Asianet Suvarna News Asianet Suvarna News

ಶಾಲೆಗೆ ಬರುವ ಸ್ಯಾಂಡಲ್‌ವುಡ್‌ ಸ್ಟಾರ್ಸ್: ಸುದೀಪ್, ಯಶ್, ಡಾಲಿ, ಶಿವಣ್ಣ ಎಲ್ಲಿ ವೋಟ್ ಹಾಕ್ತಾರೆ?

ಸಿನಿಮಾಗಳಲ್ಲಿ ಸ್ಟಾರ್‌ಗಳಾಗಿ ಮಿಂಚುವ ಸ್ಯಾಂಡಲ್‌ವುಡ್‌ ನಟ - ನಟಿಯರು ಎಲ್ಲಿ ಮತದಾನ ಮಾಡುತ್ತಾರೆ? ಮತಗಟ್ಟೆ ಯಾವುದು ಎಂಬ ವಿವರ ಇಲ್ಲಿದೆ ನೋಡಿ.. 

Karnataka election 2023 Sandalwood stars cast voting details sat
Author
First Published May 9, 2023, 4:32 PM IST | Last Updated May 9, 2023, 5:20 PM IST

ಬೆಂಗಳೂರು (ಮೇ 09): ಯಾರು ಎಷ್ಟೇ ಶ್ರೀಮಂತರು, ಪ್ರಭಾವಿಗಳು ಆಗಿದ್ದರೂ ಮತದಾನ ಮಾಡಲು ಸರ್ಕಾರಿ ಮತಗಟ್ಟೆಗಳಿಗೆ ಬರಲೇಬೇಕು ಎಂಬುದು ಟ್ರೆಂಡ್‌ ಆಗಿದೆ. ಅದೇ ರೀತಿ ಸಿನಿಮಾಗಳಲ್ಲಿ ಸ್ಟಾರ್‌ಗಳಾಗಿ ಮಿಂಚುವ ಸ್ಯಾಂಡಲ್‌ವುಡ್‌ ನಟ - ನಟಿಯರು ಎಲ್ಲಿ ಮತದಾನ ಮಾಡುತ್ತಾರೆ? ಮತಗಟ್ಟೆ ಯಾವುದು ಎಂಬ ವಿವರ ಇಲ್ಲಿದೆ ನೋಡಿ.. 

ಈಗಾಗಲೇ ರಾಜ್ಯದಲ್ಲಿ ಮತದಾನ ಮಾಡುವ ಐಟಿ-ಬಿಟಿ ಉದ್ಯೋಗಿಗಳಿಗೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೇ 80 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮನೆಯಿಂದಲೇ ಮತದಾನ ಪ್ರಕ್ರಿಯೆ ಯಶಸ್ವಿಯಾಗಿದ್ದು, ಮೇ 10 ರಂದು ನಡೆಯುವ ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಎಂದು ಚುನಾವಣಾ ಆಯೋಕ ಸಕಲ ರೀತಿಯಲ್ಲು ಸಿದ್ದತೆ ಮಾಡಿಕೊಂಡಿದೆ. ಈಗ ಸ್ಯಾಂಡಲ್‌ವುಡ್‌ ಸಿನಿಮಾ ನಟ, ನಟಿಯರು ತಮ್ಮ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ನೀಡಿ ವೋಟ್ ಮಾಡಲು ಆಗಮಿಸಿದ್ದಾರೆ. ಕರುನಾಡಿದ ಬಹುತೇಕ ನಟ- ನಟಿಯರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಈ ಪೈಕಿ ಯಾವ ನಟ- ನಟಿಯರು, ಯಾವ ಕ್ಷೇತ್ರದಲ್ಲಿ ಮತದಾನ ಮಾಡುತ್ತಾರೆ? ಎನ್ನುವ ವಿವರ ಇಲ್ಲಿದೆ ನೊಡಿ..

