ಕಾಶ್ಮೀರ್ ಫೈಲ್ಸ್ ಸಕ್ಸಸ್ ಆಯ್ತು, ನಾನು 'ನೇಲ್ ಫೈಲ್ಸ್' ಸಿನಿಮಾ ಮಾಡ್ತೀನಿ; ಟ್ವಿಂಕಲ್ ಖನ್ನಾ ವ್ಯಂಗ್ಯ
ಕಾಶ್ಮೀರ್ ಫೈಲ್ಸ್ ಸಕ್ಸಸ್ ಆಗಿದೆ ಹಾಗಾಗಿ ನಾನೀಗ 'ನೇಲ್ ಫೈಲ್ಸ್' ಎನ್ನುವ ಸಿನಿಮಾ ಮಾಡ್ತೀನಿ ಎಂದು ಅಕ್ಷಯ್ ಕುಮಾರ್ ಪತ್ನಿ, ಲೇಖಕಿ ಟ್ವಿಂಕಲ್ ಖನ್ನಾ ವ್ಯಂಗ್ಯವಾಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಭರ್ಜರಿ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಸಕ್ಸಸ್ ಕಂಡಿದೆ.
ಬಾಲಿವುಡ್ ಮಾಜಿ ನಟಿ, ಲೇಖಕಿ ಟ್ವಿಂಕಲ್ ಖನ್ನಾ ಇತ್ತೀಚಿಗಷ್ಟೆ ತನ್ನ ಅಂಕಣವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಮನರಂಜನಾ ಕ್ಷೇತ್ರದಲ್ಲಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
'ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಯಶಸ್ಸಿನಿಂದ ಇದರ ಬೆನ್ನಲ್ಲೇ ಈಗ ಎಷ್ಟೋ ನಿರ್ಮಾಪಕರು ತಮ್ಮ ಸಿನಿಮಾ ಟೈಟಲ್ ಗಾಗಿ ಅನೇಕ ನಗರಗಳ ಹೆಸರನ್ನು ನೋಂದಾಯಿಸಲು ಮುಂದಾಗಿದ್ದಾರೆ' ಎಂದು ಟ್ವಿಂಕಲ್ ಖನ್ನಾ ಲೇವಡಿ ಮಾಡಿದ್ದಾರೆ. ಕಾಶ್ಮೀರ್ ಫೈಲ್ಸ್ ಕ್ರೇಜ್ ಬಗ್ಗೆ ಟ್ವಿಂಕಲ್, 'ನಿರ್ಮಾಪಕರ ಅಫೀಸ್ ಗಳಲ್ಲಿ ನಡೆದ ಸಭೆಯಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಳಿಕ ಹೊಸ ಚಲನಚಿತ್ರಗಳ ಅನೇಕ ಶೀರ್ಷಿಕೆಯನ್ನು ನೋಂದಾಯಿಸಲಾಗಿದೆ ಎಂದು ನನಗೆ ತಿಳಿದಿದೆ. ದೊಡ್ಡ ದೊಡ್ಡ ನಗರಗಳು ಈಗಾಗಲೇ ಹಕ್ಕು ಪಡೆದಿರುವುದರಿಂದ ಈಗ ಬಡವರ ನಗರಗಳಾದ ಅಂಧೇರಿ ಪೈಲ್ಸ್, ಖರ್ ದಂಡಾ ಫೈಲ್ಸ್, ಸೌತ್ ಬಾಂಬೆ ಫೈಲ್ಸ್ ಅಂತಹ ನಗರಗಳ ಹೆಸರುಗಳನ್ನು ನೋಂದಾಯಿಸುತ್ತಿದ್ದಾರೆ. ನನಗೆ ಆಶ್ಚರ್ಯವಾಗುತ್ತಿದೆ ನನ್ನ ಈ ಎಲ್ಲಾ ಸಹೋದ್ಯೋಗಿಗಳನ್ನು ಸಿನಿಮಾ ನಿರ್ಮಾಪಕರು ಎಂದು ಕರೆಯಬಹುದೇ ಅಥವಾ ರಾಷ್ಟ್ರೀಯವಾದಿ ಎನ್ನಬೇಕೆ' ಎಂದು ವ್ಯಂಗ್ಯವಾಡಿದ್ದಾರೆ.
