ಸಿನಿಮಾ ಸಕ್ಸಸ್ ಬೆನ್ನಲ್ಲೇ ಇಷ್ಟು ದುಬಾರಿಯಾದ್ರಾ ಕಾರ್ತಿಕ್ ಆರ್ಯನ್; ಪಡೆಯುವ ಸಂಭಾವನೆ ಎಷ್ಟು?

ಭೂಲ್ ಭುಲೈಯಾ-2 ಸಿನಿಮಾದ ಸೂಪರ್ ಸಕ್ಸಸ್ ಬಳಿಕ ನಟ ಕಾರ್ತಿಕ್ ಆರ್ಯನ್ ತನ್ನ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿವೆ. ಸಿನಿಮಾ ಸಕ್ಸಸ್ ಆದ ಬಳಿಕ ಕಲಾವಿದರು ಸಂಭಾವನೆ ಏರಿಸಿಕೊಳ್ಳುವುದು ಸಹಜ. ಅದರಂತೆ ಕಾರ್ತಿಕ್ ಕೂಡ ದುಬಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

Kartik Aaryan Hiking His Fees To 40 Crores Per Film after Bhool Bhulaiyaa 2 succes sgk

ಬಾಲಿವುಡ್ ಖ್ಯಾತ ನಟ ಕಾರ್ತಿಕ್ ಆರ್ಯನ್(Kartik Aaryan) ಕಳೆದ ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕಾರ್ತಿಕ್ ನಟನೆಯ ಭೂಲ್ ಭುಲೈಯಾ-2(Bhool Bhulaiyaa 2) ಸೂಪರ್ ಸಕ್ಸಸ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಉತ್ತಮ ಕಮಾಯಿ ಮಾಡಿದೆ. ಸರಣಿ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಕಾರ್ತಿಕ್ ಆರ್ಯನ್ ಭೂಲ್ ಭುಲೈಯಾ-2 ಸಿನಿಮಾ ಮೂಲಕ ಕೊಂಚ ಧೈರ್ಯ ತುಂಬಿದ್ದರು. ಸಾಲು ಸಾಲು ಸೋಲಿನ ಬಳಿಕ ಭೂಲ್ ಭುಲೈಯಾ-2 ಉತ್ತಮ ಕಲೆಕ್ಷನ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿತ್ತು. ಬಾಕ್ಸ್ ಆಫೀಸ್‌ನಲ್ಲಿ ಕಾರ್ತಿಕ್ ಆರ್ಯನ್ ಸಿನಿಮಾ 171.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ, ಕಾರ್ತಿಕ್ ಆರ್ಯನ್ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಕುತೂಹಲ ಅನೇಕರಲ್ಲಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಭೂಲ್ ಭುಲೈಯಾ-2 ಚಿತ್ರಕ್ಕೆ ಅನೀಸ್ ಬಾಜ್ಮಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ನಟಿ ತಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ನಟ ಕಾರ್ತಿಕ್ ಆರ್ಯನ್ ತನ್ನ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿವೆ. ಸಿನಿಮಾ ಸಕ್ಸಸ್ ಆದ ಬಳಿಕ ಕಲಾವಿದರು ಸಂಭಾವನೆ ಏರಿಸಿಕೊಳ್ಳುವುದು ಸಹಜ. ಅದರಂತೆ ಕಾರ್ತಿಕ್ ಕೂಡ ದುಬಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಕಾರ್ತಿಕ್ ಸಿನಿಮಾವೊಂದಕ್ಕೆ 35ರಿಂದ 40 ಕೋಟಿ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

ಮದುವೆಯಾಗಲು ಯಾಕೆ ಪ್ರೆಶರ್? ನಾನು ಬ್ಯಾಚುಲರ್‌ ಆಗಿರಬೇಕು: ಕಾರ್ತಿಕ್ ಆರ್ಯನ್

ಕಾರ್ತಿಕ್ ಸಂಭಾವನೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.  40 ಕೋಟಿ ಸಂಭಾವನೆ ವಿಚಾರವನ್ನು ಕಾರ್ತಿಕ್ ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಕಾರ್ತಿಕ್ ಬಗ್ಗೆ ನಿರ್ಮಾಪಕ ಭೂಷಣ್ ಕುಮಾರ್ ಮಾತನಾಡಿದ್ದಾರೆ. ನಟ ಕಾರ್ತಿಕಕ್ ಆರ್ಯನ್ ಅವರನ್ನು ಹಾಡಿಹೊಗಳಿದ್ದಾರೆ. ಆಂಗ್ಲ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕ ಭೂಷಣ್, ಕಾರ್ತಿಕ್ ಆರ್ಯನ್ ಆರ್ಥಿಕವಾಗಿ ಹೇಗೆ ಸಹಾಯ ಮಾಡಿದರು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. 

ಭೂಷಣ್ ಕುಮಾರ್ ಆಂಗ್ಲ ವೆಬ್‌ಸೈಟ್ ವಿಂಕ್‌ವಿಲ್ಲ ಜೊತೆ ಮಾತನಾಡಿದ್ದಾರೆ. ನಟರು ತಮ್ಮ ಸಂಭಾವನೆಯನ್ನು ಸಿನಿಮಾಗೆ ಅನಗುಣವಾಗಿ ಪಡೆಯಬೇಕು. ಕೊನೆಯಲ್ಲಿ ನಟರು ಸಹ ಬೆಂಬಲ ನೀಡಬೇಕು. ಕಾರ್ತಿಕ್ ಯಾವಾಗಲು ಹಾಗೆ. ಮುಂದಿನ ಸಿನಿಮಾ ಶೆಹಜಾದ ಸಿನಿಮಾ ಆರ್ಥಿಕ ಸಮಸ್ಯೆ ಎದುರಿಸಬೇಕಯಿತು. ಆಗ ಕಾರ್ತಿಕ್ ಪಕ್ಕದಲ್ಲಿ ನಿಂತು ನಾನು ನಿದ್ದೀನಿ, ಒಟ್ಟಿಗೆ ಪರಿಹರಿಸೋಣ ಎಂದರು. ಆರ್ಥಿಕವಾಗಿ ಸದಾ ಬೆಂಬಲ ನೀಡುತ್ತಾರೆ' ಎಂದು ಭಷಣ್ ಕುಮಾರ್ ಬಹಿರಂಗ ಪಡಿಸಿದರು.  

Kartik Aaryan ಮೇಲೆ ಕೋಪಗೊಂಡ ನಟನ ಮ್ಯಾನೇಜರ್‌ ಕಾರಣ ಇಲ್ಲಿದೆ ನೋಡಿ

ಶೆಹಜಾದಾ ಸಿನಿಮಾದಲ್ಲಿ ಕಾರ್ತಿಕ್ ನಟಿ ಕೃತಿ ಸನೂನ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರೋಹಿತ್ ಧವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭೂಷಣ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಕಾರ್ತಿರ್ ಆರ್ಯನ್ ಮತ್ತೆ ಅಭಿಮಾನಿಗಳ ಹೃದಯ ಗೆಲ್ತಾರಾ ಎಂದು ಕಾದುನೋಡಬೇಕು. 

Latest Videos
Follow Us:
Download App:
  • android
  • ios