ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಬಗ್ಗೆ ಪತ್ನಿ ಚಾರು ಅಸೋಪಾ ಗಂಭೀರ ಆರೋಪ ಮಾಡಿದ್ದಾರೆ. ತಾನು ಮನೆಯಲ್ಲಿ ಇಲ್ಲದಿದ್ದಾಗ ಗಂಡ ಸಿಸಿ ಕ್ಯಾಮರಾ ಆಪ್ ಮಾಡಿ ಇಡುತ್ತಿದ್ದ ಎಂದು ಚಾರು ಆರೋಪಿಸಿದ್ದಾರೆ. 

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಸಿನಿಮಾ, ಬ್ಯುಸಿನೆಟ್ ಅಂಡ್ ಫ್ಯಾಮಿಲಿ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಾಯ್‌ಫ್ರೆಂಡ್ ಜೊತೆ ಬ್ರೇಕಪ್, ಲಲಿತ್ ಮೋದಿ ಜೊತೆ ಮ್ಯಾರೇಜ್ ರೂಮರ್ಸ್‌ ಅಂತ ಇಷ್ಟು ದಿನ ಸುಶ್ಮಿತಾ ಸುದ್ದಿಯಲ್ಲಿದ್ದರು. ಆದರೀಗ ಸುಶ್ಮಿತಾ ಸಹೋದರ ರಾಜೀವ್ ಸೇನ್ ದಾಂಪತ್ಯ ಕಲಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜುಲೈ ತಿಂಗಳಿನಲ್ಲಿ ರಾಜೀವ್ ಮತ್ತು ಪತ್ನಿ ಚಾರು ಅಸೋಪ ನಡುವೆ ದೊಡ್ಡ ಮಟ್ಟದ ಜಗಳವಾಗಿ ಮನೆಯಿಂದ ಹೊರಟು ಹೋಗಿದ್ದರು ಚಾರು. ಆದರೆ ಮಗಳಿಗೋಸ್ಕರ ಮತ್ತೆ ಒಂದಾಗಿದ್ದರು. ಆದರೀಗ ಮತ್ತೆ ರಾಜೀವ್ ಸೇನ್ ದಾಂಪತ್ಯ ಕಲಹ ಬೀದಿಗೆ ಬಂದಿದೆ. ಪತ್ನಿ ಚಾರು ಅಸೋಪಾ ವಿಚ್ಧೇದನಕ್ಕೆ ಮುಂದಾಗಿದ್ದು ಇನ್ಯಾವತ್ತು ರಾಜೀವ್ ಕಡೆ ಮುಖ ಮಾಡಲ್ಲ ಎನ್ನುತ್ತಿದ್ದಾರೆ. ಅಲ್ಲದೇ ಪತಿಯ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. 

ಇತ್ತೀಚಿಗಷ್ಟೆ ಸಂದರ್ಶನದಲ್ಲಿ ತನ್ನ ದಃಖವನ್ನು ಹೊರಹಾಕಿದರು. ಇದು ಚಾರುಗೆ ಎರಡನೇ ಮದುವೆ. ಮೊದಲ ಮದುವೆಯೂ ಬ್ರೇಕ್ ಆಗಿದೆ. ಹಾಗಾಗಿ ಎಲ್ಲರೂ ತನ್ನನ್ನೇ ಧೂಷಿಸುತ್ತಿದ್ದಾರೆ ಎಂದು ಚಾರು ಅಳಲು ತೋಡಿಕೊಂಡರು. ಎಲ್ಲದಕ್ಕೂ ತಾನೆ ಕಾರಣ ಎಂದು ಹೇಳುತ್ತಿದ್ದಾರೆ ಅಂತ ಚಾರು ಕಣ್ಣೀರು ಹಾಕಿದರು. ಆಕೆಯ ತಂಗಿಯ ಮದುವೆ ಕಪಾಡಲು ಚಾರು ಮದುವೆಯನ್ನು ರಕ್ಷಿಸಿಕೊಳ್ಳುವಂತೆ ತಂದೆ-ತಾಯಿ ಕೂಡ ಒತ್ತಾಯಿಸುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು. 

ರಾಜೀವ್ ಕಾರಣಕ್ಕೆ ತನ್ನ ನಟನಾ ಜೀವನದ ಮೇಲು ಪರಿಣಾಮ ಮಾಡಿದೆ ಎಂದು ಹೇಳಿದರು. ನಾನು ನನ್ನ ಮಗಳಿಗಾಗಿ, ಜೀವನಕ್ಕಾಗಿ ಮತ್ತೆ ಕೆಲಸ ಮಾಡಲು ಶುರು ಮಾಡಲು ಪ್ರಾರಂಭಿಸಿದೆ. ನನಗೆ ಕೆಲಸ ಕೊಟ್ಟರಿಗೆ ರಾಜೀವ್ ಪೋನ್ ಮಾಡಿ ನನ್ನಿಂದ ದೂರ ಇರುವಂತೆ ಹೇಳುತ್ತಿದ್ದಾನೆ. ಇದರಿಂದ ನನ್ನನ್ನು ಆ ಶೋನಿಂದ ತೆಗೆದು ಹಾಕಲಾಯಿತು. ಆಡಿಷನ್ ಗಳನ್ನು ನೀಡುತ್ತಿದ್ದೇನೆ. ಆದರೆ ರಾಜೀವ್ ನನಗೆ ಕೆಲಸ ಸಿಗದಂತೆ ಮಾಡುತ್ತಿದ್ದಾನೆ' ಎಂದು ಹೇಳಿದರು. 

