ಡಿಂಪಲ್‌ ಕ್ವೀನ್‌ ದೀಪಿಕಾ ಪಡುಕೋಣೆ ಪತಿ ರಣವೀರ್‌ ಸಿಂಗ್‌ ತನ್ನ ನಡೆ-ನುಡಿಗೆ ಅದೆಷ್ಟೋ ಹೆಣ್ಣ ಮಕ್ಕಳು ಫಿದಾ ಆಗಿದ್ದಾರೆ. 

ಇತ್ತೀಚಿಗೆ 'ಸೂರ್ಯವಂಶಿ' ಚಿತ್ರದ ಪ್ರಮೋಷನ್‌ ಕಾರ್ಯಕ್ರಮ ನಡೆಯಿತು. ಚಿತ್ರನಟರಾದ ಅಕ್ಷಯ್‌ ಕುಮಾರ್‌, ಅಜಯ್ ದೇವಗನ್, ಕತ್ರಿನಾ ಕೈಫ್‌, ಕರಣ್‌ ಜೋಹಾರ್‌ ಹಾಗೂ ನಿರ್ದೇಶಕ ರೋಹಿತ್‌ ಶೆಟ್ಟಿ ಮೊದಲೇ ಆಗಮಿಸಿದ್ದರೂ ರಣವೀರ್‌ ಸಿಂಗ್‌ ಮಾತ್ರ ಬಂದಿರಲಿಲ್ಲ. ರಣವೀರ್‌ಗಾಗಿ ಗೆಸ್ಟ್‌ ರೂಂನಲ್ಲಿ ಗಣ್ಯರು ಕಾಯಬೇಕಾಗಿತ್ತು. 

ಇದೇನಪ್ಪಾ ದೀಪಿಕಾ ಪಡುಕೋಣೆಗೆ ಇಂಥ ಡ್ರೆಸ್‌ ಕೊಡ್ಸೋದಾ ಪತಿ ರಣವೀರ್‌ ಸಿಂಗ್?

ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕೆ ರಣವೀರ್‌ ಸಿಂಗ್‌ ಸಾರ್ವಜನಿಕವಾಗಿ ವೇದಿಕೆ ಮೇಲೆ ಹಿರಿಯ ಕಲಾವಿದರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಹಾಗೂ ಕತ್ರಿನಾಳನ್ನು ತಬ್ಬಿಕೊಂಡಿದ್ದಾರೆ. 'ನಾಲ್ಕು ಹಿರಿಯ ಕಲಾವಿದರನ್ನು 45 ನಿಮಿಷಕ್ಕೂ ಹೆಚ್ಚು ಕಾಲ ಕಾಯುವಂತೆ ಮಾಡಿದ ಜ್ಯೂನಿಯರ್‌ ನಟ' ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಅಲ್ಲಿಗೆ ಸುಮ್ಮನಾಗದ ರಣವೀರ್‌ ಸಿಂಗ್‌ 'ಸರ್‌, ನಾನು ಬರುವ ದಾರಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ ಅದಕ್ಕೆ ತಡವಾಯಿತು' ಎಂದರು. 'ಮನೆ ಪಕ್ಕದಲ್ಲೇ ಇದ್ದುಕೊಂಡು ತಡ ಮಾಡಿದ್ಯಾ?' ಎಂದು ರಣವೀರ್‌ಗೆ, ಅಕ್ಷಯ್ ಟಾಂಗ್‌ ನೀಡಿದ್ದಾರೆ. 

ಇಷ್ಟೆಲ್ಲಾ ಬ್ರ್ಯಾಂಡ್ ರಾಯಭಾರಿ ದೀಪಿಕಾ ಆಗಿದ್ದಾಳೆಂದರೆ IT ಕಥೆ?

'ಸರ್ ನಾನು ಬರುವುದು ಕಾರಿನಲ್ಲಿ. ನಿಮ್ಮ ಹಾಗೆ ಹೆಲಿಕಾಪ್ಟರ್‌ನಲ್ಲಲ್ಲ ಎಂದಾಗ ಅಕ್ಷಯ್ ಕೋಪಗೊಳ್ಳುತ್ತಾರೆ.  'ನಿನಗೆ ಇದರ ಬಗ್ಗೆ ಮಾತನಾಡಲು ಯೋಗ್ಯತೆಯೇ ಇಲ್ಲ. ಯಾರಾದರೂ 45 ನಿಮಿಷ ತಡ ಮಾಡ್ತಾರಾ'?  ಎಂದು ಗದರಿದ್ದಾರೆ.

ಇದಕ್ಕೆ ತಮಾಷೆಯಾಗಿ ರಣ್ವೀರ್‌ ನಾನು 'ಬಾತ್‌ರೂಂಗೆ ಹೋಗಿ ಬಚ್ಚಿಟ್ಟುಕೊಳ್ಳುತ್ತೇನೆ' ಎಂದ. ಅದಕ್ಕೆ ಅಕ್ಷಯ್‌ ಕ್ಯಾಮೆರಾ ಮ್ಯಾನ್ ಕರೆದು 'ಅವನು ಏನು ಮಾಡುತ್ತಾನೆ ಅಂತ ಅವನ ಹಿಂದೆಯೇ ಹೋಗು' ಎಂದರಂತೆ. ಈ ಮಾತಿನ ಚಕಮಕಿಯಲ್ಲಿ ಅಕ್ಷಯ್ 'ಪತ್ನಿ ಊರಿನಲ್ಲಿರುವುದಕ್ಕೆ ರಣ್ವೀರ್‌ಗೆ ತಡವಾಗಿರಬೇಕು ' ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋಗೆ ನಟಿ ದೀಪಿಕಾ ಪಡುಕೋಣೆ ಪ್ರತಿಕ್ರಿಯಿಸಿದ್ದಾರೆ.' ಹೆಂಡತಿ ಮನೆಯಲ್ಲಿಯೇ ಇದ್ದರೂ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗುತ್ತಾನೆ' ಎಂದ ಕಾಮೆಂಟ್ ಮಾಡಿದ್ದಾರೆ.