ಬೆಂಗಳೂರು- ಆರ್.ಆರ್.ನಗರ ಕ್ಷೇತ್ರ
ಗಣೇಶ್​, ಆರ್​​ಆರ್​ ನಗರ ( ಮೌಂಟ್​ ಕಾರ್ಮಲ್​.)
ಶಿಲ್ಪಾ ಗಣೇಶ್, ಆರ್.​​ಆರ್​ ನಗರ ಆರ್​​ಆರ್​ ನಗರ ( ಮೌಂಟ್​ ಕಾರ್ಮಲ್​)
ರಚಿತಾ ರಾಮ್, ಆರ್​​.ಆರ್​ ನಗರ (ಬಾರ್ಡ್​​ ವಿನ್​​ ಸರ್ಗರಾಣಿ ಸ್ಕೂಲ್)
ಅಮೂಲ್ಯ, ಆರ್​​.ಆರ್​ ನಗರ ( ಬಿ. ಇ ಟಿ  ಕಾರ್ಮೆಂಟ್​)
ದಿಗಂತ್​, ಆರ್.​​ಆರ್ ನಗರ
ಐಂದ್ರಿತಾ ರೇ ಹಲಸೂರು (ಚಿನ್ಮಯ ವಿದ್ಯಾಲಯ)
ಅವಿನಾಶ್,​ ಆರ್​​ಆರ್​ ನಗರ ( ಕಾರ್ಮಲ್​ ಸ್ಕೂಲ್​ - ವಾರ್ಡ್​ ನಂ 160) 
ವಸಿಷ್ಠ ಸಿಂಹ, ಆರ್​ಆರ್​ ನಗರ
ಹರಿಪ್ರಿಯಾ, ಆರ್​​ಆರ್​ ನಗರ

Karnataka elections 2023: ರಾಜಕೀಯ ಪಕ್ಷಗಳು ಮತದಾರರನ್ನು ವಾಹನಗಳಲ್ಲಿ ಕರೆತರುವಂತಿಲ್ಲ: ಇಲ್ಲಿದೆ ಕಾರಣ

ಸದಾಶಿವ ನಗರ
ರಾಘವೇಂದ್ರ ರಾಜ್​​ಕುಮಾರ್, ಸದಾಶಿವನಗರ (ಪೂರ್ಣ ಪ್ರಜ್ಞಾ ಸ್ಕೂಲ್)
ಅಶ್ವಿನಿ ಪುನೀತ್ ರಾಜ್​ಕುಮಾರ್, ಸದಾಶಿವನಗರ (ಪೂರ್ಣ ಪ್ರಜ್ಞಾ ಸ್ಕೂಲ್)
ಯುವರಾಜ್​ ಕುಮಾರ್, ಸದಾಶಿವನಗರ (ಪೂರ್ಣ ಪ್ರಜ್ಞಾ ಸ್ಕೂಲ್)

ಕತ್ರಿಗುಪ್ಪೆ
ಉಪೇಂದ್ರ- ಕತ್ರಿಗುಪ್ಪೆ (ಸರ್ಕಾರಿ ಶಾಲೆ ಆರ್ಚ್ ಸಮೀಪ)
ದುನಿಯಾ ವಿಜಯ್ -ಕತ್ರಿಗುಪ್ಪೆ (ಸರ್ಕಾರಿ ಶಾಲೆ ಆರ್ಚ್ ಸಮೀಪ)
ಯಶ್​ - ಕತ್ರಿಗುಪ್ಪೆ (ಹೊಸಕೆರೆಹಳ್ಳಿ ಸಮೀಪ)
ಸೃಜನ್ ಲೋಕೇಶ್​, ಕತ್ರಿಗುಪ್ಪೆ
ಪೂಜಾ ಗಾಂಧಿ, ಕತ್ರಿಗುಪ್ಪೆ
ರಾಧಿಕಾ ಪಂಡಿತ್​, ಸುಬ್ರಮಣ್ಯನಗರ- (ದೇವಯ್ಯ ಪಾರ್ಕ್)

ಬ್ಯಾಟರಾಯನಪುರ
ಡಾ.ಶಿವರಾಜ್​ಕುಮಾರ್, ಬ್ಯಾಟರಾಯನ ಪುರ (ರಾಚೇನಹಳ್ಳಿ)
ಗೀತಾ ಶಿವರಾಜ್​ಕುಮಾರ್, ಬ್ಯಾಟರಾಯನ ಪುರ (ರಾಚೇನಹಳ್ಳಿ)

