ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಪತ್ನಿ ವಿರುದ್ಧ ಅನೈತಿಕ ಸಂಬಂಧ ಆರೋಪ ಮಾಡಿದ್ದಾರೆ. ರಾಜೀವ್ ಆರೋಪಕ್ಕೆ ಕರಣ್ ಮೆಹ್ರಾ ಪ್ರತಿಕ್ರಿಯೆ ನೀಡಿದ್ದಾರೆ. 

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ದಾಂಪತ್ಯ ಕಲಹ ಬೀದಿಗೆ ಬಂದಿದೆ. ರಾಜೇವ್ ವಿರುದ್ಧ ಪತ್ನಿ ಚಾರು ಅಸೋಪಾ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ರಾಜೀವ್ ತನ್ನ ಪತ್ನಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದರು. ಕಿರುತೆರೆಯ ಖ್ಯಾತ ನಟ ಕರಣ್ ಮೆಹ್ರಾ ಜೊತೆ ಪತ್ನಿ ಚಾರುಗೆ ಸಂಬಂಧವಿದೆ ಎಂದು ಆರೋಪ ಮಾಡಿದ್ದರು. 

ರಾಜೀವ್ ಸೇನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕರಣ್ ಮೆಹ್ರಾ ತಳ್ಳಿಹಾಕಿದ್ದಾರೆ. 'ರಾಜೀವ್ ಯಾವ ರೊಮ್ಯಾನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ, ಜೂನ್‌ನಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಾನು ಚಾರು ಅವರೊಂದಿಗೆ ಸ್ವಲ್ಪ ಸಮಯದವರೆಗೆ ಮಾತನಾಡಿದ್ದೆ. ನಂತರ, ನಾವು ಇಂದಿನವರೆಗೂ ಭೇಟಿಯಾಗಿಲ್ಲ. ನಾನು ಸುಮಾರು 10 ವರ್ಷಗಳ ಹಿಂದೆಯೇ ಚಾರು ಅವರನ್ನು ಭೇಟಿಯಾಗಿದ್ದೆ. ನಿಶಾ ರಾವಲ್ ಸಂಚಿಕೆಯ ನಂತರ ನಾನು ದೆಹಲಿಗೆ ಸ್ಥಳಾಂತರಗೊಂಡೆ. ಆದರೂ ರಾಜೀವ್ ಸೇನ್ ಯಾಕೆ ಹಾಗೆ ಆರೋಪ ಮಾಡಿದರು ಎಂದು ಗೊತ್ತಿಲ್ಲ' ಎಂದು ಹೇಳಿದರು. ಅಷ್ಟೆಯಲ್ಲ, 'ನಾನು ರಾಜೀವ್ ಅವರನ್ನು ಭೇಟಿಯಾಗಲು ಭಯಸುವುದಿಲ್ಲ. ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ' ಎಂದು ಹೇಳಿದರು. 

ಚಾರುಗೆ ಟಿವಿ ಸ್ಟಾರ್ ಜೊತೆ ಸಂಬಂಧವಿದೆ; ಪತ್ನಿ ವಿರುದ್ಧ ಸುಶ್ಮಿತಾ ಸೇನ್ ಸಹೋದರನ ಗಂಭೀರ ಆರೋಪ

ಚಾರು ವಿರುದ್ಧ ರಾಜೀವ್ ಸೇನ್ ಆರೋಪ 

ಪತಿ ಚಾರುಗೆ ಟಿವಿ ನಟ ಕರಣ್ ಮೆಹ್ರಾ ಜೊತೆ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದ್ದರು. ನಾನು ಆಕೆಯ ವಾಯ್ಸ್ ನೋಟ್ ಗಮನಿಸಿದೆ. ಇದರಿಂದ ಗೊತ್ತಾಗಿದ್ದು ಕರಣ್ ಮೆಹ್ರಾ ಜೊತೆಗಿನ ರೊಮ್ಯಾನ್ಸ್. ಈ ವಿಚಾರವನ್ನು ಆಕೆಯ ತಾಯಿಯೇ ಬಹಿರಂಗ ಪಡಿಸಿದರು. ಅವಳು ಕರಣ್ ಮೆಹ್ರಾ ಜೊತೆ ರೊಮ್ಯಾಂಟಿಕ್ ರೀಲ್ ಮಾಡಿದ್ದಾಳೆ. ನನಗೆ ಮೋಸ ಮಾಡಿದ್ದಕ್ಕೆ ಅವಳ ಮೇಲೆ ಅನುಮಾನ ಪಟ್ಟಿದ್ದಕ್ಕೆ ನನ್ನನ್ನು ದೂಷಿಸುತ್ತಿದ್ದಾಳೆ' ಎಂದು ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದರು.

ನಾನಿಲ್ಲದಿದ್ದಾಗ ಮನೆಯ ಸಿಸಿ ಕ್ಯಾಮರಾ ಆಫ್ ಮಾಡುತ್ತಿದ್ದ; ಸುಶ್ಮಿತಾ ಸೇನ್ ಸಹೋದರನ ಪತ್ನಿ ಗಂಭೀರ ಆರೋಪ

ಪತಿ ವಿರುದ್ಧ ಚಾರು ಆರೋಪ

ಚಾರು ಸದ್ಯ ಪತಿಯಿಂದ ದೂರ ಆಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಂದರ್ಶನದಲ್ಲಿ ಚಾರು ಕೂಡ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 'ದಾಂಪತ್ಯಕ್ಕೆ ದ್ರೋಹ ಮಾಡಿದರು. ನಾನು ಮನೆಯಲ್ಲಿ ಇಲ್ಲದಿದ್ದಾಗ ಸಿಸಿಟಿವಿ ಸ್ವಿಚ್ ಆಫ್ ಮಾಡಿ ಇಡುತ್ತಿದ್ದರು. ಯಾಕೆ ಎಂದು ಕೇಳಿದ್ದಕ್ಕೆ ಇದೇನು ಬಿಗ್ ಬಾಸ್ ಹೌಸಾ ಎಂದು ಕೇಳುತ್ತಿದ್ದರು. ಇದೊಂದು ದೊಡ್ಡ ವಿಚಾರಾ ಎಂದು ಗಲಾಟೆ ಮಾಡುತ್ತಿದ್ದರು. ಜಿಮ್ ಹೆಸರಲ್ಲಿ ಯಾವಾಗಲೂ ಹೊರಗಡೆ ಇರುತ್ತಿದ್ದರು' ಎಂದು ಹೇಳಿದ್ದರು. ಇಬ್ಬರ ಜಗಳ ಎಲ್ಲಿಗೆ ಬಂದು ನಿಲ್ಲಲಿದೆಯೋ ಕಾದು ನೋಡಬೇಕು.