ಕರ್ವಾ ಚೌತ್ : ಗಂಡನಿಗಾಗಿ ಉಪವಾಸ ಮಾಡದ ಬಾಲಿವುಡ್ ನಟಿಯರಿವರು!
ಇಂದು ಅಂದರೆ ನವೆಂಬರ್ 4 ರಂದು ಕಾರ್ವಾ ಚೌತ್ ಹಬ್ಬವನ್ನು ದೇಶದ್ಯಾಂತ ಆಚರಿಸಲಾಗುವುದು. ಪತಿಯ ಧೀರ್ಘ ಆಯಸ್ಸಿಗೆ ಪತ್ನಿಯರು ಉಪವಾಸ ಮಾಡುವ ಮೂಲಕ ಈ ವ್ರತ ತುಂಬಾ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಬಾಲಿವುಡ್‌ನ ಸೆಲೆಬ್ರೆಟಿಗಳು ಸಹ ಈ ಹಬ್ಬವನ್ನು ತುಂಬಾ ಸಡಗರದಿಂದ ಅಚರಿಸುತ್ತಾರೆ. ನಟಿಯರು ತಮ್ಮ ಪತಿಗಾಗಿ ದಿನವೀಡಿ ಉಪವಾಸವಿರುವುದು ಕಾಣುತ್ತೇವೆ. ಆದರೆ ಕೆಲವು ನಟಿಯರು ಈ ವರೆಗೆ ಎಂದಿಗೂ ಈ ವ್ರತವನ್ನೂ ಮಾಡಿಲ್ಲ.
ಕರೀನಾ ಮದುವೆಯಾಗಿ 8 ವರ್ಷಗಳಾಗಿವೆ, ಆದೇ ಹೇಮಾ ಮಾಲಿನಿ ಮದುವೆಗೆ 40 ವರ್ಷಗಳಿಗಿಂತ ಹೆಚ್ಚು. ವರದಿಗಳ ಪ್ರಕಾರ, ಈ ನಟಿಯರು ಕಾರ್ವಾ ಚೌತ್ ಮೇಲೆ ಉಪವಾಸ ಮಾಡದಿರಲು ತಮ್ಮದೇ ಕಾರಣ ಹೊಂದಿದ್ದಾರೆ.
ಮದುವೆಯ 19 ವರ್ಷಗಳಲ್ಲಿ ಎಂದಿಗೂ ಟ್ವಿಂಕಲ್ ಖನ್ನಾ ತನ್ನ ಪತಿ ಅಕ್ಷಯ್ ಕುಮಾರ್ ಅವರ ದೀರ್ಘಾ ಅಯಸ್ಸಿಗಾಗಿ ಉಪವಾಸ ಮಾಡಿಲ್ಲ. ಹಸಿವಿನಿಂದ ಪತಿಯ ವಯಸ್ಸನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಟ್ವಿಂಕಲ್ ನಂಬುತ್ತಾರೆ. ಅವರು ಕೆಲವು ವರ್ಷಗಳ ಹಿಂದೆ ಈ ಉಪವಾಸ ಮಾಡುವುದು ಯುಸ್‌ಲೆಸ್ ಎಂದು ಟ್ವೀಟ್‌ನಲ್ಲಿ ಬರೆದಿದ್ದರು. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿತ್ತು.