ತನ್ನ ತಾಯಿ ಡಿಂಪಲ್ ಗೆ ಸಿನಿಮಾ ಕಲ್ಪನೆಯನ್ನು ಹೇಗೆ ವಿವರಿಸದರು ಎಂದು ಬಹಿರಂಗ ಪಡಿಸಿದ್ದಾರೆ. 'ನಾನು ನೇಲ್ ಫೈಲ್ಸ್ ಎಂಬ ಸಿನಿಮಾವನ್ನು ಮಾಡಲಿದ್ದೇನೆ ಎಂದು ಅಮ್ಮನ ಬಳಿ ಹೇಳಿದೆ. ಅದಕ್ಕೆ ಅವರು, ಯಾವುದರ ಬಗ್ಗೆ?, ವಿನಾಶಕಾರಿಯಾದ ಹಸ್ತಾಲಂಕಾರದ ಬಗ್ಗೆ ಮಾಡು ಎಂದರು. ಬಹುಶಃ ಇದು ಕನಿಷ್ಟ ಅಂತಿಮ ಮೊಳೆಯನ್ನು ಕೋಮು ಶವಪೆಟ್ಟಿಗೆಗೆ ಹೊಡೆಯುವುದಕ್ಕಿಂತ ಉತ್ತಮವಾಗಿದೆ ಎಂದು ಟ್ವಿಂಕಲ್ ಉತ್ತರಿಸಿದರು' ಎಂದು ಹೇಳಿದ್ದಾರೆ.
Akshay Kumar About Wife: ಹೆಂಡತಿ, ಅತ್ತೆಯ ಒತ್ತಡ, ಇಷ್ಟವಿಲ್ಲದ ಕೆಲಸ ಮಾಡ್ತಾರಂತೆ ಅಕ್ಷಯ್ ಕುಮಾರ್
ಅಂದಹಾಗೆ ಕಶ್ಮೀರ್ ಫೈಲ್ಸ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಈ ಸಿನಿಮಾದಲ್ಲಿ 90 ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ದೌರ್ಜನ್ಯ ಆಧರಿಸಿ ಸಿನಿಮಾ ಮಾಡಲಾಗಿದೆ. ಕೊರೊನಾ ವೈರಸ್ ಲಾಕ್ ಡೌನ್ ಬಳಿಕ ಬಿಡುಗಡೆಯಾದ ಸಿನಿಮಾಗಳಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಇದಾಗಿದೆ. ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಸುಮಾರು 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ.
Bollywood Life: ಅಕ್ಷಯ್ ಕಾರಣಕ್ಕೆ ಟ್ವಿಂಕಲ್‌ಗೆ ಕಪಾಳಮೋಕ್ಷ ಮಾಡಲಿದ್ದ ಆಮೀರ್!
ಈ ಸಿನಿಮಾದಲ್ಲಿ ಅನುಪಮ್ ಖೇರ್, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಟ್ವಿಂಕಲ್ ಖನ್ನಾ ಪತಿ ಅಕ್ಷಯ್ ಕುಮಾರ್ ಈ ಸಿನಿಮಾವನ್ನು ಹಾಡಿ ಹೊಗಳಿದ್ದರು. ಟ್ವಿಟರ್ ನಲ್ಲಿ ಅಕ್ಷಯ್ ಕುಮಾರ್ ನಾವೆಲ್ಲರು ನಮ್ಮ ದೇಶದ ಕಥೆಯನ್ನು ಹೇಳಲು ಬಯಸುತ್ತೇವೆ. ಕೆಲವರು ಪ್ರಸಿದ್ಧರಾಗಿರಬಹುದು. ಇತರರು ಹೆಚ್ಚು ಪ್ರಸಿದ್ಧಿ ಪಡೆದಿಲ್ಲ. ಉದಾಹರಣೆಗೆ ನೋವಿನ ಸತ್ಯವನ್ನು ಮುನ್ನೆಲೆಗೆ ತಂದು ನಮ್ಮೆಲ್ಲರನ್ನು ಬೆಚ್ಚಿಬೀಳಿಸಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿದ್ದಾರೆ ವಿವೇಕ್ ಅಗ್ನಿಹೋತ್ರಿ. ಈ ಸಿನಿಮಾ ನನ್ನ ಬಚ್ಚನ್ ಪಾಂಡೆ ಸಿನಿಮಾ ಕಲೆಕ್ಷನ್ ಮೇಲೆ ಹೊಡೆತ ಬಿದ್ದಿದೆ ಎಂದು ಹೇಳಿದ್ದರು. ಇದೀಗ ಪತ್ನಿ ಟ್ವಿಂಕಲ್ ಖನ್ನಾ ಸಿನಿಮಾದ ಬಗ್ಗೆ ವ್ಯಂಗ್ಯವಾಡಿದ್ದಾರೆ.