ಬಾಲಿವುಡ್ ನಟನ ಸಾವಿನ ನಂತರ ಕರಣ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನೆಪೊಟಿಸಂ ಸಂಬಂಧ ಕರಣ್ ಹೆಸರು ಕೇಳಿ ಬಂದಿದ್ದು ಆ ನಂತರ ಕರಣ್ ಸಾರ್ವನಿಕವಾಗಿ ಅಥವಾ ಸೋಷಿಯಲ್ ಮೀಡಿಯಾದಲ್ಲೂ ಸೈಲೆಂಟ್ ಆಗಿದ್ದರು.

ಇದೀಗ ಮೂವರು ಬಾಲಿವುಡ್ ನಟ ನಟಿಯರು ಕರಣ್ ಮನೆ ಮುಂದೆ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಕರಣ್ ಜೋಹರ್‌ನ ಮುಂಬೈನ ಮನೆಮುಂದೆ ಮೂವರು ಕಂಡು ಬಂದಿದ್ದಾರೆ. ಇದಕ್ಕೂ ಮುನ್ನ ಕೈರಾ ಹಾಗೂ ವರುಣ್‌ ಧವನ್ ಕರಣ್‌ನ ಧರ್ಮ ಪ್ರಡಕ್ಷನ್ ಹೌಸ್ ಕಚೇರಿ ಮುಂದೆ ಕಾಣಿಸಿಕೊಂಡಿದ್ದರು.

ಲೈಂಗಿಕ ದೌರ್ಜನ್ಯ ಆರೋಪ: ನಿರ್ದೇಶಕ ಮಹೇಶ್ ಭಟ್‌ಗೆ ನೋಟಿಸ್

ಇತ್ತೀಚೆಗೆ ನಟ ರಣವೀರ್ ಸಿಂಗ್ ಹಾಕಿದ್ದ ಇನ್‌ಸ್ಟಾಗ್ರಾಂ ಲೈವ್‌ಗೆ ಕರಣ್ ಜೋಹಾರ್ ಕಮೆಂಟ್ ಮಾಡಿದ್ದರು. ಸುಶಾಂತ್ ಸಾವಿನ ನಂತರ ಕರಣ್ ಯಾವುದೇ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿಲ್ಲ.

ಈ ಹಿಂದೆ ಪೋಸ್ಟ್ ಹಾಕಿದ್ದ ಅವರು ಸುಶಾಂತ್ ಜೊತೆ ಅಷ್ಟಾಗಿ ಕಾಂಟ್ಯಾಕ್ಟ್ ಇಟ್ಟುಕೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಸುಶಾಂತ್ ಹಾಗೂ ಕರಣ್ ಡ್ರೈವ್ ಸಿನಿಮಾದಲ್ಲಿ ಜೊತೆಗೆ ಕೆಲಸ ಮಾಡಿದ್ದರು. ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗದೆ, ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು.

ಸುಶಾಂತ್ ಆತ್ಮಹತ್ಯೆ ಪ್ರಕರಣ: ತನಿಖೆ ನಡೆದು ಬಂದ ಹಾದಿ ಇದು..!

ಈ ಸಂದರ್ಭ ಕರಣ್ ಬೇಕೆಂದೇ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಮಾಡಿದ್ದರು ಎನ್ನಲಾಗಿತ್ತು. ಆದರೆ ಇದನ್ನು ತಳ್ಳಿ ಹಾಕಿರುವ ಸುಶಾಂತ್ ಸಹ ನಟ ಸಾಹಿಲ್ ವೈದ್, ಕರಣ್ ಥಿಯೇಟರ್‌ಗಾಗಿ ಪ್ರಯತ್ನಿಸಿದರು. ಆದರೆ ಸಿಗಲಿಲ್ಲ ಎಂದಿದ್ದಾರೆ.