ವಿದ್ಯಾ ಬಾಲನ್ ಕೂಡ ಮದುವೆಯ ನಂತರ ಕಾರ್ವಾಚೌತ್ ಉಪವಾಸವನ್ನು ಆಚರಿಸದ ಇನ್ನೊಬ್ಬ ನಟಿ. ವಿದ್ಯಾ ಕರ್ವಾ ಚೌತ್‌ನ ಉಪವಾಸವನ್ನು ನಂಬುವುದಿಲ್ಲ. ಆದರೆ ಈ ದಿನ ತನ್ನ ಗಂಡನೊಂದಿಗೆ ಸಮಯ ಕಳೆಯಲು ಮರೆಯುವುದಿಲ್ಲ. ಈ ಸಂದರ್ಭದಲ್ಲಿ, ವಿದ್ಯಾ ಹೆಚ್ಚಾಗಿ ಭಾರತೀಯ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಮದುವೆಯ ನಂತರ ತನ್ನ ಮೊದಲ ಕಾರ್ವಾ ಚೌತ್‌ನಲ್ಲಿ ಸೋನಂ ಕೈಗೆ ಮೆಹಂದಿ ಹಾಕಿಕೊಂಡು ಮಧುಮಗಳಂತೆ ಆಲಕಂರಿಸಿಕೊಂಡು ಆಚರಿಸಿದ್ದರು. ಆದರೆ ತನ್ನ ಪತಿಗಾಗಿ ಉಪವಾಸ ಮಾಡಲಿಲ್ಲ. ಸೋನಂ ತನಗಾಗಿ ಕಾರ್ವಾ ಚೌತ್ ಉಪವಾಸ ಮಾಡುವುದು ಪತಿ ಆನಂದ್‌ಗೆ ಇಷ್ಟವಿಲ್ಲ.
ಸಿಂಧಿ ಕುಟುಂಬದ ಸೊಸೆಯಾಗಿದ್ದರೂ, ದೀಪಿಕಾ ಪಡುಕೋಣೆ ಇನ್ನೂ ಕರ್ವಾ ಚೌತ್ ಉಪವಾಸವನ್ನು ಆಚರಿಸಿಲ್ಲ. ಸಿಂಧಿ ಸಮೂದಾಯದಲ್ಲಿ ಬಹಳ ಆಡಂಬರದಿಂದ ಆಚರಿಸುವ ಈ ಹಬ್ಬವನ್ನು ತೀಜಡಿ ಪರ್ವ್ ಎಂದು ಕರೆಯಲಾಗುತ್ತದೆ. ತಮ್ಮಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಪರಸ್ಪರ ಬೆಂಬಲಿಸುವುದು ಹೆಚ್ಚು ಮುಖ್ಯ ಎಂದು ದೀಪಿಕಾ ನಂಬುತ್ತಾರೆ.
ಪಟೌಡಿ ರಾಜವಂಶದ ಸೊಸೆ ಕರೀನಾ ಕರ್ವಾ ಚೌತ್‌ನ ಉಪವಾಸವನ್ನು ಎಂದಿಗೂ ಆಚರಿಸಿಲ್ಲ. ಈ ದಿನದಂದು ತನ್ನ ದೈನಂದಿನ ಕೆಲಸಗಳನ್ನು ಮಾಡಲು ಇಷ್ಟಪಡುವ ಕರೀನಾ ಗಂಡನ ಮುಂದೆ ಪ್ರೀತಿಯನ್ನು ವ್ಯಕ್ತಪಡಿಸಲು ಕಾರ್ವಾ ಚೌತ್‌ನ ಉಪವಾಸದ ಅಗತ್ಯವಿಲ್ಲ ಎಂದು ನಂಬುತ್ತಾರೆ. ಇದಲ್ಲದೆ, ಹಸಿವಿನಿಂದ ಭಯದಿಂದ ಕರೀನಾಗೆ ಉಪವಾಸವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲವಂತೆ.
ದಕ್ಷಿಣ ಭಾರತ ಮೂಲದ ಹೇಮಾ ಮಾಲಿನಿ ಪಂಜಾಬಿ ಕುಟುಂಬದ ಸೊಸೆ. ಪಂಜಾಬಿಗಳಿಗೆ ಕಾರ್ವಾ ಚೌತ್ ಆಚರಣೆ ಸಡಗರ. ಆದರೆ ಮದುವೆಯಾದ 40 ವರ್ಷಗಳ ನಂತರವೂ ಹೇಮಾ ಈ ಉಪವಾಸ ಎಂದಿಗೂ ಆಚರಿಸಿಲ್ಲ. ಪ್ರೀತಿ ಹೃದಯದಿಂದ ಬಂದಿದೆ ಎಂದು ಅವರು ಹೇಳುತ್ತಾರೆ.