ಮದುವೆಯಾಗಲು ಯಾಕೆ ಪ್ರೆಶರ್? ನಾನು ಬ್ಯಾಚುಲರ್ ಆಗಿರಬೇಕು: ಕಾರ್ತಿಕ್ ಆರ್ಯನ್
ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುವ ಅಭಿಮಾನಿಗಳಿಗೆ ಕ್ಲಾರಿಟಿ ಕೊಟ್ಟ ಕಾರ್ತಿಕ್ ಆರ್ಯನ್.
ಬಾಲಿವುಡ್ (Bollywood) ಚಿತ್ರರಂಗದಲ್ಲಿ ಸದ್ಯ ದಿನವೂ ಸುದ್ದಿಯಲ್ಲಿರುವ ನಟ ಅಂದ್ರೆ ಕಾರ್ತಿಕ್ ಆರ್ಯನ್ (Kartik Aaryan). ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಹುಡುಗಿಯರ ಹೃದಯ ಕದ್ದಿರುವ ಪೋರನಿಗೆ ಮದುವೆಯಾಗಲು ಇಷ್ಟವಿಲ್ಲವಂತೆ. ನಾನು ತುಂಬಾನೇ ರೊಮ್ಯಾಂಟಿಕ್ ಹೀಗಾಗಿ ಪರ್ಫೆಕ್ಟ್ ಹುಡುಗಿ ಸಿಗಬೇಕು ಎಂದಿದ್ದಾರೆ.
ಕಾರ್ತಿಕ್ ಮಾತು:
'ಮದುವೆ ಎನ್ನುವ ಕಾನ್ಸೆಪ್ಟ್ ಮೇಲೆ ನನಗೆ ನಂಬಿಕೆ ಇದೆ. ಆದರೆ ಸದ್ಯಕ್ಕೆ ನಾನು ನನ್ನ ಕೆಲಸಕ್ಕೆ ಮದುವೆಯಾಗಿರುವೆ. ಕೆಲಸದ ಮೇಲೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಮದುವೆಯಾಗಲು ಬೇಕಾಗಿರುವ ಮುಖ್ಯ ಅಂಶಗಳು ಪ್ರೀತಿ, ನಂಬಿಕೆ ಮತ್ತು ಕಮಿಟ್ಮೆಂಟ್. ಈ ಎಲ್ಲಾ ಅಂಶಗಳನ್ನು ನನ್ನ ಕೆಲಸ ಮೇಲೆ ನೀಡುತ್ತಿರುವೆ ಹೀಗಾಗಿ ಕೆಲಸ ಮುಖ್ಯವಾಗುತ್ತದೆ. ಸಂತೋಷದ ವಿಚಾರ ಏನೆಂದರೆ ನನ್ನ ಕೆಲಸ ಕೂಡ ನನಗೆ ಅದೇ ನೀಡುತ್ತಿದೆ' ಎಂದು ಕಾರ್ತಿಕ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಲವ್ ತುಂಬಾನೇ ಬ್ಯೂಟಿಫುಲ್ ಫೀಲಿಂಗ್, ಪ್ಯೂರ್ ಫೀಲಿಂಗ್ ಹಾಗೇ ಪರ್ಸನಲ್ ಫೀಲಿಂಗ್. ಪ್ರೀತಿಯಲ್ಲಿ ನಾನು ರೊಮ್ಯಾಂಟಿಕ್ ವ್ಯಕ್ತಿ. ಕುಟುಂಬ ಮತ್ತು ಫ್ಯಾಮಿಲಿಯಿಂದ ಇಷ್ಟೊಂದು ಪ್ರೀತಿ ಪಡೆಯುವುದಕ್ಕೆ ನಾನು ಪುಣ್ಯ ಮಾಡಿರುವೆ. ಯಾವ ಸಮಯಕ್ಕೆ ಏನಾಗಬೇಕು ಅದೇ ಆದರೆ ಜೀವನ ಸರಿಯಾಗಿರುತ್ತದೆ' ಎಂದು ಕಾರ್ತಿಕ್ ಹೇಳಿದ್ದಾರೆ.
Kartik Aaryan ಮೇಲೆ ಕೋಪಗೊಂಡ ನಟನ ಮ್ಯಾನೇಜರ್ ಕಾರಣ ಇಲ್ಲಿದೆ ನೋಡಿ
'ಎಲಿಜಿಬಲ್ ಬ್ಯಾಜುಲರ್ ಆಗಿರುವುದಕ್ಕೆ ಪ್ರೆಶರ್ ಏನು? ನಾನು ಎಲಿಜಿಬಲ್ ಮತ್ತು ಪರ್ಫೆಕ್ಟ್ ಬ್ಯಾಚುಲರ್ ಅಂದ್ರೆ ನನ್ನ ಮೇಲೆ ಯಾವ ಪ್ರೆಶರ್ ಇಲ್ಲ ಅವನು ಎಲ್ಲಾ ಟಾರ್ಗೆಟ್‌ನ ಮೀರಿಸಿರುವೆ ಎಂದು ಅರ್ಥ. ಸದ್ಯಕ್ಕೆ ನನ್ನ ಗಮನ ಇರುವುದು ಕೆಲಸದ ಮೇಲೆ. ಜೀವನದಲ್ಲಿ ಸಾಧನೆ ಮಾಡಿರುವೆ ಸಾಕಿಷ್ಟು ಬೇರೆ ವಿಚಾರಗಳಿಗೆ ಗಮನ ಕೊಡಬೇಕು ಅಂದಾಗ ನಾನು ಮದುವೆ ಬಗ್ಗೆ ಯೋಚನೆ ಮಾಡುವೆ' ಎಂದಿದ್ದಾರೆ ಕಾರ್ತಿಕ್.
