Asianet Suvarna News Asianet Suvarna News

ಪ್ರೀತಿಯಲ್ಲಿ ನಾನು ಅನ್‌ಲಕ್ಕಿ: ಲವ್ ಲೈಫ್ ಬಗ್ಗೆ ಕಾರ್ತಿಕ್ ಆರ್ಯನ್ ಹೀಗಂದಿದ್ದೇಕೆ?

 ಪ್ರೀತಿಯಲ್ಲಿ ನಾನು ಅನ್‌ಲಕ್ಕಿ ಎಂದು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹೇಳಿದ್ದಾರೆ. ಮದುವೆ ಪ್ಲಾನ್ ಬಗ್ಗೆಯೂ ಕಾರ್ತಿಕ್ ರಿವೀಲ್ ಮಾಡಿದ್ದಾರೆ.  

Kartik Aaryan says unlucky in love and he reveals marriage plans sgk
Author
First Published Jun 19, 2023, 10:55 AM IST

ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ತನ್ನ ಲವ್ ಲೈಫ್ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕಾರ್ತಿಕ್ ಹೆಸರು ಅನೇಕ ನಟಿಯರ ಜೊತೆ ಕೇಳಿ ಬಂದಿತ್ತು. ಆದರೆ ಗಾಸಿಪ್‌ಗಳ ಬಗ್ಗೆ ಕಾರ್ತಿಕ್ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಿನಿಮಾರಂಗದಲ್ಲಿ ಈ ರೀತಿಯ ಗಾಸಿಪ್ ಎಲ್ಲಾ ಕಾಮನ್. ಕಾರ್ತಿಕ್ ಹೆಸರು ನಟಿಯರಾದ ಸಾರಾ ಅಲಿ ಖಾನ್, ಕೃತಿ ಸನೊನ್ ಸೇರಿದಂತೆ ಅನೇಕರ ಜೊತೆ ಕೇಳಿ ಬಂದಿತ್ತು. ಸದ್ಯ ಕೃತಿ ಸನೊನ್ ಜೊತೆ ಕಾರ್ತಿಕ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಇತ್ತ ಕೃತಿ ಹೆಸರು ಪ್ರಭಾಸ್ ಜೊತೆಯೂ ಕೇಳಿ ಬರುತ್ತಿದೆ. 

ಕಾರ್ತಿಕ್ ಸದ್ಯ ಹೊಸ ಸಿನಿಮಾ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಸತ್ಯ ಪ್ರೇಮ್ ಕಿ ಕಥಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಪ್ರಮೋಷನ್ ನಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಜೊತೆ ಕಾರ್ತಿಕ್ ತೆರೆಹಂಚಿಕೊಂಡಿದ್ದಾರೆ. ಈ ನಡುವೆ ಕಾರ್ತಿಕ್ ಪ್ರೀತಿ ವಿಚಾರ ಮಾತನಾಡಿದ್ದಾರೆ. ಸತ್ಯ ಪ್ರೇಮ್ ಕಿ ಕಥಾ ಸಿನಿಮಾ ಬಿಡುಗಡೆ ಸಮಯದಲ್ಲಿ ಕಾರ್ತಿಕ್  ಆಸ್ಕ್ ಮಿ ಎನಿಥಿಂಗ್ ಸೆಷನ್ ಅನ್ನು ನಡೆಸಿದ್ದರು. ಸ್ಟಾರ್ ನಟರ ಜೊತೆ ಮಾತನಾಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ನೆಚ್ಚಿನ ಕಲಾವಿದರೇ ಪ್ರಶ್ನೆ ಹೇಳಿ ಎಂದಾಗ ಅಭಿಮಾನಿಗಳು ಸುಮ್ಮನಿರಲು ಸಾಧ್ಯವೆ ಇಲ್ಲ. 

