ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತಮ್ಮ ಬ್ಯೂಟಿ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅವರ ಫಿಟ್ನೆಸ್ ಗೆ ಕಾರಣ ಏನು ಎಂಬುದನ್ನು ಹೇಳಿದ್ದಾರೆ.
ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ (Bollywood Bebo Kareena Kapoor Khan) ಎರಡು ಮಕ್ಕಳಾದ್ರೂ ಇನ್ನು ಬಳಕುವ ಬಳ್ಳಿಯಂತಿದ್ದಾರೆ. ಅವರ ಹೊಳೆಯುವ ಸ್ಕಿನ್, ಆಕರ್ಷಕ ಮೈಕಟ್ಟು ಯುವಕರನ್ನು ಸೆಳೆಯುತ್ತೆ. ಕರೀನಾ ಕಪೂರ್ ಖಾನ್ ಸನ್ಯಾಸಿ ಜೀವನವೇ ಇದಕ್ಕೆ ಕಾರಣ. ತಮ್ಮ ಆರೋಗ್ಯ ಹಾಗೂ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಕರೀನಾ ಕಪೂರ್ ಖಾನ್, ಸ್ಟ್ರಿಕ್ಟ್ ರೂಲ್ಸ್ ಫಾಲೋ ಮಾಡ್ತಾರೆ. ಸಂದರ್ಶನವೊಂದರಲ್ಲಿ ಕರೀನಾ ತಮ್ಮ ದಿನಚರಿ ಹಾಗೂ ಫಿಟ್ನೆಸ್ ಗೆ ಎಷ್ಟು ಆದ್ಯತೆ ನೀಡ್ತೇನೆ ಅನ್ನೋದನ್ನು ಹೇಳಿದ್ದಾರೆ.
ಆಶ್ರಮದಲ್ಲಿ ವಾಸಿಸುವ ತಪಸ್ವಿಯಂತೆ ಕರೀನಾ ಜೀವನ : ಇಬ್ಬರು ಮಕ್ಕಳಾದ್ಮೇಲೆ ಕರೀನಾ ಲೈಫ್ ಸ್ಟೈಲ್ ಮತ್ತಷ್ಟು ಬದಲಾಗಿದೆ. ಕರೋನಾ ನಂತ್ರ ಕರೀನಾಗೆ ಫಿಟ್ನೆಸ್, ಆರೋಗ್ಯ, ವ್ಯಾಯಾಮ ಎಷ್ಟು ಮುಖ್ಯ ಅನ್ನೋದು ಮತ್ತಷ್ಟು ಅರಿವಿಗೆ ಬಂದಿದೆಯಂತೆ. ಸೌಂದರ್ಯಕ್ಕಿಂತ ಆರೋಗ್ಯಕ್ಕಾಗಿ ನಾವು ಫಿಟ್ ಆಗಿರ್ಬೇಕು ಎನ್ನುತ್ತಾರೆ ಕರೀನಾ. ಕರೀನಾ ಪ್ರತಿ ದಿನ ಕಠಿಣ ದಿನಚರಿ ಫಾಲೋ ಮಾಡ್ತಾರೆ. ಸಂಜೆ ಆರು ಗಂಟೆಯೊಳಗೆ ಅವರ ಡಿನ್ನರ್ ಮುಗ್ದಿರುತ್ತೆ. ರಾತ್ರಿ 9.30 ಆಗ್ತಿದ್ದಂತೆ ಕರೀನಾ ಮನೆ ಲೈಟ್ ಬಂದ್ ಆಗುತ್ತೆ. ಕರೀನಾ ಬೇಗ ಮಲಗಿ ಬೇಗ ಏಳು ರೂಲ್ಸ್ ಫಾಲೋ ಮಾಡ್ತಾರೆ. ಮನೆಯಲ್ಲಿದ್ರೆ 9.30ಕ್ಕೆ ಹಾಸಿಗೆಗೆ ಹೋಗ್ತಾರೆ ಕರೀನಾ. ದೇಹಕ್ಕೆ ಸರಿಯಾದ ಸಮಯಕ್ಕೆ ಆಹಾರ ಹಾಗೂ ವಿಶ್ರಾಂತಿ ನೀಡಿದ್ರೆ ಅದು ನಮಗೆ ಸಪೋರ್ಟ್ ಮಾಡುತ್ತೆ ಅಂತಾರೆ ಕರೀನಾ.
ವರ್ಕ್ ಔಟ್ ವಿಷ್ಯದಲ್ಲಿ ರಾಜೀ ಮಾಡ್ಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಕರೀನಾ. ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ, ಯೋಗ ಅಂತ ಕರೀನಾ ಬ್ಯುಸಿಯಾಗ್ತಾರೆ. ಇದನ್ನು ಕರೀನಾ ಟ್ರೈನರ್ ಮಹೇಶ್ ಘನೇಕರ್ ಕೂಡ ಹೇಳಿದ್ದಾರೆ. ಕರೀನಾ ವಾರದಲ್ಲಿ 4 ದಿನ ವೇಟ್ ಟ್ರೈನಿಂಗ್ ಹಾಗೂ ಫಂಕ್ಷನಲ್ ಮೂಮೆಂಟ್ ಮೇಲೆ ಗಮನಹರಿಸ್ತಿದ್ದಾರೆ. ಇದರಿಂದಾಗಿ ಕರೀನಾ ಶಕ್ತಿ ಹೆಚ್ಚಾಗಿದೆ. ಅವರ ತೂಕ 67.5 ಕೆಜಿಯಿಂದ 64 ಕೆಜಿಗೆ ಇಳಿದಿದೆ.
ಮನೆ ಆಹಾರಕ್ಕೆ ಆದ್ಯತೆ : ಕರೀನಾ ಮನೆಯಲ್ಲಿ ತಯಾರಿಸಿದ ಆಹಾರವನ್ನು ಹೆಚ್ಚಾಗಿ ತಿಂತಾರೆ. ಪ್ರತಿದಿನ ಪೌಷ್ಟಿಕ ಮತ್ತು ದೇಸಿ ಊಟವನ್ನು ಇಷ್ಟಪಡ್ತಾರೆ. ದಾಲ್-ರೈಸ್, ಖಿಚಡಿ ಅಥವಾ ಜೋಳ ರೊಟ್ಟಿ ಅವರ ಮೊದಲ ಆದ್ಯತೆ. ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಪ್ರಕಾರ, ಕರೀನಾ ಟ್ರೆಂಡಿ ಡಯಟ್ಗಳಿಗಿಂತ ಮನೆಯಲ್ಲಿ ತಯಾರಿಸಿದ ಆಹಾರವನ್ನು ಬಯಸ್ತಾರಂತೆ.
ವರ್ಕ್ ಔಟ್ ಮಾಡಿಲ್ಲ ಅಂದ್ರೆ ಮೂಡ್ ಹಾಳು : ಕರೀನಾ ಪ್ರತಿ ದಿನದ ವರ್ಕ್ ಔಟ್ ಗೆ ಒಗ್ಗಿಕೊಂಡಿದ್ದಾರೆ. ಒಂದು ದಿನ ವರ್ಕ್ ಔಟ್ ಮಾಡಿಲ್ಲ ಅಂದ್ರೂ ಅವರ ಮೂಡ್ ಹಾಳಾಗುತ್ತೆ. ವರ್ಕ್ ಔಟ್ ನನ್ನ ಮೂಡ್ ಬೂಸ್ಟರ್ ಎಂದಿದ್ದಾರೆ ಕರೀನಾ.
ಕರೀನಾ ದಿನಚರಿಗೆ ಒಗ್ಗಿಕೊಂಡ ಫ್ರೆಂಡ್ಸ್ : ಕರೀನಾ ಯಾವಾಗ ಏನು ಮಾಡ್ತಾರೆ ಅನ್ನೋದು ಫ್ರೆಂಡ್ಸ್ ಗೆ ತಿಳಿದಿದೆ. ಹಾಗಾಗಿ ಕರೀನಾಗೆ ಡಿಸ್ಟರ್ಬ್ ಮಾಡೋಕೆ ಬರೋದಿಲ್ವಂತೆ. ಪಾರ್ಟಿಗಾಗಿ ನನ್ನನ್ನು ಅವ್ರು ಕಾಯೋದಿಲ್ಲ. ಈ ಟೈಂನಲ್ಲಿ ನಾನು ಶಿಟ್ಸ್ ಕ್ರೀಕ್ ನೋಡ್ತಿರ್ತೇನೆ ಅನ್ನೋದು ಅವರಿಗೆ ಗೊತ್ತು ಎಂದಿದ್ದಾರೆ ಕರೀನಾ. ಸೈಫ್ ಅಲಿ ಖಾನ್ ಹಾಗೂ ಮಕ್ಕಳ ಜೊತೆ ಹೆಚ್ಚು ಟೈಂ ಕಳಿಯುವ ಕರೀನಾ ಹ್ಯಾಪಿಯಾಗಿರಲು ಇಷ್ಟಪಡ್ತಾರೆ.
ಕರೀನಾ ಕಪೂರ್ ಸದ್ಯ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಒಂದಾದ್ಮೇಲೆ ಒಂದರಂತೆ ಸಾಕಷ್ಟು ಸಿನಿಮಾ ಅವ್ರ ಕೈನಲ್ಲಿದೆ. ವಿರೇದಿ ವೆಡ್ಡಿಂಗ್ 2, ಡೈರಾ, ತಖ್ತ್ ಸಿನಿಮಾ ಸದ್ಯ ಶೂಟಿಂಗ್ ಹಂತದಲ್ಲಿದೆ. ಹಿಂದಿನ ವರ್ಷ ಸಿಂಗಮ್ ಅಗೇನ್, ಬಕಿಂಗ್ಹ್ಯಾಮ್ ಮರ್ಡರ್ ಸೇರಿದಂತೆ ಮೂರು ಸಿನಿಮಾ ತೆರೆ ಕಂಡಿತ್ತು.