ಜೆ.ಪಿ.ನಗರ
ಸುದೀಪ್​- ಬೊಮ್ಮನಹಳ್ಳಿ ಕ್ಷೇತ್ರ (ಪುಟ್ಟೇನಹಳ್ಳಿ  ವಾರ್ಡ್ ಮತಗಟ್ಟೆ ಸಂಖ್ಯೆ 175) 
ಮೇಘನಾ ರಾಜ್- ಜೆಪಿ ನಗರ  (ಎವಿ ಎಜುಕೇಷನ್ ಸೊಸೈಟಿ )
ಸುಂದರ್​ ರಾಜ್ - ಜೆಪಿ ನಗರ  (ಎವಿ ಎಜುಕೇಷನ್ ಸೊಸೈಟಿ )
ತಾರಾ ಅನುರಾಧ - ಜೆಪಿ ನಗರ  (ಎವಿ ಎಜುಕೇಷನ್ ಸೊಸೈಟಿ )
ಸಪ್ತಮಿಗೌಡ, ಜೆಪಿ ನಗರ, 3ನೇ ಪೇಸ್​, ಸೆಂಟ್ ಪಾಲ್ಸ್​​ ಸ್ಕೂಲ್​​​
ರಮೇಶ್ ಅರವಿಂದ್, ಜೆಪಿ ನಗರ 

ಜಯನಗರ
ಭಾರತಿ ವಿಷ್ಣುವರ್ಧನ್​- ಜಯನಗರ
ಅನಿರುದ್ದ್- ಜಯನಗರ

ಮಲ್ಲೇಶ್ವರಂ
ಜಗ್ಗೇಶ್​- ಮಲ್ಲೇಶ್ವರಂ
ಕೋಮಲ್​ - ಮಲ್ಲೇಶ್ವರಂ
ಸುಧಾರಾಣಿ, ಮಲ್ಲೇಶ್ವರಂ (ರಾಘವೇಂದ್ರ ಹೈ ಸ್ಕೂಲ್)
ಸರೋಜ  ದೇವಿ- ಮಲ್ಲೇಶ್ವರ (ಬಿ.ಪಿ.ಇಂಡಿಯನ್ ಸ್ಕೂಲ್)
ಅನಂತ್ ನಾಗ್ - ಅಂಗನವಾಣಿ (ಮಧ್ಯಾಹ್ನದ ನಂತರ) ಡಾಲರ್ಸ್ ಕಾಲೋನಿ
ಜಯಮಾಲ - ಡಾಲರ್ಸ್ ಕಾಲೋನಿ  

ತ್ಯಾಗರಾಜನಗರ
ಕೆಆರ್​.ರೋಡ್​, ಶಾಸ್ತ್ರಿ ನಗರ
ಧ್ರುವ ಸರ್ಜಾ- ತ್ಯಾಗರಾಜನಗರ (ಶಾಸ್ರ್ತಿನಗರ)

ವಸಂತನಗರ
ಶ್ರೀಮುರುಳಿ, ವಸಂತ ನಗರ (ಮೌಂಟ್ ಕಾರ್ಮೆಲ್ ಕಾಲೇಜ್)
ಪ್ರಶಾಂತ್​ ನೀಲ್​- ವಸಂತ ನಗರ

ಚಂದ್ರ ಲೇಔಟ್​
ಜೋಗಿ ಪ್ರೇಮ್​ - ಚಂದ್ರ ಲೇಔಟ್​, ಸುಬ್ಬಣ್ಣ ಗಾರ್ಡನ್ (ಕೆವಿವಿ ಖಾಸಗಿ ಶಾಲೆ)
ರಕ್ಷಿತಾ ಪ್ರೇಮ್- ಚಂದ್ರ ಲೇಔಟ್​, ಸುಬ್ಬಣ್ಣ ಗಾರ್ಡನ್ (ಕೆವಿವಿ ಖಾಸಗಿ ಶಾಲೆ)

ನಾಗರಬಾವಿ
ಚಂದನ್ ಶೆಟ್ಟಿ - ನಾಗರವಬಾವಿ (ಆಕ್ಸ್​ಫರ್ಡ್ ಸ್ಕೂಲ್​)
ಸಾಧುಕೋಕಿಲ- ನಾಗರಬಾವಿ, 
ನೆನಪಿರಲಿ ಪ್ರೇಮ್ - ನಾಗರಬಾವಿ - (ರೇಣುಕಾ ಪಬ್ಲಿಕ್ ಸ್ಕೂಲ್)

