ಸೈಫ್ ದೇಶದ ಜನಸಂಖ್ಯೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ; ಪ್ರೆಗ್ನೆನ್ಸಿ ವದಂತಿಗೆ ಕರೀನಾ ರಿಯಾಕ್ಷನ್
ಕರೀನಾ ಮತ್ತೆ ಗರ್ಭಿಣಿ ಎಂದು ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. 'ನನ್ನ ಕೈಯಲ್ಲಿರುವುದು ಪಾಸ್ತ ಮತ್ತು ವೈನ್' ಎಂದಿದ್ದಾರೆ. ಪ್ರೆಗ್ನೆನ್ಸಿ ವದಂತಿ ಬಗ್ಗೆ, 'ಶಾಂತವಾಗಿರಿ... ನಾನು ಗರ್ಭಿಣಿಯಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ವಿದೇಶಿ ಪ್ರವಾಸದಲ್ಲಿದ್ದಾರೆ. ಇಟಲಿಯಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಕರೀನಾ ದಂಪತಿ ಸಾಕಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇಬ್ಬರು ಮಕ್ಕಳಾದ ತೈಮೂರ್ ಮತ್ತು ಜೇಯ್ ಜೊತೆ ಕರೀನಾ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕರೀನಾ ಶೇರೇ ಮಾಡಿದ ಫೋಟೋ ನೋಡಿದ ನೆಟ್ಟಿಗರು ಕರೀನಾ 3ನೇ ಬಾರಿ ಪ್ರಗ್ನೆಂಟ್ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕರೀನಾ ಬೇಬಿ ಬಂಪ್ ಕಾಣುತ್ತಿದೆ, ಮತ್ತೆ ಗರ್ಭಿಣಿ ಆಗಿದ್ದಾರೆ ಎಂದು ನೆಟ್ಟಿಗರು ರಿಯಾಕ್ಟ ಮಾಡುತ್ತಿದ್ದಾರೆ. ಐಶ್ವರ್ಯಾ ರೈ 2ನೇ ಬಾರಿ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಕರೀನಾ ಪ್ರೆಗ್ನೆನ್ಸಿ ರೂಮರ್ಸ್ ವೈರಲ್ ಆಗಿದೆ.
ಕರೀನಾ ಮತ್ತೆ ಗರ್ಭಿಣಿ ಎಂದು ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. 'ನನ್ನ ಕೈಯಲ್ಲಿರುವುದು ಪಾಸ್ತ ಮತ್ತು ವೈನ್' ಎಂದಿದ್ದಾರೆ. ಪ್ರೆಗ್ನೆನ್ಸಿ ವದಂತಿ ಬಗ್ಗೆ, 'ಶಾಂತವಾಗಿರಿ... ನಾನು ಗರ್ಭಿಣಿಯಲ್ಲ... ಉಫ್... ಸೈಫ್ ಈಗಾಗಲೇ ನಮ್ಮ ದೇಶದ ಜನಸಂಖ್ಯೆಗೆ ಸಾಕಷ್ಟು ಕೊಡುಗೆ ನೀಡಿರುವುದಾಗಿ ಹೇಳಿದ್ದಾರೆ...ಎಂಜಾಯ್' ಎಂದು ಹೇಳಿದರು. ಕರೀನಾರಿಯಾಕ್ಷನ ವೈರಲ್ ಆಗಿದೆ.
ಕರೀನಾ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಆಮೀರ್ ಖಾನ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕರೀನಾ ಕಪೂರ್ ಎರಡನೇ ಬಾರಿ ಗರ್ಭಿಣಿ ಆಗಿದ್ದಾಗ ಚಿತ್ರೀಕರಣ ಪೂರ್ಣಗೊಳಿಸಿದರು. ಲಾಕ್ ಡೌನ್ ಬಳಿಕ ಗರ್ಭಿಣಿ ಕರೀನಾ ಚಿತ್ರೀಕರಣದಲ್ಲಿ ಭಾಗಿಯಾಗುವ ಮೂಲಕ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ಮುಗಿಸಿದ್ದರು. ಸದ್ಯ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಿನಿರೀಕ್ಷೆಯ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಇತ್ತೀಚಿಗಷ್ಟೆ ಆಮೀರ್ ಖಾನ್ ಸೌತ್ ಸ್ಟಾರ್ ಗಳಾದ ಚಿರಂಜೀವಿ, ರಾಜಮೌಳಿ, ನಾಗಾರ್ಜುನ ಸೇರಿದಂತೆ ಅನೇಕರಿಗೆ ಸಿನಿಮಾ ತೋರಿಸಿದ್ದಾರೆ. ಸೌತ್ ಸ್ಟಾರ್ಸ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನೇನಿದ್ರು ಅಭಿಮಾನಿಗಳು ಸಿನಿಮಾ ನೋಡಿ ಪ್ರತಿಕ್ರಿಯೆ ನೀಡುವುದೊಂದು ಬಾಕಿ ಇದೆ.
40 ಸಾವಿರ ರೂ. ಟೀ ಶರ್ಟ್ ಧರಿಸಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿರುವ ಕರೀನಾ ಕಪೂರ್
ಐಶ್ವರ್ಯಾ ರೈ ಪ್ರಗ್ನೆನ್ಸಿ ವದಂತಿ
ಐಶ್ವರ್ಯಾ ರೈ ಮತ್ತೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಐಶ್ವರ್ಯಾ ಎರಡನೇ ಬಾರಿ ತಾಯಿಯಾಗುತ್ತಿದ್ದಾರೆ ಎನ್ನುವ ಅನುಮಾನಕ್ಕೆ ಕಾರಣವಾಗಿದ್ದು ಐಶ್ವರ್ಯಾ ಅವರ ಆ ಒಂದು ವಿಡಿಯೋ. ಮಾಜಿ ವಿಶ್ವ ಸುಂದರಿ ಕುಟುಂಬದ ಜೊತೆ ವಿದೇಶಿ ಪ್ರವಾಸಕ್ಕೆ ತೆರಳಿದ್ದರು. ಅಭಿಷೇಕ್ ಬಚ್ಚನ್, ಆರಾಧ್ಯ ಮತ್ತು ಐಶ್ವರ್ಯಾ ವಿದೇಶದಲ್ಲಿ ಹಾಲಿಡೇ ಎಂಜಾಯ್ ಮಾಡಿದ ಫೋಟೋಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದೀಗ ಭಾರತಕ್ಕೆ ವಾಪಾಸ್ ಆಗಿರುವ ಐಶ್ವರ್ಯಾ ನೋಡಿ ನೆಟ್ಟಿಗರು ಐಶ್ವರ್ಯಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಒಂದೇ ಡಿಸೈನರ್ ಡ್ರೆಸ್ಸಲ್ಲಿ ಬಾಲಿವುಡ್ ನಟಿಯರ ಪ್ರೆಗ್ನೆನ್ಸಿ ರಿವೀಲ್: ಏನೀದರ ಗುಟ್ಟು?
ವಿಮಾನ ನಿಲ್ದಾಣದಿಂದ ಐಶ್ವರ್ಯಾ ಮಗಳು ಮತ್ತು ಪತಿ ಜೊತೆ ಹೊರಗೆ ಬರುತ್ತಿರುವ ವಿಡಿಯೋದಲ್ಲಿ ಐಶ್ವರ್ಯಾ ಗರ್ಭಿಣಿಯ ಹಾಗೆ ಕಾಣಿಸುತ್ತಿದ್ದಾರೆ. ಕಪ್ಪು ಬಣ್ಣದ ಸಡಿಲ ಬಟ್ಟೆ ಧರಿಸಿದ್ದ ಐಶ್ವರ್ಯಾ ತನ್ನ ಹೊಟ್ಟೆಯ ಭಾಗವನ್ನು ಡ್ರೆಸ್ ನಿಂದ ಮುಚ್ಚಿಕೊಳ್ಳುತ್ತಾರೆ. ಐಶ್ವರ್ಯಾ ಅವರ ಈ ವಿಡಿಯೋ ನೋಡಿದ ಬಹುತೇಕರು ಮಾಜಿ ವಿಶ್ವ ಸುಂದರಿ ಮತ್ತೆ ಗರ್ಭಿಣಿ ಆಗಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಗ್ಲಾಮರ್ ಬಟ್ಟೆಯಲ್ಲಿ ಕಾಣಿಸುತ್ತಾರೆ. ಆದರೆ ಐಶ್ವರ್ಯಾ ಧರಿಸಿದ್ದ ಬಟ್ಟೆ ಹೈಲೆಟ್ ಆಗಿದ್ದು ಗರ್ಭಿಣಿ ವದಂತಿಗೆ ಕಾರಣವಾಗಿದೆ.