Asianet Suvarna News Asianet Suvarna News

ನೂರರ ನವೋತ್ಸಾಹದತ್ತ 'ಕನ್ನೇರಿ' ದಾಪುಗಾಲು

  • ಹಲವು ಹೊಸ ಹೊಸ ಸಿನಿಮಾಗಳು ಥಿಯೇಟರ್‌ನಲ್ಲಿ
  • ಸೆಂಚುರಿ ಬಾರಿಸುವ ಜೋಶ್‌ನಲ್ಲಿ ಕನ್ಹೇರಿ
  • ನೀನಾಸಂ ಮಂಜು ಕಥೆ ಆಧರಿಸಿದ ಕನ್ಹೇರಿ ಸಿನಿಮಾ
Kanneri movie going to hit century akb
Author
Bangalore, First Published May 23, 2022, 2:00 PM IST

ಚಿತ್ರರಂಗಕ್ಕೆ ಆವರಿಸಿದ್ದ ಕೊರೋನಾ ಕರಿಛಾಯೆ ಮಾಯವಾಗಿ ಸಿನಿ ದುನಿಯಾ ಮತ್ತೆ ರಂಗೇರಿದೆ. ಅದರ ಪ್ರತಿಫಲವೋ ಏನು? ಡಬ್ಬಿಯಲ್ಲಿ ರಿಲೀಸ್ ಆಗದೇ ಸ್ಟಾಕ್ ಇದ್ದ ಸಿನಿಮಾಗಳು ಏಕ್ ಧಾಮ್ ಥಿಯೇಟರ್‌ಗೆ ಲಗ್ಗೆ ಇಡ್ತಿವೆ. ಅದ್ರಲ್ಲೂ ಕನ್ನಡ ಚಿತ್ರರಂಗದಲ್ಲಂತೂ ವಾರಕ್ಕೆ ಏಳೆಂಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿದೆ. ಆದರೂ ಕನ್ನಡ ಪ್ರೇಕ್ಷಕ ಒಳ್ಳೆ ಕಂಟೆಂಟ್ ಹಾಗೂ‌ ಸೊಗಡಿನ ಸಿನಿಮಾವನ್ನು ಯಾವತ್ತು ಕೈಬಿಡಲ್ಲ ಅನ್ನೋದಕ್ಕೆ ಕನ್ನೇರಿ ಸಿನಿಮಾದ ಗೆಲುವಿನ ಹೆಜ್ಜೆಯೇ ಸಾಕ್ಷಿ.

ಮೂಕಹಕ್ಕಿ ಕಥೆ ಹೇಳಿ ಪ್ರೇಕ್ಷಕರನ್ನು ರಂಜಿಸಿದ್ದ ನೀನಾಸಂ ಮಂಜು (Neenasam Manju) ಈ ಬಾರಿ ಅಷ್ಟೇ ಗಟ್ಟಿತನದ ಕನ್ನೇರಿ ಕಥೆಯೊಂದಿಗೆ ಹಾಜರಾಗಿದ್ದರು. ನಮ್ಮ ನಿಮ್ಮ ನಡುವೆ ನಡೆಯುವ, ಯಾರು ಗಮನಿಸದ ಕಥೆಯೊಂದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿ ಪ್ರೇಕ್ಷಕರಿಗೆ ಉಣ ಬಡಿಸಿದ್ದರು. ಪರಿಸರ (Nature) , ಅದರೊಳಗೆ ಬದುಕು ಕಟ್ಟಿಕೊಂಡು ಉಸಿರಾಗಿಸಿಕೊಂಡ ಜನರ ಬಗ್ಗೆ, ನೆಲದ ಆಚಾರ, ಸಂಸ್ಕೃತಿ ಬಗ್ಗೆ, ಅಧಿಕಾರಿಗಳ ಅಧಿಕಾರದ ದರ್ಪ ಹೀಗೆ ಹಲವು ವಿಚಾರಗಳ ಮೇಲೆ ಕನ್ನೇರಿ ಸಿನಿಮಾ ಮೂಲಕ ಬೆಳಕು ಚೆಲ್ಲಿದ್ದರು. ಅರಿವು ಮೂಡಿಸುವ, ಎಚ್ಚರಿಸುವ ಈ ಕಥೆ ಪ್ರತಿಯೊಬ್ಬ ಪ್ರೇಕ್ಷಕನ ಮನತಟ್ಟಿತ್ತು. ಹೀಗಾಗಿ ಪ್ರೇಕ್ಷಕ ಕನ್ನೇರಿ ಚಿತ್ರವನ್ನು ಬಾಚಿ ತಬ್ಬಿಕೊಂಡಿದ್ದು, ಅದರ ಪರಿಣಾಮ ಇವತ್ತು ಸಿನಿಮಾ ನೂರನೇ ದಿನದತ್ತ ಯಶಸ್ವಿಯಾಗಿ ಮುನ್ನುಗುತ್ತಿದೆ.

Film Review: ಕನ್ನೇರಿ

ನೀನಾಸಂ ಮಂಜು ಕಥೆ, ಹಾಗೆಯೇ ಪಾತ್ರಗಳ ಅಮೋಘ ಅಭಿನಯ ಕನ್ನೇರಿ ಚಿತ್ರವನ್ನು ಯಶಸ್ಸಿನ ಗುರಿ ಮುಟ್ಟಿಸಿದೆ. ಅರ್ಚನಾ ಮಧುಸೂಧನ್ (Archana Madhusudhan)  ಪ್ರಮುಖ ಪಾತ್ರದಲ್ಲಿ ಜೀವ ತುಂಬಿದರೇ, ಉಳಿದಂತೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ (MK Math), ಅರುಣ್ ಸಾಗರ್ (Arun Sagar), ಅನಿತಾ ಭಟ್ (Anita Bhatt), ಕರಿಸುಬ್ಬು (Karisubu), ಸರ್ದಾರ್ ಸತ್ಯ (Sardar Satya) ಒಳಗೊಂಡ ಹಲವು ಕಲಾವಿದರ ನಟನೆ ಅದ್ಭುತವಾಗಿ‌ ಮೂಡಿ ಬಂದಿದ್ದು, ಕದ್ರಿ ಮಣಿಕಾಂತ್ ಸಂಗೀತವಿರುವ ಈ ಚಿತ್ರ ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ.ಹೆಬ್ಬಾರ್ (PP Hebbar) ಹಾಗೂ ಚಂದ್ರಶೇಖರ್ (Chandrasekhar) ನಿರ್ಮಾಣ ಮಾಡಿದ್ದಾರೆ.

Kanneri Movie: ನೈಜ ಘಟನೆಯ ಬೆನ್ನೇರಿದ 'ಕನ್ನೇರಿ' ಮಾ.4ರಂದು ರಿಲೀಸ್!
 

Follow Us:
Download App:
  • android
  • ios