ಹೊಸಕೆರೆಹಳ್ಳಿ
ರವಿಶಂಕರ್ ಗೌಡ - ಹೊಸಕೆರೆ ಹಳ್ಳಿ (ಬಸ್​ಸ್ಟ್ಯಾಂಡ್​ ಸರ್ಕಾರಿ ಶಾಲೆ)
ಶರಣ್, ಹೊಸಕೆರೆಹಳ್ಳಿ
ಶೃತಿ, ಹೊಸಕೆರೆ ಹಳ್ಳಿ

ರಾಜಾಜಿನಗರ
ರವಿಚಂದ್ರನ್- ರಾಜಾಜಿನಗರ
ವಿಕ್ರಂ ರವಿಚಂದ್ರನ್- ರಾಜಾಜಿನಗರ
ಮನೋರಂಜನ್​- ರಾಜಾಜಿನಗರ
ಅಜೇಯ್ ರಾವ್- ರಾಜಾಜಿನಗರ

ಬೊಮ್ಮನಹಳ್ಳಿ
ದ್ವಾರಕೀಶ್, ಬೊಮ್ಮನಹಳ್ಳಿ (ಹೆಚ್​.ಎಸ್.ಆರ್ ಲೇಔಟ್)

ಕೆಆರ್​ ಪುರ
ಹರ್ಷಿಕಾ ಪೂಣಚ್ಚ- ಕೆ.ಆರ್​.ಪುರ

ಗಿರಿನಗರ
ಯೋಗರಾಜ್ ಭಟ್ - ಗಿರಿ ನಗರ

ಹೆಬ್ಬಾಳ
ಅರ್ಜುನ್ ಜನ್ಯ- ಹೆಬ್ಬಾಳ

ಯಲಹಂಕ
ವಿಜಯ್ ರಾಘವೇಂದ್ರ - ಯಲಹಂಕ

ಶಿವಾಜಿನಗರ
ಮಾಲಾಶ್ರೀ- ಶಿವಾಜಿನಗರ

ಮತದಾರರಿಗೆ ಶಾಕ್‌ ಕೊಟ್ಟ ಬಿಬಿಎಂಪಿ: ಹೋಟೆಲ್‌ಗಳಲ್ಲಿ ಉಚಿತ ಊಟ, ತಿಂಡಿ ವಿತರಣೆಗೆ ನಿಷೇಧ!

  • ಬೆಂಗಳೂರಿನ ಹೊರಭಾಗದಲ್ಲಿ ನಟ -ನಟಿಯರು
  • ಅಜನೀಶ್ ಲೋಕನಾಥ್ -ಭದ್ರಾವತಿ (ಓಲ್ಡ್ ಟೌನ್)
  • ರಿಷಬ್ ಶೆಟ್ಟಿ- ಕುಂದಾಪುರ 
  • ರಕ್ಷಿತ್ ಶೆಟ್ಟಿ- ಕುಂದಾಪುರ (ಉಡುಪಿ)
  • ರಾಜ್ .ಬಿ.ಶೆಟ್ಟಿ- ಕುಂದಾಪುರ
  • ಡಾಲಿ ಧನಂಜಯ- ಅರಸೀಕೆರೆ
  • ಅಶಿಕಾ ರಂಗನಾಥ್​ - ತುಮಕೂರು
  • ಚಿಕ್ಕಣ್ಣ- ಮೈಸೂರು
  • ಲೀಲಾವತಿ- ಸೋಲದೇವನಹಳ್ಳಿ
  • ವಿನೋದ್ ರಾಜ್- ಸೋಲದೇವನ ಹಳ್ಳಿ
  • ದೊಡ್ಡಣ್ಣ -ಬಿದರುಕಲ್ಲು
  • ರಶ್ಮಿಕಾ ಮಂದಣ್ಣ - ವೀರಾಜಪೇಟೆ
  • ನಿವೇದಿತಾ ಗೌಡ-  ಮೈಸೂರು
  • ಮಾಳವಿಕಾ- ಮೈಸೂರು 
  • ಅಭಿಷೇಕ್ ಅಂಬರೀಷ್- ಮಂಡ್ಯ (ಎವಿ ಎಜುಕೇಷನ್ ಸೊಸೈಟಿ) 
  • ನಿಖಿಲ್ ಕುಮಾರಸ್ವಾಮಿ- ಕೇತಮಾರನಹಳ್ಳಿ (ಬಿಡದಿ)
Latest Videos
Follow Us:
Download App:
  • android
  • ios