ಸನ್ನಿ ಡಿಯೋಲ್​ ಪುತ್ರನ ಡೇಟಿಂಗ್ ಫೋಟೋ ನೋಡಿ ಪ್ಯಾಂಟ್​ ಹರಿದು ಬಿಡಮ್ಮಾ ಎಂದ ನೆಟ್ಟಿಗರು!

ನಟ ಸನ್ನಿ ಡಿಯೋಲ್​ ಪುತ್ರ ಕರಣ್​ ಡಿಯೋಲ್​ ತಮ್ಮ ಭಾವಿ ಪತ್ನಿಯ ಜೊತೆ ಹೋಟೆಲ್​ಗೆ ಹೋಗಿದ್ದು, ಅದರ ಫೋಟೋ ಟ್ರೋಲಿಗರಿಗೆ ಆಹಾರವಾಗಿದೆ. ಏನದು?
 

Karan Deol spotted with fiance Drisha Acharya for the first time ahead of rumoured

80-90ರ ದಶಕದಲ್ಲಿ ಬಾಲಿವುಡ್​​ (Bollywood) ಆಳಿದ ನಟರದಲ್ಲಿ ಒಬ್ಬರು ಸನ್ನಿ ಡಿಯೋಲ್​. ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಸನ್ನಿ ಅವರಿಗೆ 27 ವರ್ಷದ ಮಗನಿದ್ದಾನೆ. ಅವರ ಹೆಸರು ಕರಣ್ ಡಿಯೋಲ್.  ತಮ್ಮ ಕುಟುಂಬದ ಹೋಮ್ ಪ್ರೊಡಕ್ಷನ್ ಅಡಿಯಲ್ಲಿ ಬಾಲಿವುಡ್‌ನ ವಿವಿಧ ಯೋಜನೆಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕರಣ್​ ಕೆಲಸ ಮಾಡುತ್ತಿದ್ದಾರೆ . ಶೀಘ್ರದಲ್ಲೇ ಅವರು ಮನಾಲಿ ಮತ್ತು ಹಿಮಾಚಲ ಪ್ರದೇಶದ ಇತರ ಗುಡ್ಡಗಾಡು ಪ್ರದೇಶಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಅವರ ಮುಂಬರುವ ಚಿತ್ರ ' ಪಲ್ ಪಾಲ್ ದಿಲ್ ಕೆ ಪಾಸ್ ' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ .  ಕರಣ್ ಡಿಯೋಲ್  27 ನವೆಂಬರ್ 1990 ರಂದು ಜನಿಸಿದ್ದಾರೆ.  ಅವರ ಕುಟುಂಬ ಸದಸ್ಯರು ಮತ್ತು ಆಪ್ತರು ಕೂಡ ಅವರನ್ನು ರಾಕಿ ಎಂದು ಕರೆಯುತ್ತಾರೆ . ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಜುಹುವಿನ ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ಅವರು, ಸೆಲೆಬ್ರಿಟಿ ಕಿಡ್ ಆಗಿದ್ದರೂ, ಇತರ ಸ್ಟಾರ್ ಮಕ್ಕಳಿಗಿಂತ ಭಿನ್ನವಾಗಿ ಖಾಸಗಿ ಜೀವನವನ್ನು ನಡೆಸುತ್ತಿದ್ದಾರೆ.