ತುಂಬಾ ಹೊಡಿತಾನೆ, ಇವನ ಜತೆ ಜೀವನ ಮಾಡಲು ಸಾಧ್ಯವೇ ಇಲ್ಲ: ವಿಚ್ಛೇದನಕ್ಕೆ ಮುಂದಾದ ನಟಿ ಚಾರು

ರಾಜೀವ್ ನನ್ನ ಮೇಲೆ ನಿಂದಿಸಿದ. ಕುಟುಂಬದ ಜೊತೆ ಆತ ಚನ್ನಾಗಿ ಇರದಿದ್ದರೂ ನನ್ನ ಮೇಲೆ ಕೂಗಾಡುತ್ತಿದ್ದ. ಅನೇಕ ಬಾರಿ ನನಗೆ ಹೊಡೆದಿದ್ದಾನೆ. ಯಾವತ್ತು ನನ್ನ ಸಮಸ್ಯೆಯನ್ನು ತಿಳಿಯುವ ಪ್ರಯತ್ನ ಮಾಡಿಲ್ಲ. ಸಮಸ್ಯೆಯನ್ನು ಬಗೆಹರಿಸುವ ಬದಲು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ವಾರಗಟ್ಟಲೇ ಸಿಗುತ್ತಿರಲಿಲ್ಲ. ಹೆಂಡತಿಯ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ' ಎಂದು ಹೇಳಿದರು.

ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ನನ್ನ ಬಗ್ಗೆ ಒಂದು ದಿನವೂ ವಿಚಾರಿಸಿಕೊಳ್ಳಲಿಲ್ಲ. ಟೈಗರ್ ಶ್ರಾಫ್ ಮತ್ತು ರಣ್ವೀರ್ ಸಿಂಗ್ ಭೇಟಿಯಾದ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಆದರೆ ನನ್ನ ಬಗ್ಗೆ ವಿಚಾರಿಸುತ್ತಿರಲಿಲ್ಲ. ಆದರೆ ನಾನೇನು ಮಾತನಾಡುತ್ತಿರಲಿಲ್ಲ. ಮತ್ತೆ ಮನೆ ಬಿಟ್ಟು ಹೋಗುತ್ತಾರೆ ಎನ್ನುವ ಕಾರಣಕ್ಕೆ ಏನು ಹೇಳತ್ತಿರಲಿಲ್ಲ. ದಾಂಪತ್ಯಕ್ಕೆ ದ್ರೋಹ ಮಾಡಿದರು. ನಾನು ಮನೆಯಲ್ಲಿ ಇಲ್ಲದಿದ್ದಾಗ ಸಿಸಿಟಿವಿ ಸ್ವಿಚ್ ಆಫ್ ಮಾಡಿ ಇಡುತ್ತಿದ್ದರು. ಯಾಕೆ ಎಂದು ಕೇಳಿದ್ದಕ್ಕೆ ಇದೇನು ಬಿಗ್ ಬಾಸ್ ಹೌಸಾ ಎಂದು ಕೇಳುತ್ತಿದ್ದರು. ಇದೊಂದು ದೊಡ್ಡ ವಿಚಾರಾ ಎಂದು ಗಲಾಟೆ ಮಾಡುತ್ತಿದ್ದರು. ಜಿಮ್ ಹೆಸರಲ್ಲಿ ಯಾವಾಗಲೂ ಹೊರಗಡೆ ಇರುತ್ತಿದ್ದರು' ಎಂದು ಗಂಭೀರ ಆರೋಪ ಮಾಡಿದರು. 

ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿರುವ ಚಾರುಗೆ ರಾಜೀವ್ ನಿಂದ ಯಾವುದೇ ಸಹಾಯವಿಲ್ಲ ಎಂದು ಹೇಳಿದರು. ಮಗಳಿಗೆ ಡೇಂಗ್ಯೂ ಆಗಿತ್ತು ಆಗ ತಡವಾಗಿ ಆಸ್ಪತ್ರೆಗೆ ಬಂದರು. ಆದರೆ ಮಗಳ ಜೊತೆ ಇರಲಿಲ್ಲ, ಹೋಟೆಲ್ ನಲ್ಲೇ ಇದ್ದರು' ಎಂದು ಚಾರು ತನ್ನ ಪತಿ ರಾಜೀವ್ ಬಗ್ಗೆ ದೂರಿದರು.