ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ದಾಂಪತ್ಯ ಕಲಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ರಾಜೀವ್ ಸೇನ್ ಆರೋಪಿಸಿದ್ದಾರೆ. 

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ದಾಂಪತ್ಯ ಕಲಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜುಲೈ ತಿಂಗಳಿನಲ್ಲಿ ರಾಜೀವ್ ಮತ್ತು ಪತ್ನಿ ಚಾರು ಅಸೋಪಾ ನಡುವೆ ದೊಡ್ಡ ಮಟ್ಟದ ಜಗಳವಾಗಿ ಮನೆಯಿಂದ ಹೊರಟು ಹೋಗಿದ್ದರು ಚಾರು. ಆದರೆ ಮಗಳಿಗೋಸ್ಕರ ಮತ್ತೆ ಒಂದಾಗಿದ್ದರು. ಆದರೀಗ ಮತ್ತೆ ರಾಜೀವ್ ಸೇನ್ ದಾಂಪತ್ಯ ಕಲಹ ಬೀದಿಗೆ ಬಂದಿದೆ. ಪತ್ನಿ ಚಾರು ಅಸೋಪಾ ವಿಚ್ಧೇದನಕ್ಕೆ ಮುಂದಾಗಿದ್ದು ಇನ್ಯಾವತ್ತು ರಾಜೀವ್ ಕಡೆ ಮುಖ ಮಾಡಲ್ಲ ಎನ್ನುತ್ತಿದ್ದಾರೆ. ಅಲ್ಲದೇ ಪತಿಯ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಅತ್ತ ರಾಜೀವ್ ಕೂಡ ಸೈಲೆಂಟ್ ಆಗಿರದೆ ಪತ್ನಿ ಅನೈತಿಂಕ ಸಬಂಧದ ಆರೋಪ ಮಾಡಿದ್ದಾರೆ. 

ಚಾರು ಅಸೋಪಾ ಪತಿ ವಿರುದ್ಧ ಗರ್ಭಿಣಿ ಆಗಿದ್ದಾಗ ರಾಜೀವ್ ಮೋಸ ಮಾಡಿದ ಎಂದಿದ್ದರು. ಇದೀಗ ರಾಜೀವ್ ಮಾತನಾಡಿ, ಮಹಿಳೆ ಎನ್ನುವ ಕಾರ್ಡ್ ಪ್ಲೇ ಮಾಡುತ್ತಿದ್ದಾಳೆ. ನಾನು ಹಾಗೆಲ್ಲ ಮಾಡಿದ್ದೀನಿ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆದರೆ ಆಕೆಯ ಈಗೋ ಮನೆಯಿಂದ ಹೊರಬರುವಂತೆ ಮಾಡಿದೆ. ನಾನು ಇದಕ್ಕೆ ಮಣೆ ಹಾಕಲ್ಲ. ಆಕೆ ನೀಡಿದ ಚಿತ್ರಹಿಂಸೆ ಮತ್ತು ಅವಮಾನಕ್ಕೆ ನ್ನನ್ನಿಂದ ಎಂದಿಗೂ ಕ್ಷಮೆಯಿಲ್ಲ' ಎಂದು ಹೇಳಿದ್ದಾರೆ. 

ಚಾರು ಪತಿ ವಿರುದ್ಧ ದೈಹಿಕ ಹಲ್ಲೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜೀವ್, ದೈಹಿಕ ಹಲ್ಲೆ ಆರೋಪವನ್ನು ತಳ್ಳಿ ಹಾಕಿದರು. ಆಕೆ ಪ್ರಮುಖವಾಗಿ ನಂಬಿಕೆ ಸಮಸ್ಯೆ ಹೊಂದಿದ್ದಾಳೆ. ನಾನಲ್ಲ ಸಮಸ್ಯೆ. ನಾನು ಕೋಪ ಮಾಡಿಕೊಲ್ಳುತ್ತೇನೆ. ನನಗೆ ಗೊತ್ತಿದೆ. ಆದೆರ ನಾವೆಲ್ಲರೂ ಕೋಪ ಮಾಡಿಕೊಳ್ಳತ್ತೇವೆ. ಕೋಪ ಮಾಡಿಕೊಳ್ಳುವಂತೆ ನಿಮ್ಮನ್ನು ಪ್ರಚೋದಿಸುವ ವ್ಯಕ್ತಿ ತುಂಬಾ ಅಪಾಯಕಾರಿ' ಎಂದು ಹೇಳಿದರು. 