ಇದೀಗ ಕರಣ್​ ಪತಿಯಾಗಿ ಬಡ್ತಿ ಪಡೆಯಲಿದ್ದಾರೆ. ಚಲನಚಿತ್ರ ನಿರ್ಮಾಪಕ ಬಿಮಲ್ ರಾಯ್ ಅವರ ಮೊಮ್ಮಗಳು ಮತ್ತು ಅವರು ಪ್ರಸ್ತುತ ದುಬೈನಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಮ್ಯಾನೇಜರ್ (Manager) ಆಗಿ ಕೆಲಸ ಮಾಡುತ್ತಿರುವ ದ್ರಿಶಾ ಆಚಾರ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.  ಕರಣ್ ಡಿಯೋಲ್ ಇತ್ತೀಚೆಗೆ ತಮ್ಮ ಪ್ರೇಯಸಿ ದ್ರಿಶಾ  ಆಚಾರ್ಯ (Drisha Acharya) ಅವರೊಂದಿಗೆ ಕಾಣಿಸಿಕೊಂಡಿದ್ದು, ಅದೀಗ ಭಾರಿ ಸುದ್ದಿಯಾಗಿದೆ.  ಇಬ್ಬರೂ ಡೇಟಿಂಗ್​ ಸಮಯದಲ್ಲಿ ಊಟಕ್ಕೆಂದು ಮುಂಬೈನ ರೆಸ್ಟೋರೆಂಟ್‌ಗೆ ಬಂದಿದ್ದರು. ಈ ಸಮಯದಲ್ಲಿ ಇಬ್ಬರೂ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡರು. ಕೆಲ ದಿನಗಳ ಹಿಂದೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೂನ್‌ನಲ್ಲಿ ಇವರಿಬ್ಬರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಕರೀನಾ ಕಪೂರ್ ದುರಹಂಕಾರಿ, ಆಕೆ ಅಸಲಿ ಮುಖದ ಗುಟ್ಟು ಬಿಚ್ಚಿಟ್ಟ ನಿರ್ಮಾಪಕ

ಕರಣ್ (Karan Deol) ಮತ್ತು ದ್ರಿಶಾ ಬಗ್ಗೆ ಹೇಳುವುದಾದರೆ,  ಇಬ್ಬರೂ ಬಾಲ್ಯದಿಂದಲೂ  ಪರಿಚಿತರು. ಮೊದಲಿಗೆ  ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಬಳಿಕ  ಇಬ್ಬರೂ ಕೂಡ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಡೇಟಿಂಗ್​ ನಂತರ ಪ್ರೇಮ ಚಿಗುರಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಈ ಕಾರಣದಿಂದಾಗಿ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದಾರೆ. ಎರಡೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಮದುವೆಗೆ ಸಿದ್ಧತೆ ನಡೆಸಲಾಗಿದೆ. ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷವೆಂದರೆ ಕರಣ್ ತಮ್ಮ ಅಜ್ಜಿಯರಾದ ಧರ್ಮೇಂದ್ರ ಮತ್ತು ಪ್ರಕಾಶ್ ಕೌರ್ ಅವರ ವಿವಾಹ ವಾರ್ಷಿಕೋತ್ಸವದಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಅಂದಹಾಗೆ ಕರಣ್ ಅವರ ತಾತ ಪ್ರಸಿದ್ಧ ನಟ ಧರ್ಮೇಂದ್ರ ಮತ್ತು ಅವರ ಚಿಕ್ಕಪ್ಪ ಬಾಬಿ ಡಿಯೋಲ್ ಮತ್ತು ಅಭಯ್ ಡಿಯೋಲ್ ಕೂಡ ಬಾಲಿವುಡ್‌ನ ಪ್ರಸಿದ್ಧ ನಟರು ಎಂದು ಬೇರೆ ಹೇಳಬೇಕಾಗಿಲ್ಲ.

