ಎರಡನೇ ಪ್ರೆಗ್ನೆಂನ್ಸಿ ಎಂಜಾಯ್ ಮಾಡುತ್ತಿರುವ ನಟಿ ಕರೀನಾ ಕಪೂರ್‌ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚೀಟ್ ಮೀಲ್‌ ಬಗ್ಗೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಪ್ರೆಗ್ನೆಂನ್ಸಿ ರಿವೀಲ್ ಮಾಡಿದಾಗಿನಿಂದಲೂ ಪ್ರತೀ ಕ್ಷಣವನ್ನೂ ಸೈಫ್ ಹಾಗೂ ಕರೀನಾ ಎಂಜಾಯ್ ಮಾಡುತ್ತಿದ್ದಾರೆ. 

ಲಾಕ್‌ಡೌನ್‌ ಸಮಯದಲ್ಲಿ ಅನೌನ್ಸ್ ಮಾಡಿದ ಕಾರಣ ಯಾರಿಗೂ ಕರೀನಾಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಆದರೆ ಚಿತ್ರೀಕರಣ ಪ್ರಾರಂಭವಾದ ದಿನದಿಂದಲೇ ಎಲ್ಲಾ ಕ್ಯಾಮೆರಾಗಳು ಕರೀನಾ ಸುತ್ತವೇ ಸುತ್ತುತ್ತಿರುತ್ತವೆ. ತೈಮೂರ್‌ಗೆ ತಮ್ಮನೋ ಅಥವಾ ತಂಗಿಯೋ ಎಂದು ನೆಟ್ಟಿಗರು ಗೆಸ್‌ ಮಾಡುತ್ತಿದ್ದಾರೆ. ಮುಂದಿನ ವರ್ಷ ಪುಟ್ಟ ಕಂದಮ್ಮನನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಕರೀನಾ ಕುಟುಂಬ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ, ಎನ್ನಲಾಗಿದೆ.

ಜಂಪ್‌ ಸೂಟ್‌ - ಶೀಮ್ಮರಿ ಡ್ರೆಸ್‌ : ಕರೀನಾಳ ಮೆಟರ್ನಿಟಿ ಫ್ಯಾಷನ್‌! 

ಪ್ರೆಗ್ನೆಂಟ್ ಆಗಿದ್ದರೂ ನಾನ್‌ ಸ್ಟಾಪ್ ಕೆಲಸ ಮಾಡುವ ಕರೀನಾ ಕಪೂರ್ ಅನೇಕ ಅಮ್ಮಂದಿರಿಗೆ ರೋಲ್ ಮಾಡೆಲ್. ಕರೀನಾ ಆಹಾರ ಸೇವನೆ ಹೇಗಿರುತ್ತದೆ, ಈಗಲೂ ಡಯಟ್ ಮಾಡುತ್ತಾರಾ ಎಂದು ಪ್ರಶ್ನಿಸುತ್ತಿದ್ದವರಿಗೆ ಇಲ್ಲಿದೆ ಉತ್ತರ...

ಕರೀನಾ ಕಪೂರ್‌ಗೆ ಸಿಹಿ ತಿನಿಸುಗಳೆಂದರೆ ತುಂಬಾ ಇಷ್ಟ. ಬಿಡುವಿನ ಸಮಯದಲ್ಲಿ ಕರೀನಾ ವೆಬ್‌ ಸೀರಿಸ್‌ ನೋಡುತ್ತಾ ಸಿಹಿ ತಿನಿಸುಗಳನ್ನು ಎಂಜಾಯ್ ಮಾಡಿದ್ದಾರೆ. ಅದರಲ್ಲೂ  Waffles with maple syrup ಇರುವ ಫೋಟೋ ಶೇರ್ ಮಾಡಿಕೊಂಡು 'ಇದು ನನ್ನ ಊಟನಾ ಅಥವಾ ಚೀಟ್ ಊಟನಾ. ಇನ್ನು ಮೂರು ತಿಂಗಳು ಈ ಪ್ರಶ್ನೆಗೆ ಉತ್ತರವೇ ಇಲ್ಲ,' ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ನಟರ ಮೊದಲ, 2ನೇ ಹೆಂಡತಿಯರ ಸಂಬಂಧ ಹೇಗಿದೆ?

ಕರೀನಾ ಸೇವಿಸುತ್ತಿದ್ದ ವ್ಯಾಫಲ್ಸ್ ಫೋಟೋ ನೋಡಿ ಕೆಲವರು ಶಾಕ್ ಆಗಿದ್ದಾರೆ. ಗರ್ಭಿಣಿಯಾಗಿ ಇದನ್ನು ಊಟದ ರೀತಿಯಲ್ಲಿ ಸೇವಿಸುತ್ತಾರಾ ಎಂದು ಚಿಂತಿಸುತ್ತಿದ್ದಾರೆ.