ಶಾರುಖ್ ಖಾನ್ ಕೊನೆಯ ಸೂಪರ್ಸ್ಟಾರಾ? ಕಾರ್ತಿಕ್ ಆರ್ಯನ್ ಏನ್ ಹೇಳಿದ್ರು?
ತಮ್ಮನ್ನು ತಾವೇ ಕೊನೆಯ ಸೂಪರ್ಸ್ಟಾರ್ ಎಂದು ಘೋಷಿಸಿಕೊಂಡು ನಟ ಶಾರುಖ್ ಖಾನ್ ಅವರ ಕುರಿತು ಖ್ಯಾತ ನಟ ಕಾರ್ತಿಕ್ ಆರ್ಯನ್ ಹೇಳಿದ್ದೇನು?
ಸಿನಿ ತಾರೆಯರಿಗೆ ಕೆಲವೊಂದು ಬಿರುದುಗಳನ್ನು ಅವರ ಅಭಿಮಾನಿಗಳೇ ಕೊಡುತ್ತಾರೆ. ಅವು ಆ ನಟ ನಟಿಯರ ಜೊತೆಗೆ ಮಿಳಿತವಾಗಿ ಬಿಡುತ್ತವೆ. ಅದೇ ಹೆಸರಿನಿಂದ ಅವರು ಸದಾ ಕರೆಯಲ್ಪಡುತ್ತಾರೆ. ಆದರೆ ಕೆಲವೊಂದು ಬಿರುದುಗಳು ಒಬ್ಬರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವು ಕಾಲಕ್ಕೆ ತಕ್ಕಂತೆ ಬೇರೆ ಬೇರೆ ನಟ ನಟಿಯರಿಗೂ ಅನ್ವಯ ಆಗುತ್ತಾ ಹೋಗುತ್ತದೆ. ಅಂಥವುಗಳಲ್ಲಿ ಒಂದು ಸೂಪರ್ ಸ್ಟಾರ್ ಪಟ್ಟ (Superstar). ನಟರಿಗೆ ಈ ಬಿರುದು ಕೊಡುವುದು ಅವರ ಅಭಿಮಾನಿಗಳು. ಆದರೆ ಕೆಲವು ನಾಯಕರು ಇತ್ತೀಚನ ದಿನಗಳಲ್ಲಿ ತಮಗೆ ತಾವೇ ಬಿರುದುಗಳನ್ನು ಕೊಟ್ಟುಕೊಳ್ಳುತ್ತಿದ್ದಾರೆ ಎಂಬ ಆಪಾದನೆಗಳೂ ಇವೆ. ಈಗ ಅಂಥದ್ದೇ ಒಂದು ಬಿರುದಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅದು ಶಾರುಖ್ ಖಾನ್ (Shah Rukh Khan) ಹಾಗೂ ಸೂಪರ್ಸ್ಟಾರ್ ಬಿರುದಿನ ಕುರಿತಾಗಿ.
ಆಗಿದ್ದೇನೆಂದರೆ, ನಟ ಶಾರುಖ್ ಖಾನ್ ಅವರನ್ನು ಅಭಿಮಾನಿಗಳು ಸೂಪರ್ಸ್ಟಾರ್ ಎಂದು ಇತರ ಕೆಲವು ನಟರಿಗೆ ಕರೆದಂತೆ ಕರೆಯುತ್ತಾರೆ. ಆದರೆ ಕೆಲ ದಿನಗಳ ಹಿಂದೆ ಶಾರುಖ್ ಅವರು ತಾವೇ ಕೊನೆಯ ಸೂಪರ್ ಸ್ಟಾರ್ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆ ಭಾರಿ ಚರ್ಚೆಗೂ ಗ್ರಾಸವಾಗಿತ್ತು.ಶಾರುಖ್ ಅಭಿಮಾನಿಗಳು ಹೌದು ಹೌದು, ಇವರು ಹೇಳಿದ್ದು ನಿಜ ಎಂದಿದ್ದರೆ, ಇತರ ನಟರ ಅಭಿಮಾನಿಗಳಿಗೆ ಇದು ನುಂಗಲಾಗದ ತುತ್ತಾಗಿ ಪರಿಣಮಿಸಿದ್ದು, ಇದಕ್ಕೆ ವಿರೋಧ ಮಾಡುತ್ತಿದ್ದಾರೆ.
ಬಾಲಿವುಡ್ಗೆ ಎಂಟ್ರಿ ಕೊಡಲು ಸಿದ್ಧಳಾದ ರವೀನಾ ಟಂಡನ್ ಪುತ್ರಿ!
ಈಗ ಅಂಥದ್ದೇ ಒಂದು ಪ್ರಶ್ನೆ ಇನ್ನೋರ್ವ ನಟ ಕಾರ್ತಿಕ್ ಆರ್ಯನ್ (Karthik Aryan) ಅವರಿಗೆ ಎದುರಾಯಿತು. ತಮ್ಮನ್ನು ತಾವು ಬಾಲಿವುಡ್ನ ರಾಜ್ಕುಮಾರ್ (ಶೆಹಜಾದಾ) ಎಂದು ಕರೆದುಕೊಳ್ಳುತ್ತಿರುವ ಆರ್ಯನ್ ಅವರು ರಜತ್ ಶರ್ಮಾ (Rajath Sharma) ಅವರ ಜನಪ್ರಿಯ ಕಾರ್ಯಕ್ರಮ 'ಆಪ್ ಕಿ ಅದಾಲತ್' ನಲ್ಲಿ (Aap ki adalath) ಕಾಣಿಸಿಕೊಂಡಾಗ, ರಜತ್ ಶರ್ಮಾ ಅವರು ಕಾರ್ತಿಕ್ ಎದುರಿಗೆ ಒಂದು ಪ್ರಶ್ನೆಯನ್ನು ಮುಂದಿಟ್ಟರು.
ಜನರು ಎಲ್ಲಿಯವರೆಗೆ ಚಲನಚಿತ್ರಗಳನ್ನು ನೋಡುತ್ತಾರೋ ಅಲ್ಲಿಯವರೆಗೆ ಉದ್ಯಮದಲ್ಲಿ ಸೂಪರ್‌ಸ್ಟಾರ್‌ಗಳು ಇರುತ್ತಾರೆ ಎಂದು ಕಾರ್ತಿಕ್ ಆರ್ಯನ್ ನಂಬುತ್ತಾರೆ. ಶಾರುಖ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅವರು ಹೀಗೆ ಹೇಳಿದರು, ಇದರಲ್ಲಿ ಅವರು ತಮ್ಮನ್ನು ಕೊನೆಯ ಸೂಪರ್ ಸ್ಟಾರ್ ಎಂದು ಕರೆದಿದ್ದಾರೆ. ವಾಸ್ತವವಾಗಿ, ಕಾರ್ತಿಕ್ ಇತ್ತೀಚೆಗೆ ರಜತ್ ಶರ್ಮಾ ಅವರ ಜನಪ್ರಿಯ ಕಾರ್ಯಕ್ರಮ 'ಆಪ್ ಕಿ ಅದಾಲತ್' ನಲ್ಲಿ ಕಾಣಿಸಿಕೊಂಡರು. 'ನಾನೇ ಕೊನೆಯ ಸೂಪರ್ ಸ್ಟಾರ್ ಎಂದು ಸ್ವತಃ ಶಾರುಖ್ ಖಾನ್ ಹೇಳುತ್ತಾರೆ, ನನಗಿಂತ ನಂತರ ಸೂಪರ್ ಸ್ಟಾರ್ ಯಾರೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?' ಎಂದು ಪ್ರಶ್ನಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ತಿಕ್, 'ನಾನು ಯಾರೊಂದಿಗೂ ಹೋಲಿಕೆ ಮಾಡಲು ಇಷ್ಟಪಡುವುದಿಲ್ಲ. ನಾನು ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ಅವರು ದೊಡ್ಡ ಪರಂಪರೆಯನ್ನು ಸೃಷ್ಟಿಸಿದ್ದಾರೆ. ಅದರ ಬಗ್ಗೆ ನಾನೇ ಹುಚ್ಚನಾಗಿದ್ದೇನೆ. ಸೂಪರ್‌ಸ್ಟಾರ್‌ಗಳನ್ನು ಸಾರ್ವಜನಿಕರು ಮಾಡುತ್ತಾರೆ. ನಮ್ಮನ್ನು ನಾವೇ ಸೂಪರ್ಸ್ಟಾರ್ ಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ಬಗ್ಗೆ ನಾನು ಏನೂ ಹೇಳುವುದಿಲ್ಲ' ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು. ಇನ್ನು ತಮ್ಮ ಬಗ್ಗೆ ಹೇಳಿಕೊಂಡ ಕಾರ್ತಿಕ್, 'ಜನರು ನನ್ನನ್ನು ತುಂಬಾ ಪ್ರೀತಿ ಮಾಡುತ್ತಿದ್ದಾರೆ. ನಾನು ಅದೃಷ್ಟಶಾಲಿಯಾಗಿದ್ದೇನೆ. ಜನರು ನನ್ನನ್ನು ಈ ಮಟ್ಟಕ್ಕೆ ತಂದಿದ್ದಾರೆ. ಜನರು ಚಲನಚಿತ್ರಗಳನ್ನು ನೋಡುತ್ತಲೇ ಇರುವವರೆಗೆ ಸೂಪರ್‌ಸ್ಟಾರ್‌ಗಳು ನಿರ್ಮಾಣವಾಗುತ್ತಲೇ ಇರುತ್ತಾರೆ' ಎಂದಿದ್ದಾರೆ.
ಮಹೇಶ್ ಬಾಬುಗಾಗಿ ನಟನೆ ಬಿಟ್ಟೆ : ಮಾಜಿ ಮಿಸ್ ಇಂಡಿಯಾ, ನಟಿ ನಮ್ರತಾ ಶಿರೋಡ್ಕರ್ ಮನದಾಳದ ಮಾತು...
ಕಾರ್ತಿಕ್ ಆರ್ಯನ್ ಅಭಿನಯದ 'ಭೂಲ್ ಭುಲೈಯಾ 2' (Bhool Bhulayya 2) ಹಿಟ್ ಆದ ನಂತರ, ಅವನು ತಮ್ಮನ್ನು ತಾವು ಹೀರೋ ನಂಬರ್ ಒನ್ ಎಂದು ಹೇಳಿಕೊಂಡಿದ್ದರು. ಶಾರುಖ್ ಅವರ ಹೇಳಿಕೆಯನ್ನು ಪ್ರಸ್ತಾಪಿಸುತ್ತಲೇ ರಜತ್ ಶರ್ಮಾ ಅವರು, ಕಾರ್ತಿಕ್ ಅವರ ಈ ಹೇಳಿಕೆಯ ಬಗ್ಗೆಯೂ ಪ್ರಶ್ನಿಸಿದರು. ಅದಕ್ಕೆ ಜಾಣ್ಮೆಯಿಂದ ಉತ್ತರ ಕೊಟ್ಟ ಕಾರ್ತಿಕ್, 'ನಾನು ಬಹಳ ಸಮಯ ಕಾದಿದ್ದೇನೆ. ಜನರು ನನ್ನನ್ನು ನಂಬುವ ಭರವಸೆ ಇದೆ. ಅದರಂತೆಯೇ ನಿಧಾನವಾಗಿ ಎಲ್ಲರೂ ನನ್ನನ್ನು ತಿಳಿದುಕೊಳ್ಳುತ್ತಿದ್ದಾರೆ. ಪ್ರೇಕ್ಷಕರ ಪ್ರೀತಿಯನ್ನು ಬಯಸುತ್ತೇನೆ. ನಾನು ಅದಕ್ಕಾಗಿ ಹಸಿದಿದ್ದೇನೆ. ಇದನ್ನು ಬಿಟ್ಟು ಮತ್ತೇನೂ ಹೇಳಲಾರೆ ಎಂದಿದ್ದಾರೆ.