ತಮಿಳು ನಟ ಕಾರ್ತಿ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಸುಲ್ತಾನ್ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಇದು ಕಿರಿಕ್ ಚೆಲುವೆಯ ಕಾಲಿವುಡ್‌ನ ಮೊದಲ ಸಿನಿಮಾ.

ತಮಿಳು ಬಾಕ್ಸ್‌ ಆಫೀಸ್‌ನಲ್ಲಿ ತಕ್ಕಮಟ್ಟಿಗೆ ದೊಡ್ಡದಾಗಿಯೇ ಸೌಂಡ್ ಮಾಡಿದೆ ಸಿನಿಮಾ. ತೆಲುಗಿನಲ್ಲೂ ಸಿನಿಮಾ ಸೇಮ್ ಟೈಟಲ್‌ನಲ್ಲಿ ಬಿಡುಗಡೆಯಾಗಿದೆ. ಆದರೆ ರೆಸ್ಪಾನ್ಸ್ ಅಷ್ಟಾಗಿರಲಿಲ್ಲ. ಆದರೆ ಕಾಲಿವುಡ್‌ನಲ್ಲಿ ಮಾತ್ರ ರಶ್ಮಿಕಾ ಮೊದಲ ಸಿನಿಮಾ ಸದ್ದು ಮಾಡಿದೆ.

ಸುಲ್ತಾನ್ ಸ್ಕ್ರೀನಿಂಗ್: ವೈಟ್ ಶರ್ಟ್, ಬ್ಲೂ ಶಾರ್ಟ್ಸ್‌ನಲ್ಲಿ ಕಾಣಿಸ್ಕೊಂಡ ಕಿರಿಕ್ ಚೆಲುವೆ

ಸಿನಿಮಾದ ಥ್ಯಾಂಕ್ಯೂ ಮೀಟ್‌ನಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ರಶ್ಮಿಕಾ ಅವರ ದೊಡ್ಡ ಫ್ಯಾನ್ ಬೇಸ್ ಸಿನಿಮಾ ಸಕ್ಸಸ್‌ಗೆ ಕಾರಣ ಎಂದಿದ್ದಾರೆ ಕಾರ್ತಿ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ರಶ್ಮಿಕಾ ಹಿಟ್ ನಟಿ. ಕನ್ನಡ ಸಿನಿಮಾ ಕಿರಿಕ್ ಪಾರ್ಟಿ ಮೂಲಕ ನಟಿಯಾಗಿ ಗುರುತಿಸಿಕೊಂಡ ರಶ್ಮಿಕಾ ಸದ್ಯ ಫುಲ್ ಬ್ಯುಸಿ.

ನಟಿ ರಶ್ಮಿಕಾ ಆಕೆ ಕೆಲಸ ಮಾಡುವ ಇಂಡಸ್ಟ್ರಿ ಹೊರತಾಗಿಯೂ ಪರಭಾಷೆಗಳಿಂದಲೂ ಭಾರೀ ಫ್ಯಾನ್ಸ್ ಬೇಸ್ ಹೊಂದಿದ್ದಾರೆ ಎಂದಿದ್ದಾರೆ. ಹೀರೋ ಒಬ್ಬರು ಹಿರೋಯಿನ್‌ನಿಂದಲೇ ಸಿನಿಮಾ ಗೆದ್ದಿತು, ಆಕೆಯ ಫ್ಯಾನ್ಸ್ ಬೇಸ್ ಹೊಗಳೋದು ಇದೆಲ್ಲವೂ ಚಿತ್ರರಂಗದಲ್ಲಿ ನಡೆದ ಬಲು ಅಪರೂಪದ ವಿದ್ಯಾಮಾನಗಳಲ್ಲಿ ಒಂದು. ಆದರೆ ರಶ್ಮಿಕಾ ಅವರನ್ನು ಮುಕ್ತವಾಗಿ ಹೊಗಳಿದ್ದಾರೆ ನಟ ಕಾರ್ತಿ.

ಪಕ್ಕಾ ಹಳ್ಳಿ ಹುಡುಗಿಯಾಗಿ ರಶ್ಮಿಕಾ: ಕಿರಿಕ್ ಚೆಲುವೆಯ ಕ್ಯೂಟ್ ಲುಕ್

ಈ ಸಿನಿಮಾ ಉತ್ತಮ ಓಪನಿಂಗ್ ಪಡೆಯಲು ರಶ್ಮಿಕಾ ಒಂದು ಕಾರಣವಾಗಿದ್ದಾರೆ. ಈಗಿನ ಪೀಳಿಗೆಯ ನಾಯಕಿಯರಲ್ಲಿ, ಸರಿಯಾದ ಯೋಜನೆಗಳನ್ನು ಆರಿಸುವ ವಿಷಯದಲ್ಲಿ ರಶ್ಮಿಕಾ ಎಲ್ಲರಿಗಿಂತ ಮುಂದಿದ್ದಾರೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನಟಿ ತುಂಬಾ ಹೊಗಳಬೇಡಿ ಕಾರ್ತಿ ಸರ್.. ನೀವು ಈಗ ನನ್ನನ್ನು ಅಳಿಸಲು ಹೊರಟಿದ್ದೀರಿ. ಸಕ್ಸಸ್‌ಗೆ ಸಿನಿಮಾ ಕಾರಣ.. ಅದು ನಿಜವಾದ ಶ್ರಮದಿಂದಾಗಿ ಸಿಕ್ಕಿದೆ .. ಅದು ನಮ್ಮೆಲ್ಲರ ಕೆಲಸ ಕಾರಣದಿಂದ ಸಿಕ್ಕಿದೆ ಎಂದಿದ್ದಾರೆ.

ಮೂಗುತಿ ಸುಂದರಿ ಲಿಸ್ಟ್ ಸೇರಿ ರಶ್ಮಿಕಾ ಮಂದಣ್ಣ; ಹೊಸ ಲುಕ್ ನೋಡಿ!

ಬಕ್ಕಿಯರಾಜ್ ಕಣ್ಣನ್ ನಿರ್ದೇಶನದ ಸುಲ್ತಾನ್ ಚಿತ್ರವನ್ನು ಡ್ರೀಮ್ ವಾರಿಯರ್ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಎಸ್.ಆರ್.ಪ್ರಕಾಶ್ ಬಾಬು ಮತ್ತು ಎಸ್.ಆರ್. ಪ್ರಭು ನಿರ್ಮಿಸಿದ್ದಾರೆ.