IIFA 2022: ಅತ್ಯುತ್ತಮ ನಟಿ ಕೃತಿ, ನಟ ವಿಕ್ಕಿ ಕೌಶಲ್; ಇನ್ನು ಯಾರೆಲ್ಲ ಪ್ರಶಸ್ತಿ ಗೆದ್ದು ಬೀಗಿದ್ದಾರೆ, ಇಲ್ಲಿದೆ ಲಿಸ್ಟ್
2022ರ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ(IIFA 2022) ಜೂನ್ 3 ಮತ್ತು 2ರಂದು ಅದ್ದೂರಿಯಾಗಿ ನಡೆಯಿತು. ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ ಬಾಲಿವುಡ್ ತಾರೆಯರ ಫೋಟೋ ವೈರಲ್ ಆಗಿದೆ. ಅಬುಧಾಬಿಯಲ್ಲಿ ನಡೆದ ಈ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುತ್ತಿದೆ.
2022ರ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ(IIFA 2022) ಜೂನ್ 3 ಮತ್ತು 2ರಂದು ಅದ್ದೂರಿಯಾಗಿ ನಡೆಯಿತು. ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ ಬಾಲಿವುಡ್ ತಾರೆಯರ ಫೋಟೋ ವೈರಲ್ ಆಗಿದೆ. ಅಬುಧಾಬಿಯಲ್ಲಿ ನಡೆದ ಈ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುತ್ತಿದೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ IIFA 2022ರ ಅದ್ದೂರಿ ವೇದಿಕೆಯಲ್ಲಿ ಬಾಲಿವುಡ್‌ನ ಅನೇಕ ಮಂದಿ ಪ್ರಶಸ್ತಿ ಬೀಗಿದ್ದಾರೆ.
IIFA ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ಸುಂದರಿಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಟಿ ಐಶ್ವರ್ಯಾ ರೈ, ಅನನ್ಯಾ ಪಾಂಡೆ, ಜಾಕ್ವೆಲಿನ್ ಫರ್ನಾಂಡಿಸ್, ತಮನ್ನಾ, ಸಾರಾ ಅಲಿ ಖಾನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರ ಗಾರ್ಜಿಯಸ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸ್ಟೈಲಿಶ್ ಲುಕ್‌ನಲ್ಲಿ ಮಿಂಚುವ ಜೊತೆಗೆ ಅನೇಕ ಕಲಾವಿದರು ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.
IIFA 2022 - ಅಬುದಾಬಿಗೆ ಲಗ್ಗೆ ಇಟ್ಟ Salman Khan ಸೇರಿದಂತೆ ಬಾಲಿವುಡ್ ದಂಡು
IIFA 2022ರ ವಿಜೇತರ ಪಟ್ಟಿಯನ್ನು ಸಮಾರಂಭದಲ್ಲಿ ಘೋಷಣೆ ಮಾಡಲಾಯಿತು. ವಿಕ್ಕಿ ಕೌಶಲ್ ನಟನೆಯ ಸರ್ದಾರ್ ಉಧಮ್ ಸಿಂಗ್ , ಮಿಮಿ, ಶೇರ್‌ಶಾ ಸಿನಿಮಾಗಳು ಅತೀ ಹೆಚ್ಚು ಪ್ರಶಸ್ತಿ ಬಾಚಿಕೊಂಡಿವೆ. ಮೂರು ಪ್ರಶಸ್ತಿಗಳನ್ನು ಉಧಮ್ ಸಿಂಗ್ ಸಿನಿಮಾ ಗೆದ್ದುಕೊಂಡಿದೆ. ಅತ್ಯುತ್ತಮ ನಟ, ಛಾಯಾಗ್ರಹಣ, ಸಂಕಲನ ಸೇರಿದಂತೆ ಮೂರು ಪ್ರಶಸ್ತಿ ಸಿಕ್ಕಿದೆ. ಇನ್ನು ಆನಂದ್ ಎಲ್ ರೈ ಅವರ ಅತ್ರಂಗಿ ರೇ ಸಿನಿಮಾ ಕೂಡ ಹೆಚ್ಚು ಪ್ರಶಸ್ತಿ ಗೆದ್ದಿದೆ. ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.
IIFA Awards 2022 ಗ್ಲಾಮ್ ಲುಕ್‌ನಲ್ಲಿ ಕಂಗೊಳಿಸಿದ ಬಾಲಿವುಡ್ ಚೆಲುವೆಯರು!
ಅತ್ಯುತ್ತಮ ನಟ - ವಿಕ್ಕಿ ಕೌಶಲ್ (ಸರ್ದಾರ್ ಉಧಮ್ ಸಿಂಗ್
ಅತ್ಯುತ್ತಮ ನಟಿ - ಕೃತಿ ಸನೂನ್ (ಮಿಮಿ)
ಅತ್ಯುತ್ತಮ ನಿರ್ದೇಶಕ ವಿಷ್ಣುವರ್ಧನ್ (ಶೇರ್‌ಶಾ)
ಅತ್ಯುತ್ತಮ ಸಿನಿಮಾ - ಶೇರ್‌ಶಾ
ಅತ್ಯುತ್ತಮ ಗಾಯಕಿ - ಅನೀಸ್ ಕೌರ್ ( ಶೇರ್‌ಶಾ)
ಅತ್ಯುತ್ತಮ ಗಾಯಕ - ಜುಬಿನ್ ನೌಟಿಯಾಲ್ (ಶೇರ್‌ಶಾ)
ಉದಯೋನ್ಮುಖ ನಟ- ಅಹನ್ ಶೆಟ್ಟಿ (ತಡಪ್)
ಉದಯೋನ್ಮುಖ ನಟಿ - ಶರ್ವರಿ ವಾಗ್ (ಬಂಟಿ ಔರ್ ಬಬ್ಲಿ2)
ಅತ್ಯುತ್ತಮ ಪೋಷಕ ನಟಿ - ಸಾಯಿ ತಮಂಕರ್ (ಮಿಮಿ)
ಅತ್ಯುತ್ತಮ ಪೋಷಕ ನಟ - ಪಂಕಜ್ ತ್ರಿಪಾಠಿ (ಲೂಡೊ)