೆ. ಮುಂಬೈನಲ್ಲಿನ ಸೆಟ್‌ನ ಹೊರಗೆ ಇಬ್ಬರು ಪಾಪರಾಜಿಗಾಗಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಒಂದು ಹಂತದಲ್ಲಿ, ಅಕ್ಷಯ್ ಕತ್ರಿನಾಳನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡರು. ಅವರು ಪರಸ್ಪರರ ಕಣ್ಣುಗಳನ್ನು ನೋಡುತ್ತಿದ್ದರು.

ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಅವರ ವಿಶೇಷ ಪಾತ್ರಗಳನ್ನು ಒಳಗೊಂಡಿರುವ ಸೂರ್ಯವಂಶಿ, ಎರಡನೇ ಲಾಕ್‌ಡೌನ್ ನಂತರ ಮಹಾರಾಷ್ಟ್ರದಲ್ಲಿ ಥಿಯೇಟರ್‌ಗಳು ಪುನಃ ತೆರೆದ ನಂತರ ಬಿಡುಗಡೆಯಾದ ಮೊದಲ ಚಲನಚಿತ್ರವಾಗಿದೆ. ಮೊದಲ ದಿನವೇ ಚಿತ್ರ ₹26.29 ಕೋಟಿ ಕಲೆಕ್ಷನ್ ಮಾಡಿದೆ. ಶನಿವಾರದಂದು ಚಿತ್ರ ₹23.85 ಕೋಟಿ ಕಲೆಕ್ಷನ್ ಮಾಡಿದ್ದು, ಎರಡೇ ದಿನಗಳಲ್ಲಿ ₹50 ಕೋಟಿ ಕ್ಲಬ್ ಸೇರಿದೆ.

ದೇಶದ ಹಲವು ಭಾಗಗಳಲ್ಲಿ ಕೊರೋನಾ(COVID19) ಕಾರಣ ಚಿತ್ರಮಂದಿರಗಳಲ್ಲಿ ಶೇ.50 ಸಿಟ್ಟಿಂಗ್‌ಗೆ ಅವಕಾಶವಿರುವ ಹೊರತಾಗಿಯೂ ರೋಹಿತ್ ಶೆಟ್ಟಿ(Rohith Shetty) ಅವರ ಸೂರ್ಯವಂಶಿ(Sooryavanshi) ಥಿಯೇಟರ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಕ್ಷಯ್ ಕುಮಾರ್ (Akshay Kumar)ಕತ್ರೀನಾ ಕೈಫ್ ಜೋಡಿಯ ಪೊಲೀಸ್ ಸಿನಿಮಾ ಸೂರ್ಯವಂಶಿ ಮೊದಲ ದಿನವೇ ಭರ್ಜರಿ 26.29 ಕೋಟಿ ಬಾಚಿಕೊಂಡಿದೆ. ದೇಶಾದ್ಯಂತ ಮೊದಲ ದಿನದ ಪ್ರದರ್ಶನದ ಗಳಿಕೆ ಇದು.

ಮೊದಲವಾರದ ಸಿನಿಮಾ ಗಳಿಕೆಯಲ್ಲಿ ಶೇ.60 ತಮಗೆ ನೀಡಬೇಕು ಹಾಗೂ ಥಿಯೇಟರ್‌ಗಳಲ್ಲಿ ಸೂರ್ಯವಂಶಿ ಗರಿಷ್ಠ ಶೋಗಳನ್ನು ನೀಡಬೇಕೆಂದು ನಿರ್ಮಾಪಕರು ಬೇಡಿಕೆ ಇಟ್ಟಿದ್ದರು. ನಂತರ ನಿರ್ಮಾಪಕರು ಹಾಗೂ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ನಡುವಿನ ಮನಸ್ತಾಪ ಕೊನೆಯಾಗಿದೆ.

ಕಳೆದ ಕೆಲವು ವಾರಗಳಿಂದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್  ವಿವಾಹದ ವಿವರಗಳ ಬಗ್ಗೆ ಸಾಕಷ್ಟು ವರದಿಗಳು ಹರಿದಾಡುತ್ತಿವೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಕುರಿತು ಪ್ರಕಟವಾದ ಹಲವು ವರದಿಗಳ ಪ್ರಕಾರ, ಡಿಸೆಂಬರ್ 7 ಅಥವಾ 9 ರಂದು ಸವಾಯಿ ಮಾಧೋಪುರದ ರೆಸಾರ್ಟ್ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಅದ್ಧೂರಿ ವಿವಾಹ ನಡೆಯಲಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios