40 ಸಾವಿರ ರೂ. ಟೀ ಶರ್ಟ್ ಧರಿಸಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿರುವ ಕರೀನಾ ಕಪೂರ್
ಕರೀನಾ ಕಪೂರ್ ತನ್ನ ಕುಟುಂಬದ ಜೊತೆ ಮುಂಬೈನ ಬಾಂದ್ರದಲ್ಲಿ ವಾಸವಾಗಿದ್ದಾರೆ. ಹಳದಿ ಬಣ್ಣದ ಟೀ ಶರ್ಟ್ ಧರಿಸಿರುವ ಕರೀನಾ ಇತ್ತೀಚಿಗೆ ಕ್ಯಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇದರಲ್ಲಿ ಏನು ವಿಶೇಷ ಅಂತೀರಾ..?ಅಷ್ಟಕ್ಕೂ ಕರೀನಾ ಧರಿಸಿರುವ ಈ ಟೀ ಶರ್ಟ್ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಹೌದು, ಬರೋಬ್ಬರಿ 40 ಸಾವಿರ ಬೆಲೆಬಾಳುವ ಟೀ ಶರ್ಟ್ ಇದಾಗಿದೆ.
ಬಾಲಿವುಡ್ ನಟಿ ಕರೀನಾ ಕಪೂರ್(Kareena Kapoor) ಸದ್ಯ ಇಬ್ಬರು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಎರಡನೇ ಮಗುವಿಗೆ ಜನ್ಮ ನೀಡಿದ ಬಳಿಕ ಕರೀನಾ ಮತ್ತೆ ಸಿನಿಮಾ ಮಾಡಿಲ್ಲ. ಅಲ್ಲದೇ ಇನ್ನು ಯಾವ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಆದರೂ ಕರೀನಾ ಸದಾ ಸುದ್ದಿಯಲ್ಲಿರುತ್ತಾರೆ. ಕ್ಯಾಮರಾ ಮುಂದೆ ಆಗಾಗಾ ಕಾಣಿಸಿಕೊಳ್ಳುತ್ತಿರುತ್ತಾರೆ. ಇಬ್ಬರು ಮಕ್ಕಳ ಜೊತೆ ಹೆಚ್ಚಾಗಿ ಸಮಯ ಕಳೆಯುತ್ತಿರುವ ನಟಿ ಕರೀನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೀಗ ಕರೀನಾ ಟೀ ಶರ್ಟ್ ವಿಚಾರವಾಗಿ ಸುದ್ದಿಯಾಗಿದ್ದಾರೆ. ಅಲ್ಲದೇ ದುಬಾರಿ ಬೆಲೆಯ ಟೀ ಶರ್ಟ್ ಧರಿಸಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.
ಕರೀನಾ ಕಪೂರ್ ಮುಂಬೈನ ಬಾಂದ್ರದಲ್ಲಿ ವಾಸವಾಗಿದ್ದಾರೆ. ಹಳದಿ ಬಣ್ಣದ ಟೀ ಶರ್ಟ್ ಧರಿಸಿರುವ ಕರೀನಾ ಇತ್ತೀಚಿಗೆ ಕ್ಯಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇದರಲ್ಲಿ ಏನು ವಿಶೇಷ ಅಂತೀರಾ..?ಅಷ್ಟಕ್ಕೂ ಕರೀನಾ ಧರಿಸಿರುವ ಈ ಟೀ ಶರ್ಟ್ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಹೌದು, ಬರೋಬ್ಬರಿ 40 ಸಾವಿರ ಬೆಲೆಬಾಳುವ ಟೀ ಶರ್ಟ್ ಇದಾಗಿದೆ. ಅತ್ಯಂತ ದುಬಾರಿ ಬ್ಯ್ರಾಂಡ್‌ಗಳಲ್ಲಿ ಒಂದಾಗಿರುವ ಗುಚ್ಚಿ(Gucci) ಬ್ರ್ಯಾಂಡ್‌ನ ಟೀ ಶರ್ಟ್ ಇದು.
ಮನೆಯಲ್ಲಿ ಇರುವಾಗಲೂ ಇಷ್ಟು ದುಬಾರಿ ಟೀ ಶರ್ಟ್ ಧರಿಸಿಬೇಕಾ ಎಂದು ನೆಟ್ಟಗರು ಕರೀನಾ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಈ ಟೀ ಶರ್ಟ್ ತುಂಬಾ ಸುಲಭವಾಗಿ 150 ರೂಪಾಯಿಗೆ ಸರೋಜಿನಿ ಅಥವಾ ಜಮಪಥ್ ಮಾರ್ಕೆಟ್‌ನಲ್ಲೇ ಕೊಂಡುಕೊಳ್ಳಬಹುದು ಎಂದಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ ಇದಕ್ಕಿಂತ ನನ್ನ 200 ರೂ. ಟೀ ಶರ್ಟ್ ಸುಂದರವಾಗಿದೆ ಎಂದು ಕರಿನಾ ಕಾಲೆಳೆಯುತ್ತಿದ್ದಾರೆ.
Kareena Kapoor ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿರುವ Jeh Ali Khan
ಅಂದಹಾಗೆ ದುಬಾರಿ ಬೆಲೆಯ ಬಟ್ಟೆ ಅಥವಾ ಜ್ಯುವೆಲ್ಲರಿ ಧರಿಸುವುದು ಸೆಲೆಬ್ರಿಟಿಗಳಿಗೆ ಕಾಮನ್. ದುಬಾರಿ ಬೆಲೆಯ ಬಟ್ಟೆಯ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಪ್ರಿಯಾಂಕಾ ಚೋಪ್ರಾ, ಮಲೈಕಾ ಅರೋರಾ, ಪರಿಣೀತಿ ಚೋಪ್ರಾ ಸೇರಿದಂತೆ ಅನೇಕರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.ಇದೀಗ ಕರೀನಾ ಕೂಡ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸಿ ಎಂದ ನೆಟ್ಟಿಗರು; ನಟ-ನಟಿಯ ಹೇಳಿಕೆಯೇ ಚಿತ್ರಕ್ಕೆ ಮುಳುವಾಯ್ತು!
ಕರೀನಾ ಕಪೂರ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಿಡುಗೆಡೆಗೆ ಕಾಯುತ್ತಿದ್ದಾರೆ. ಕರೀನಾ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ ಇದಾಗಿದೆ. ಈ ಸಿನಿಮಾ ಬಳಿಕ ಯಾವುದೇ ಚಿತ್ರ ಘೋಷಣೆ ಮಾಡಿಲ್ಲ.ಆಮೀರ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಅಂದಹಾಗೆ ಈ ಸಿನಿಮಾ ಹಾಲಿವುಡ್‌ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾ 1994ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಕಾಬಂದಬರಿ ಆಧಾರಿತ ಚಿತ್ರವಾಗಿದೆ. ಈ ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೆ ಐಪಿಎಲ್ ಐನಲ್ ಪಂದ್ಯದ ವೇಲೆ ರಿಲೀಸ್ ಮಾಡುವ ಮೂಲಕ ಆಮೀರ್ ಖಾನ್ ಗಮನ ಸೆಲೆದಿದ್ದರು.