ನಾನಿಲ್ಲದಿದ್ದಾಗ ಮನೆಯ ಸಿಸಿ ಕ್ಯಾಮರಾ ಆಫ್ ಮಾಡುತ್ತಿದ್ದ; ಸುಶ್ಮಿತಾ ಸೇನ್ ಸಹೋದರನ ಪತ್ನಿ ಗಂಭೀರ ಆರೋಪ

ಪತಿ ಚಾರುಗೆ ಟಿವಿ ನಟ ಕರಣ್ ಮೆಹ್ರಾ ಜೊತೆ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದರು. 'ನಾನು ಆಕೆಯ ವಾಯ್ಸ್ ನೋಟ್ ಗಮನಿಸಿದೆ. ಇದರಿಂದ ಗೊತ್ತಾಗಿದ್ದು ಕರಣ್ ಮೆಹ್ರಾ ಜೊತೆಗಿನ ರೊಮ್ಯಾನ್ಸ್. ಈ ವಿಚಾರವನ್ನು ಆಕೆಯ ತಾಯಿಯೇ ಬಹಿರಂಗ ಪಡಿಸಿದ್ದಾರೆ. ಅವಳು ಕರಣ್ ಮೆಹ್ರಾ ಜೊತೆ ರೊಮ್ಯಾಂಟಿಕ್ ರೀಲ್ ಮಾಡಿದ್ದಾಳೆ. ನನಗೆ ಮೋಸ ಮಾಡಿದ್ದಕ್ಕೆ, ಅವಳ ಮೇಲೆ ಅನುಮಾನ ಪಟ್ಟಿದ್ದಕ್ಕೆ ನನ್ನನ್ನು ದೂಷಿಸುತ್ತಿದ್ದಾಳೆ' ಎಂದು ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದರು.

ತುಂಬಾ ಹೊಡಿತಾನೆ, ಇವನ ಜತೆ ಜೀವನ ಮಾಡಲು ಸಾಧ್ಯವೇ ಇಲ್ಲ: ವಿಚ್ಛೇದನಕ್ಕೆ ಮುಂದಾದ ನಟಿ ಚಾರು

ಚಾರು ಸದ್ಯ ಪತಿಯಿಂದ ದೂರ ಆಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಂದರ್ಶನದಲ್ಲಿ ಚಾರು ಕೂಡ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 'ದಾಂಪತ್ಯಕ್ಕೆ ದ್ರೋಹ ಮಾಡಿದರು. ನಾನು ಮನೆಯಲ್ಲಿ ಇಲ್ಲದಿದ್ದಾಗ ಸಿಸಿಟಿವಿ ಸ್ವಿಚ್ ಆಫ್ ಮಾಡಿ ಇಡುತ್ತಿದ್ದರು. ಯಾಕೆ ಎಂದು ಕೇಳಿದ್ದಕ್ಕೆ ಇದೇನು ಬಿಗ್ ಬಾಸ್ ಹೌಸಾ ಎಂದು ಕೇಳುತ್ತಿದ್ದರು. ಇದೊಂದು ದೊಡ್ಡ ವಿಚಾರಾ ಎಂದು ಗಲಾಟೆ ಮಾಡುತ್ತಿದ್ದರು. ಜಿಮ್ ಹೆಸರಲ್ಲಿ ಯಾವಾಗಲೂ ಹೊರಗಡೆ ಇರುತ್ತಿದ್ದರು' ಎಂದು ಹೇಳಿದ್ದರು. ಇಬ್ಬರ ಜಗಳ ಎಲ್ಲಿಗೆ ಬಂದು ನಿಲ್ಲಲಿದೆಯೋ ಕಾದು ನೋಡಬೇಕು.