ಬಾಲಿವುಡ್‌ನ ಸೆಲೆಬ್ರಿಟಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ, ಈ ಮೂಲಕ ನಟಿ ದೀಪಿಕಾಗೂ ಕರಿಷ್ಮಾ ನಡುವೆ ಯಾವುದೇ ಲಿಂಕ್ ಇಲ್ಲ ಎನ್ನಲಾಗಿದೆ. ಕರಿಷ್ಮಾ ಪ್ರಕಾಶ್ ಮನೆಯಲ್ಲಿ ಡ್ರಗ್ಸ್ ಸಿಕ್ಕಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

KWAN ಟ್ಯಾಲೆಂಡ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕರಿಷ್ಮಾ ರಾಜೀನಾಮೆ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಇದೀಗ ಕಂಪನಿ ಅಧಿಕೃತವಾಗಿ ಈ ವಿಚಾರವನ್ನು ತಿಳಿಸಿದೆ.

ಕರ್ವಾ ಚೌತ್‌ : ಗಂಡನಿಗಾಗಿ ಉಪವಾಸ ಮಾಡದ ಬಾಲಿವುಡ್‌ ನಟಿಯರಿವರು!

ಅಕ್ಟೋಬರ್ 21ರಂದು ಕರಿಷ್ಮಾ ರಾಜೀನಾಮೆ ಕೊಟ್ಟಿದ್ದಾರೆ. ಈಗ ಅವರಿಗೆ ಕಂಪನಿ ಮತ್ತು ದೀಪಿಕಾ ಜೊತೆಗೆ ಯಾವುದೇ ಸಂಬಂಧವಿಲ್ಲ. ಈಗ ನಡೆಯುತ್ತಿರುವ ಎನ್‌ಸಿಬಿ ವಿಚಾರಣೆ ಕರಿಷ್ಮಾ ಪ್ರಕಾಶ್ ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ.

ಡ್ರಗ್ಸ್ ಘಾಟು: ದೀಪಿಕಾ ಮ್ಯಾನೇಜರ್ ಮನೆಯಲ್ಲಿ ಸಿಕ್ತು ಗಾಂಜಾ ಎಣ್ಣೆ

ಈ ವಿಚಾರವಾಗಿ ವರದಿ ಮಾಡುವಾಗ ಸುಳ್ಳು ವಿಚಾರ ಪಸರಿಸದಂತೆ ಮಾಧ್ಯಮಗಳಲ್ಲಿ ಕೇಳಿಕೊಳ್ಳುತ್ತೇವೆ ಎಂದು KWAN ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಸುಬ್ರಮಣಿಯಂ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಎನ್‌ಸಿಬಿ ಮತ್ತೊಮ್ಮೆ ಕರಿಷ್ಮಾಗೆ ನೋಟಿಸ್ ಕಳುಹಿಸಿದೆ. ಆದರೆ ಡ್ರಗ್ಸ್ ಸೀಝ್ ಆದಾಗಿನಿಂದಲೂ ಕರಿಷ್ಮಾ ಮಾತ್ರ ತಲೆ ಮರೆಸಿಕೊಂಡಿದ್ದಾರೆ.