500 ಕೋಟಿ ತಲುಪಿದ Kartik Aryan ಚಿತ್ರ:
ಕಾರ್ತಿಕ್ ಆರ್ಯನ್ (Kartik Aryan) ಅಭಿನಯದ 'ಭೂಲ್ ಭುಲೈಯಾ 2' (Bhool Bhulaiyaa 2 ) ಬಾಕ್ಸ್ ಆಫೀಸ್‌ನಲ್ಲಿ ಸಕ್ಕತ್ತೂ ಹವಾ ಸೃಷ್ಟಿಮಾಡಿದೆ. ಈ ಸಿನಿಮಾ ಮೊದಲ ವಾರದಲ್ಲಿ ಚಿತ್ರ 84.78 ಕೋಟಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಕಾರ್ತಿಕ್ ಒಂದು ದೊಡ್ಡ ಮೈಲಿಗಲ್ಲು ಸಾಧಿಸಿದ್ದಾರೆ ಮತ್ತು ಅದು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಕಲೆಕ್ಷನ್ ಆಗಿದೆ. 11 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾರ್ತಿಕ್, ಇದುವರೆಗೆ ಹಿರಿತೆರೆಯಲ್ಲಿ 10 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಈ ಎಲ್ಲಾ ಚಿತ್ರಗಳ ಒಟ್ಟು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಸಂಪಾದಿಸಿದೆ. ವಿಶೇಷವೆಂದರೆ ಅವರ ಯಶಸ್ಸಿನ ಪ್ರಮಾಣವೂ ಶೇ.50ಕ್ಕಿಂತ ಹೆಚ್ಚಿದೆ. ಈ ಚಿತ್ರವು ಮೊದಲ ದಿನದಲ್ಲಿ ಸುಮಾರು 14 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಕಾರ್ತಿಕ್ ಅವರ ವೃತ್ತಿಜೀವನದ (Career) ಅತಿದೊಡ್ಡ ಓಪನರ್ ಆಯಿತು ಮತ್ತು ಶೀಘ್ರದಲ್ಲೇ ಅವರ ವೃತ್ತಿಜೀವನದ ಅತಿ ಹೆಚ್ಚು ಗಳಿಕೆಯ ಚಿತ್ರವಾಗಲಿದೆ.
ಕಂಗನಾ 'ಧಾಕಡ್'ಗೆ ಹೀನಾಯ ಸೋಲು; ಚಿತ್ರಮಂದಿರಗಳಿಂದ ಕಿತ್ತೆಸೆದು ಕಾರ್ತಿಕ್ ಆರ್ಯನ್ ಸಿನಿಮಾ ಪ್ರದರ್ಶನ
ಹಣವಿಲ್ಲದಾಗ ಫ್ಲಾಟ್ ಶೇರ್:
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಇಂದು ತುಂಬಾ ಯಶಸ್ವಿಯಾಗಿರಬಹುದು, ಆದರೆ ಅವರ ಇಲ್ಲಿ ವರೆಗೆ ತಲುಪುವ ಜರ್ನಿ ಖಂಡಿತವಾಗಿಯೂ ಸುಲಭವಾಗಿರಲಿಲ್ಲ. ಸೀಮಿತ ಹಣಕಾಸಿನ ಕಾರಣದಿಂದಾಗಿ ನಟ ಒಮ್ಮೆ 12 ಹುಡುಗರೊಂದಿಗೆ ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಅವರು 12ನೇ ತರಗತಿಯನ್ನು ತಮ್ಮ ಊರಿನಲ್ಲಿ ಪೂರ್ಣಗೊಳಿಸಿದರು ಮತ್ತು ಮುಂಬೈನ ಕಾಲೇಜಿನಲ್ಲಿ ಮುಂದೆ ಓದಿದರು. ಮುಂಬೈ ತಲುಪಿದ ನಂತರ, ಅವರು ಆಡಿಷನ್‌ಗಾಗಿ ವಾರಕ್ಕೆ 3-4 ಬಾರಿ 6 ಗಂಟೆಗಳ ಕಾಲ ಪ್ರಯಾಣಿಸುತ್ತಿದ್ದರು. ಅವರು ಸ್ಟುಡಿಯೊದ ಹೊರಗಿನಿಂದಲೇ ತಿರಸ್ಕರಿಸಲ್ಪಟ್ಟರು. ಸೀಮಿತ ಆದಾಯದ ಕಾರಣ ನಟ ಅಂಧೇರಿಯಲ್ಲಿ 12 ಹುಡುಗರೊಂದಿಗೆ ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದರು.