Kashmir Pandit Exodus ಪಂಡಿತ್ ಸಮುದಾಯ ಕಾಶ್ಮೀರಕ್ಕೆ ಹಿಂದಿರುಗುವ ದಿನ ದೂರವಿಲ್ಲ, ಮೋಹನ್ ಭಾಗವತ್!

  • ಕಾಶ್ಮೀರ ಹಿಂದೂ ಸಮುದಾಯದವನ್ನುದ್ದೇಶಿ ಭಾಗವತ್ ಭಾಷಣ
  • ಪಂಡಿತರ ಮೇಲೆ ನಡೆದ ಅತೀ ಭೀಕರ ನರಮೇಧದ ಸತ್ಯ ಬಹಿರಂಗ
  • ಪರಿಸ್ಥಿತಿ ಶಾಂತವಾಗಿ ಎಲ್ಲವೂ ಸುಖಾಂತ್ಯವಾಗುವ ವಿಶ್ವಾಸ
     
Kashmiri Pandits come back to their homes very soon RSS chief Mohan Bhagwat hopes ckm

ಜಮ್ಮು(ಏ.03): ಕಾಶ್ಮೀರ ಪಂಡಿತರ ಮೇಲಿನ ನರಮೇಧ, ಕಣಿವೆ ರಾಜ್ಯದಲ್ಲಿನ ಭಯೋತ್ಪಾದನೆ ಕಳೆದ ಕೆಲ ದಿನಗಳಿಂದ ಭಾರಿ ಚರ್ಚೆಯಾಗುತ್ತಿದೆ. ಬಾಲಿವುಡ್ ದಿ ಕಾಶ್ಮೀರ ಫೈಲ್ಸ್ ಚಿತ್ರದ ಮೂಲಕ ಕಾಶ್ಮೀರ ಹಿಂದೂ ಸಮುದಾಯದ ಹತ್ಯಾಕಾಂಡ ಜಗಜ್ಜಾಹೀರಾಗಿದೆ. ಈ ಘಟನೆಗಳ ಬೆನ್ನಲ್ಲೇ ಇಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾಶ್ಮೀರ ಹಿಂದೂ ಸಮುದಾಯವನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಕಾಶ್ಮೀರ ಹಿಂದೂಗಳು ಕಣಿವೆ ರಾಜ್ಯಕ್ಕೆ ಹಿಂತಿರುಗುವ ಸಮಯ ದೂರವಿಲ್ಲ ಎಂದು ಭಾಗವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಹಿಂದೂ ಸಮುದಾಯನ್ನುದ್ದೇಶಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ಮೋಹನ್ ಭಾಗವತ್, 1990ರ ಹತ್ಯಾಕಾಂಡದ ಬಳಿಕ ಕಾಶ್ಮೀರಿಂದ ಅನಿವಾರ್ಯವಾಗಿ ಬೇರೆಡೆಗೆ ತೆರಳಿದ ಕಾಶ್ಮೀರಿ ಪಂಡಿತರು, ಹಿಂದೂಗಳು ಮತ್ತೆ ಕಾಶ್ಮೀರಕ್ಕೆ ಮರಳಲಿದ್ದಾರೆ. ತಮ್ಮ ನೆಲದಲ್ಲಿ ಹಿಂದೂಗಳು ಸುಂದರ ಹಾಗೂ ಸಂತಸದ ಬದುಕು ಕಟ್ಟಿಕೊಳ್ಳುವ ದಿನ ದೂರವಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

31 ವರ್ಷಗಳ ನಂತರ ಕೋರ್ಟ್‌ ಕಟಕಟೆಗೆ ಕಾಶ್ಮೀರದ ನರರಾಕ್ಷಸ!

ಕಾಶ್ಮೀರ ಹಿಂದೂಗಳು ತಮ್ಮ ಸ್ವಂತ ನೆಲದಲ್ಲಿ, ಮೂಲ ನೆಲದಲ್ಲಿ ಮತ್ತೆ ನಳನಳಿಸುವ ದಿನ ಆದಷ್ಟು ಬೇಗ ಬರಲಿ. ಕಾಶ್ಮೀರದಲ್ಲಿನ ಭಯೋತ್ಪಾದನೆ ಅಂತ್ಯಗೊಂಡು ಶಾಂತಿಯುತ ಪರಿಸ್ಥಿತಿ ನೆಲೆಗೊಳ್ಳಲಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಚಿತ್ರ 1990ರಲ್ಲಿ ಕಾಶ್ಮೀರ ಪಂಡಿತರ ಮೇಲೆ ನಡೆದ ದಾಳಿ ಸತ್ಯವನ್ನು ಬಿಚ್ಚಿಟ್ಟಿದೆ. ಕಳೆದ 32 ವರ್ಷಗಳಿಂದ ಪಂಡಿತರು ಅನುಭವಿಸುತ್ತಿರುವ ನೋವು ಎಲ್ಲರಿಗೂ ಮನದಟ್ಟಾಗಿದೆ. ಶೀಘ್ರದ್ಲಲೇ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗಲಿದೆ. ಕಾಶ್ಮೀರ ಪಂಡಿತರು ಮತ್ತೆ ಕಣಿವೆ ರಾಜ್ಯಕ್ಕೆ ಮರಳ ಬೇಕು ಎಂದು ಮೋಹನ್ ಭಾಗವತ್ ಮನವಿ ಮಾಡಿದ್ದಾರೆ.

