ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್‌ ಭಟ್‌ ವಿರುದ್ಧ ಬ್ಲಾಕ್‌ಮೇಲ್ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಆರೋಪದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಕಳುಹಿಸಿದೆ.

ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್‌ ಭಟ್‌ ವಿರುದ್ಧ ಬ್ಲಾಕ್‌ಮೇಲ್ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಆರೋಪದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಕಳುಹಿಸಿದೆ.

ಸಮಾಜಿಕ ಕಾರ್ಯಕರ್ತೆ ಯೋಗಿತಾ ಭಯನಾ ಅವರು ದೂರು ದಾಖಲಿಸಿದ್ದು, ಮಾಡೆಲಿಂಗ್ ಆಸೆ ತೋರಿಸಿ ಯುವತಿಯರ ಮೃಲೆ ದೌರ್ಜನ್ಯ ಎಸಗುತ್ತಿರುವುದಾಗಿ ಆರೋಪಿಸಿದ್ದರು.

ಯಾವುದನ್ನು ಯಾರಿಗೂ ಸಾಬೀತು ಪಡಿಸ್ಬೇಕಿಲ್ಲ: ಮಹೇಶ್ ಭಟ್ ಭಾವುಕ ಬರಹ

ಇಶಾ ಗುಪ್ತಾ, ರನ್‌ವಿಜಯ್ ಸಿಂಗ್ ಮೌನಿ ರಾಯ್, ಪ್ರಿನ್ಸ್‌ ನರುಲ, ಅವರಿಗೂ ಹೇಳಿಕೆ ದಾಖಲಿಸಲು ನೋಟಿಸ್ ಕಳುಹಿಸಲಾಗಿದೆ. ಐಎಂಜಿ ವೆಂಚರ್ಸ್‌ ಪ್ರಮೋಟರ್ ಅನ್ನಿ ವರ್ಮಾ ಯುವತಿಯರ ಮೇಲೆ ಮಾನಸಿಕ ಕಿರುಕುಳ ಹಾಗೂ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಹೇಳಿಕೆ ನೀಡಲು ನೋಟಿಸ್ ಕಳುಹಿಸಲಾಗಿದೆ.

ಇವರಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗುವಂತೆ ತಿಳಿಸಲಾಗಿತ್ತು. ಎಲ್ಲ ರೀತಿಯಲ್ಲಿಯೂ ಇವರನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೆ ಪ್ರತಿಕ್ರಿಯಿಸುವುದಾಗಲೀ, ಸಭೆಯಲ್ಲಿಯೂ ಹಾಜರಾಗಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಆರೋಪಿಸಿದೆ.

ಸುಶಾಂತ್ ನಿಂದ ದೂರವಾಗು ಎಂದು ರಿಯಾಗೆ ಮಹೇಶ್‌ ಭಟ್ ಹೇಳಿದ್ರಾ?

ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಕಠಿಣ ಕ್ರಮ ಕೈಗೊಂಡಿದ್ದು, ನೋಟಿಸ್ ಕಳುಹಿಸಿದೆ ಎಂದಿದ್ದಾರೆ. ಅಗಸ್ಟ್ 18ರಂದು 11.30ಕ್ಕೆ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಿದ್ದು, ಇದರ ಮುಂದೆ ಹಾಜರಾಗದಿದ್ದಲ್ಲಿ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನಲಾಗಿದೆ.

ಮಿಸ್‌ ಏಷ್ಯ ಸ್ಪರ್ಧೆ ಆಯೋಜಿಸಿ ಯುವತಿಯರನ್ನು ಮಾಡೆಲ್‌ಗಳಾಗಿ ರೂಪಿಸುವ ಭರವಸೆ ನೀಡಲಾಗುತ್ತದೆ. 2950 ರೂಪಾಯಿ ಎಂಟ್ರಿ ಫೀಸ್‌ ಕೂಡಾ ಪಡೆಯಲಾಗುತ್ತದೆ ಎಂದು ಆರೋಪಿಸಲಾಗಿದೆ.

ಆಲಿಯಾ ಭಟ್ 'ಸಡಕ್-2' ಪೋಸ್ಟರ್‌ ರಿಲೀಸ್‌; ಬಹಿಷ್ಕರಿಸುವಂತೆ ನೆಟ್ಟಿಗರಿಂದ ಆಕ್ರೋಶ!

ಯುವತಿಯರು ಸ್ಪರ್ಧೆಗಾಗಿ ಅಪ್ಲೈ ಉತ್ತಮ ರ್ಯಾಂಕಿಂಗ್ ಸಿಗಲು ಮಾಡಿದಾಗ ಬೆತ್ತಲೆ ಫೋಟೋ ಕಳುಹಿಸಕೊಡುವಂತೆ ಕೇಳಲಾಗುತ್ತದೆಎ ಎಂದು ದೂರಿನಲ್ಲಿ ಹೇಳಲಾಗಿದೆ. ಯುವತಿಯೊಂದಿಗೆ ಒಮ್ಮೆ ದೈಹಿಕ ಸಂಪರ್ಕ ಹೊಂದಿದ ಮೇಲೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳಲು ಬ್ಲಾಕ್‌ಮೇಲ್ ಮಾಡಲಾಗುತ್ತಿತ್ತು.

Scroll to load tweet…

ಈಗಾಗಲೇ ದೇಶದ ಹಲವು ಕಡೆಯಿಂದ ಯುವತಿಯರು ತೊಂದರೆಗೊಳಗಾಗಿದ್ದಾರೆ ಎಂದಿದ್ದಾರೆ. ಈ ಸಂಬಂಧ ದೂರಿನಲ್ಲಿ ಯುವತಿಯರ ಹೇಳಿಕೆ, ವಿಡಿಯೋ ಸಾಕ್ಷ್ಯಗಳನ್ನೂ ಸಲ್ಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೇಶ್ ಭಟ್ ಲೀಗಲ್ ಟೀಂ ತಮಗೆ ಯಾವುದೇ ನೋಟಿಸ್ ಸಿಕ್ಕಿಲ್ಲ ಎಂದು ಪ್ರತಿಕ್ರಿಯಿಸಿದೆ.