ಇನ್ಮುಂದೆ ಇದು ಸಿನಿಮಾವಲ್ಲ, ಒಂದು ಚಳುವಳಿ; ಕಾಶ್ಮೀರ್ ಫೈಲ್ಸ್ ಬಗ್ಗೆ ಕರಣ್ ಜೋಹರ್ ಮಾತು

ವಿವೇಕ್ ಅಗ್ನಿಹೋತ್ರಿ ಸಾರಥ್ಯದಲ್ಲಿ ಬಂದ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಇನ್ಮುಂದೆ ಸಿನಿಮಾವಲ್ಲ ಒಂದು ಚಳುವಳಿ ಎಂದು ಹೇಳಿದ್ದಾರೆ. 

Karan Johar reacts to The Kashmir Files

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಹವಾ ಇನ್ನು ಕಡಿಮೆ ಆಗಿಲ್ಲ. ಸಿನಿಮಾ ಬಿಡುಗಡೆಯಾಗಿ ಅನೇಕ ದಿನಗಳು ಕಳೆದರು ಚಿತ್ರದ ಬಗ್ಗೆ ಚರ್ಚೆ ಇನ್ನು ನಿಂತಿಲ್ಲ. ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾ ಗಣ್ಯರು ಮತ್ತು ರಾಜಕೀಯ ಗಣ್ಯರು ಸಹ ಹಾಡಿಹೊಗಳಿದ್ದಾರೆ.

ಆಮೀರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಆಮೀರ್ ಖಾನ್ ಭಾರತೀಯರು ಈ ಸಿನಿಮಾವನ್ನು ನೋಡಲೇ ಬೇಕೆಂದು ಹೇಳಿದ್ದರು. ಇದೀಗ ಬಾಲಿವುಡ್ ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಮೊದಲ ಬಾರಿಗೆ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಅನೇಕ ದಿನಗಳ ಬಳಿಕ ಕರಣ್ ಮಾತನಾಡಿದ್ದಾರೆ. 'ಕಾಶ್ಮೀರ್ ಫೈಲ್ಸ್ ಸಿನಿಮಾಗೂ ಮತ್ತು ನಮ್ಮ ದೇಶಕ್ಕೂ ಸಂಪರ್ಕ ಕಲ್ಪಿಸುವುದು ಏನೋ ಇದೆ ಎಂದಿದ್ದಾರೆ.' ಜೊತೆಗೆ ಕಡಿಮೆ ಬಜೆಟ್ ನಲ್ಲಿ ಬಂದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡಿದ ವಿಚಾರವನ್ನು ಶ್ಲಾಘಿಸಿದರು.

Kashmir Pandit Exodus ಪಂಡಿತ್ ಸಮುದಾಯ ಕಾಶ್ಮೀರಕ್ಕೆ ಹಿಂದಿರುಗುವ ದಿನ ದೂರವಿಲ್ಲ, ಮೋಹನ್ ಭಾಗವತ್!

'ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕರಣ್ ಜೋಹರ್, ಕಾಶ್ಮೀರ್ ಫೈಲ್ಸ್ ಸಿನಿಮಾ ಬೇರೆ ಸಿನಿಮಾಗಳ ಹಾಗೆ ಅತೀ ಹೆಚ್ಚು ಬಜೆಟ್ ನಲ್ಲಿ ನಿರ್ಮಿಸಿಲ್ಲ. ಬಹುಷಃ ಕಡಿಮೆ ವೆಚ್ಚದಲ್ಲಿ ಬಂದ ಭಾರತದ ಅತ್ಯಂತ ದೊಡ್ಡ ಹಿಟ್ ಸಿನಿಮಾವಾಗಿದೆ ಎಂದಿದ್ದಾರೆ. ಈ ಸಿನಿಮಾ ನಮ್ಮ ರಾಷ್ಟ್ರದೊಂದಿಗೆ ಏನೋ ಸಂಪರ್ಕವಿದೆ ಎನ್ನುವುದನ್ನು ನೀವು ಒಪ್ಪಿಕೊಳ್ಳಬೇಕು ಮತ್ತು ನೀವು ಈ ಸಿನಿಮಾವನ್ನು ನೋಡಬೇಕು, ನೋಡಿ ಅದರಿಂದ ಕಲಿಯಬೇಕು. ಒಂದು ಚಳುವಳಿ ನಡೆಯುತ್ತಿದೆ. ಇದು ಇನ್ಮುಂದೆ ಸಿನಿಮಾವಲ್ಲ ಒಂದು ಚಳುವಳಿ' ಎಂದು ಹೇಳಿದ್ದಾರೆ.

ಕಾಶ್ಮೀರ್ ಫೈಲ್ಸ್ ಸಕ್ಸಸ್ ಆಯ್ತು, ನಾನು 'ನೇಲ್ ಫೈಲ್ಸ್' ಸಿನಿಮಾ ಮಾಡ್ತೀನಿ; ಟ್ವಿಂಕಲ್ ಖನ್ನಾ ವ್ಯಂಗ್ಯ

ವಿವೇಕ್ ಅಗ್ನಿಹೋತ್ರಿ ಸಾರಥ್ಯದಲ್ಲಿ ಬಂದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಚಿನ್ಮಯ್ ಮಂಡ್ಲೇಕರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ನೈಜ ಘಟನೆ ಆಧಾರಿತ ಕಾಶ್ಮೀರ್ ಫೈಲ್ಸ್ 90 ದಶಕದಲ್ಲಿ ಕಾಶ್ಮೀರ ಪಂಡಿತರ ಹತ್ಯೆ, ನೋವು, ಸಂಕಟದ ಕಥೆಯಾಗಿದೆ. ಈ ಸಿನಿಮಾ ಲಕ್ಷಾಂತರ ಜನರ ಹೃದಯ ಮುಟ್ಟಿದೆ. ಪ್ರೇಕ್ಷಕರಲ್ಲದೆ ದೇಶದ ಪ್ರಭಾವಿ ವ್ಯಕ್ತಿಗಳಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಹಾಡಿಹೊಗಳಿದ್ದಾರೆ. ಕಾಶ್ಮೀರದ ಕರಾಳ ಸತ್ಯವನ್ನು ಸಿನಿಮಾ ಮೂಲಕ ಬಿಚ್ಚಿಟ್ಟ ನಿರ್ದೇಶಕ ಅಗ್ನಿಹೋತ್ರಿಯನ್ನು ಶ್ಲಾಘಿಸಿದ್ದರು. ಅಲ್ಲದೆ ಅನೇಕ ರಾಜ್ಯಗಳು ಕರ್ನಾಟಕ ಸೇರಿದಂತೆ ಸಿನಿಮಾಗೆ ಫ್ರಿ ಟ್ಯಾಕ್ಸ್ ಮಾಡಿದ್ದರು ಇದು ಸಿನಿಮಾಗೆ ಮತ್ತಷ್ಟು ಪ್ಲಸ್ ಆಗಿತ್ತು.

Latest Videos
Follow Us:
Download App:
  • android
  • ios