ಡೇಟಿಂಗ್​ ಸಮಯದಲ್ಲಿ ಊಟಕ್ಕೆಂದು ಮುಂಬೈನ ರೆಸ್ಟೋರೆಂಟ್ ಒಂದಕ್ಕೆ ಬಂದಿದ್ದ ಈ ಜೋಡಿ ಟ್ರೋಲ್​ಗೆ ಒಳಗಾಗುತ್ತಿರುವುದಕ್ಕೆ ಕಾರಣ, ದ್ರಿಶಾ ಅವರು ತೊಟ್ಟಿದ್ದ ಪ್ಯಾಂಟ್​. ತುಂಬಾ ಸೀದಾ ಸಾದಾ ಬಟ್ಟೆ ತೊಟ್ಟು ಯಾವುದೇ ರೀತಿಯ ಅಶ್ಲೀಲತೆಯನ್ನು ಬಿಂಬಿಸದಿದ್ದರೂ ಟ್ರೋಲಿಗರಿಗೆ ಏನೋ ಒಂದು ಬೇಕಲ್ಲ. ಅದಕ್ಕಾಗಿಯೇ ಈಗಿನ ಫ್ಯಾಷನ್​ ಆಗಿರುವ ಹರುಕು ಮುರುಕು ಪ್ಯಾಂಟ್​ ಕಂಡು ಟ್ರೋಲ್​ ಮಾಡುತ್ತಿದ್ದಾರೆ. ನಿಮ್ಮ ಭಾವಿ ಸೊಸೆಗೆ ಒಂದು ಸರಿಯಾದ ಪ್ಯಾಂಟ್​ ಕೊಡಿಸಲು ಆಗುವುದಿಲ್ಲವೆ ಎಂದು ಕೆಲವರು ಟ್ರೋಲಿಗರು ಸನ್ನಿ ಡಿಯೋಲ್​ ಅವರ ಕಾಲೆಳೆದಿದ್ದರೆ, ಇನ್ನು ಕೆಲವರು ಅರ್ಧಂಬರ್ಧ ಹರಿದ ಪ್ಯಾಂಟ್​ ಯಾಕೆ ಹಾಕಿರುವೆಯಮ್ಮಾ, ಪೂರ್ತಿ ಹರಿದುಬಿಡು ಎಂದು ತಮಾಷೆ ಮಾಡಿದ್ದಾರೆ. 

Sonali Bendre: ಮಧ್ಯರಾತ್ರಿ ಕರೆ ಮಾಡಿ ಓಡಿಹೋಗೋಣ ಬಾ ಎಂದ: ಭಯಾನಕ ಅನುಭವ ಬಿಚ್ಚಿಟ್ಟ ನಟಿ

ಇನ್ನು ಕರಣ್​ ಅವರ ಬಾಲ್ಯದ (Childhood) ಕುರಿತು ಹೇಳುವುದಾದರೆ, ಕರಣ್ ಡಿಯೋಲ್ ತನ್ನ ತಂದೆ ಮತ್ತು ತಾತನಂತೆ ಯಾವಾಗಲೂ ನಟನಾಗಬೇಕೆಂದು ಯೋಚಿಸುತ್ತಿದ್ದರು. ಆದರೆ ಅವರ ಪಾಲಕರು  ಶಿಕ್ಷಣವನ್ನು ಪೂರ್ಣಗೊಳಿಸಲು ಗಂಭೀರವಾಗಿದ್ದರು.  ಅರಣ್ ಡಿಯೋಲ್  ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಜುಹುವಿನ ಎಕೋಲ್ ಮೊಂಡಿಯಾಲ್ ವರ್ಲ್ಡ್ ಸ್ಕೂಲ್‌ನಲ್ಲಿ ಮಾಡಿದರು.  ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಮತ್ತು ಅವರು ತಮ್ಮ ಹೋಮ್ ಪ್ರೊಡಕ್ಷನ್ ಹೌಸ್, ವಿಜಯತಾ ಫಿಲ್ಮ್ಸ್ ಅಡಿಯಲ್ಲಿ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.  2013 ರಲ್ಲಿ, ಕರಣ್ ಅವರ ತಂದೆ ಸನ್ನಿ ಡಿಯೋಲ್ , ಅಜ್ಜ ಧರ್ಮೇಂದ್ರ ಮತ್ತು ಚಿಕ್ಕಪ್ಪ ಬಾಬಿ ಡಿಯೋಲ್ ಒಳಗೊಂಡ ' ಯಮ್ಲಾ ಪಾಗ್ಲಾ ದೀವಾನಾ 2 ' ನ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು 2017 ರಲ್ಲಿ , ಅವರು ತಮ್ಮ ಚೊಚ್ಚಲ ಚಿತ್ರ 'ಪಿ ಅಲ್ ಪಾಲ್ ದಿಲ್ ಕೆ ಪಾಸ್ ' ಚಿತ್ರೀಕರಣವನ್ನು ಪ್ರಾರಂಭಿಸಿದರು ಇದನ್ನು ಸನ್ನಿ ಡಿಯೋಲ್ ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ.  

 

 
 
 
 
 
 
 
 
 
 
 
 
 
 
 

A post shared by yogen shah (@yogenshah_s)

Latest Videos
Follow Us:
Download App:
  • android
  • ios