ಕೆಲವರು ದಿ ಕಾಶ್ಮೀರ ಫೈಲ್ಸ್ ಚಿತ್ರ ಸುಳ್ಳು, ರಾಜಕೀಯ ನಾಟಕ ಎಂದಿದ್ದಾರೆ. ಆದರೆ ಈ ದೇಶದ ಜನತೆಗೆ ಸತ್ಯ ಗೊತ್ತಾಗಿದೆ. ಚಿತ್ರದಲ್ಲಿ ಹೇಳಿದ ವಿಚಾರಗಳನ್ನು ಎಲ್ಲಿಂದ ಬೇಕಾದರೂ ಮಾಹಿತಿ ಪಡೆಯಬಹುದು. ಮಾಹಿತಿಗಳು ಮುಕ್ತವಾಗಿದೆ. ಸತ್ಯವನ್ನು ಧೈರ್ಯವಾಗಿ ಜಗತ್ತಿನ ಮುಂದೆ ಇಡಲಾಗಿದೆ. ಇದೇ ಕಾರಣಕ್ಕೆ ಯಾವುದೇ ಪ್ರಚಾರ ಇಲ್ಲದಿದ್ದರೂ ಚಿತ್ರ ಅತ್ಯಂತ ಯಶಸ್ವಿಯಾಗಿದೆ ಎಂದು ಭಾಗವತ್ ಹೇಳಿದ್ದಾರೆ.

Jammu and Kashmir 370ನೇ ವಿಧಿ ರದ್ದು ಬಳಿಕ 34 ಜನರಿಂದ ಕಾಶ್ಮೀರದಲ್ಲಿ ಆಸ್ತಿ ಖರೀದಿ!

ಜಮ್ಮು ಮತ್ತು ಕಾಶ್ಮೀರದ ಸಂಜೀವಿನಿ ಶಾರದಾ ಕೇಂದ್ರ ಆಯೋಜಿಸಿದ ಮೂರು ದಿನಗಳ ಕಾರ್ಯಕ್ರಮ ಇಂದು ಸಮಾಪ್ತಿಯಾಗಿದೆ. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮೋಹನ್ ಭಾಗವತ್, ಕಾಶ್ಮೀರ ಹಿಂದೂಗಳಿಗೆ ದೈರ್ಯ ತುಂಬಿದ್ದಾರೆ.

ಕಾಶ್ಮೀರ್‌ ಫೈಲ್ಸ್‌ ಸತ್ಯಾಧರಿತ: ವಿವೇಕ್‌ ಅಗ್ನಿಹೋತ್ರಿ
ಕಾಶ್ಮೀರ್‌ ಫೈಲ್ಸ್‌ ಸತ್ಯ ಘಟನೆಗಳನ್ನು ಆಧರಿಸಿದ್ದು, ಚಲನಚಿತ್ರದ ಕುರಿತು ಅನಗತ್ಯವಾಗಿ ವಿವಾದವನ್ನು ಹುಟ್ಟುಹಾಕಲಾಗುತ್ತಿದೆ ಎಂದು ನಿರ್ದೇಶಕ ವಿವೇಕ ಅಗ್ನಿಹೋತ್ರಿ ಭಾನುವಾರ ಕಿಡಿಕಾರಿದ್ದಾರೆ.

ಕಾಶ್ಮೀರದಲ್ಲಿನ ಹಿಂದೂಗಳ ಹತ್ಯಾಕಾಂಡದ ಬಗ್ಗೆ ಮ.ಪ್ರದೇಶದಲ್ಲಿ ಮ್ಯೂಸಿಯಂ
ದ ಕಾಶ್ಮೀರ್‌ ಫೈಲ್ಸ್‌ ಸಿನಿಮಾವನ್ನು ವೀಕ್ಷಿಸಿದ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಮಧ್ಯ ಪ್ರದೇಶದಲ್ಲಿ ಕಾಶ್ಮೀರದಲ್ಲಿ ನಡೆದ ಹಿಂದುಗಳ ಹತ್ಯೆಯ ಕುರಿತಾಗಿ ಮ್ಯೂಸಿಯಂ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದ್ದಾರೆ. ‘ಈ ಸಿನಿಮಾ ವಿವೇಕ್‌ ಅವರು ಹೇಳಿರುವಂತೆ ದ್ವೇಷವನ್ನು ಹರಡುವುದಿಲ್ಲ. ಮುಚ್ಚಿಹೋಗಿದ್ದ ಸತ್ಯವನ್ನು ಜನರಿಗೆ ತೋರಿಸಿದೆ. ಇದರಿಂದಾಗಿ ಭಾರತದ ಉಳಿದ ಪ್ರದೇಶಗಳು ಕಾಶ್ಮೀರದಂತಾಗುವುದು ತಪ್ಪಿದೆ. ಅವರು ಕಾಶ್ಮೀರ ಹತ್ಯಕಾಂಡದ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡುವ ಯೋಜನೆ ಪ್ರಸ್ತಾಪಿಸಿದ್ದರು. ಅವರು ಸಹ ಮಧ್ಯಪ್ರದೇಶದವರು ಹಾಗಾಗಿ ಮಧ್ಯ ಪ್ರದೇಶದಲ್ಲಿ ಈ ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು ಎಂದು ಹೇಳಿದರು.

Latest Videos
Follow Us:
Download App:
  • android
  • ios