ಕಾರ್ತಿಕ್ ಆರ್ಯನ್‌ಗೆ ತರಹೇವಾರಿ ಪ್ರಶ್ನೆಗಳು ಹರಿದು ಬಂದಿವೆ. ಆದರೆ ಹೆಚ್ಚಿನ ಪ್ರಶ್ನೆಗಳು ಕಾರ್ತಿಕ್ ಲವ್ ಲೈಫ್ ಬಗ್ಗೆಯೇ ಬಂದಿರುವುದು ವಿಶೇಷ. ಅಭಿಮಾನಿಯೊಬ್ಬ, ನೀವು ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಆಗ್ತೀರಾ? ಮಾಲಾ ಅಂಟಿ (ಕಾರ್ತಿಕ್ ತಾಯಿ) ಸಾಕಷ್ಟು ಪ್ರಪೋಸಲ್ ಹೇಳುತ್ತಿರಬೇಕಲ್ವಾ?ಎಂದು ಕೇಳಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಕಾರ್ತಿಕ್ ಬುದ್ದಿವಂತಿಕೆಯ ಉತ್ತರ ನೀಡಿದ್ದಾರೆ. 'ಪ್ರೀತಿಯಿಂದ ಏರ್ಪಡಿಸಿದ ಮದುವೆ. ಪ್ರಪೋಸಲ್ ಪ್ರತಿ ದಿನ ಬರುತ್ತಿವೆ' ಎಂದು ಹೇಳಿದ್ದಾರೆ. 

ಬಾಡಿಗಾರ್ಡ್ ಮದ್ವೆಲಿ ಕಾರ್ತಿಕ್ ಆರ್ಯನ್; ಮದುಮಗನ ಕುತ್ತಿಗೆ ಹಿಡಿದು ಪೋಸ್ ನೀಡಿದ ಸ್ಟಾರ್, ಫ್ಯಾನ್ಸ್ ಹೇಳಿದ್ದೇನು?

ಮತ್ತೊಬ್ಬ ಅಭಿಮಾನಿ ಪ್ರಶ್ನೆ ಮಾಡಿ, ಒಂದು ವಿಷಯ ಹೇಳಿ. ನೀವು ಇನ್ನೂ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೀರಾ? ಎಂದು ಕೇಳಿದ್ದಾರೆ. ಇದಕ್ಕೆ ಕಾರ್ತಿಕ್, 'ನಾನು ನಿಜವಾದ ಪ್ರೀತಿ ಹೊಂದಿದ್ದೆ. ಆದರೆ ನಾನು ಪ್ರೀತಿಯಲ್ಲಿ ಅನ್‌‌ಲಕ್ಕಿ' ಎಂದು ಹೇಳಿದ್ದಾರೆ.

ಮತ್ತೋರ್ವ ಅಭಿಮಾನಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 'ನೀವು ಯಾವಾಗ ಮದುವೆ ಆಗ್ತೀರಿ?' ಎಂದು ಕೇಳಿದ್ದಾರೆ. ಇದಕ್ಕೆ ಕಾರ್ತಿಕ್ 'ಕುದುರೆ, ಮೆನು ಎಲ್ಲವೂ ಸಿದ್ಧವಾಗಿದೆ. ಆದರೆ ಹುಡುಗಿ ಸಿಗಬೇಕು ಅಷ್ಟೆ' ಎಂದು ಹೇಳಿದ್ದಾರೆ.  

ತಾಯಿಗೆ ಸ್ತನ ಕ್ಯಾನ್ಸರ್; ಭಾವನಾತ್ಮಕ ಸಾಲು ಹಂಚಿಕೊಂಡ ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ಅವರಿಗೆ ಅಪಾರ ಸಂಖ್ಯೆಯ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾರ್ತಿರ್ ಲವ್ ಲೈಫ್ ಉತ್ತರಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನಿಜವಾದ ಪ್ರೀತಿ ಯಾರ ಜೊತೆ ಎಂದು ಕೇಳುತ್ತಿದ್ದಾರೆ. ಪ್ರೀತಿಯಲ್ಲಿ ಅನ್‌ಲಕ್ಕಿ ಅಂತ ಯಾಕೆ ಹೇಳುತ್ತೀರಿ ಎಂದು ಇನ್ನು ಅನೇಕರು ಕೇಳುತ್ತಿದ್ದಾರೆ. ಸೆಷನ್ ಕೊನೆಯಲ್ಲಿ 'ಹೊಗುವ ಸಮಯವಾಯ್ತು. ಡಬ್ಬಿಂಗ್ ನಡೆಸುತ್ತಿದೆ. ಶೀಘ್ರದಲ್ಲೇ ಭೇಟಿಯಾಗೋಣ' ಎಂದು ಹೇಳಿ ಅಭಿಮಾನಿಗಳಿಗೆ ಬಾಯ್ ಹೇಳಿದರು ಹೊರಟರು. 

Follow Us:
Download App:
  • android
  • ios