Asianet Suvarna News Asianet Suvarna News

Kanneri Movie: ನೈಜ ಘಟನೆಯ ಬೆನ್ನೇರಿದ 'ಕನ್ನೇರಿ' ಮಾ.4ರಂದು ರಿಲೀಸ್!

ಬುಡಕಟ್ಟು ಜನಾಂಗದವರ ಬದುಕು ಬವಣೆಯನ್ನು ಬಿಂಬಿಸುವಂತಹ ಮೂಕಹಕ್ಕಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ನೀನಾಸಂ ಮಂಜು ಅವರು ಜೇನು ಕುರುಬ ಜನಾಂಗದ ಯುವತಿಯ ಕಥೆಯನ್ನು 'ಕನ್ನೇರಿ' ಹೇಳಲು ಹೊರಟಿದ್ದು, ಚಿತ್ರವು ಮಾ.4ಕ್ಕೆ ಬಿಡುಗಡೆಯಾಗಲಿದೆ. 

Archana Madhusudhan Starrer Kanneri Film Ready to Release gvd
Author
Bangalore, First Published Mar 3, 2022, 7:59 PM IST

ಬುಡಕಟ್ಟು ಜನಾಂಗದವರ ಬದುಕು ಬವಣೆಯನ್ನು ಬಿಂಬಿಸುವಂತಹ 'ಮೂಕಹಕ್ಕಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ನೀನಾಸಂ ಮಂಜು (Ninasam Manju) ಅವರು ಜೇನು ಕುರುಬ ಜನಾಂಗದ ಯುವತಿಯ ಕಥೆಯನ್ನು 'ಕನ್ನೇರಿ' (Kanneri) ಹೇಳಲು ಹೊರಟಿದ್ದು, ಚಿತ್ರವು ಮಾ.4ಕ್ಕೆ ಬಿಡುಗಡೆಯಾಗಲಿದೆ.  ಈ ಕುರಿತು ನಿರ್ದೇಶಕ ಮಂಜು, 'ಕಾಡಿನಿಂದ ಜನರನ್ನು ಒಕ್ಕಲೆಬ್ಬಿಸುವಾಗ ಎಷ್ಟೋ ಹೆಣ್ಣುಮಕ್ಕಳ ಬಾಳು ನರಕವಾಯ್ತು. ಹೆಣ್ಣು ಮಗುವಿನ ಮೇಲಿನ ದೌರ್ಜನ್ಯ ಅರಣ್ಯ ರೋದನವಾಯ್ತು. ಸರ್ಕಾರ ಒಂದು ನಿರ್ಧಾರ ಈ ಜನರ ಬದುಕಿಗೆ ಹೇಗೆ ಕೊಡಲಿಯೇಟು ನೀಡಿತು ಎಂಬುದನ್ನೇ ಪ್ರಧಾನವಾಗಿಟ್ಟುಕೊಂಡು ಚಿತ್ರ ಮಾಡಲಾಗಿದೆ. ಕಾಡಿನ ಜನರಿಂದಲೇ ಆ್ಯಕ್ಟಿಂಗ್‌ ಮಾಡಿಸಿದ್ದೇವೆ' ಎಂದರು.

ಜೇನು ಕುರುಬ ಜನಾಂಗದ ಯುವತಿ ಮುತ್ತ ಮ್ಮ ತಮ್ಮ ಅಜ್ಜಿಯ ಚಿಕಿತ್ಸೆಗಾಗಿ ಹಣ ಹೊಂದಿಸಲು ಬೆಂಗಳೂರಿಗೆ ಹೋದಾಗ ಆಕೆ ಅಲ್ಲಿ ಏನೇನು ಸವಾಲುಗಳನ್ನು ಎದುರಿಸುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ. 'ಕನ್ನೇರಿ' ಎಂದರೆ ಕಾಡಿನ ವಸಂತ ಎಂದು ನಿರ್ದೇಶಕರು ತಿಳಿಸಿದ್ದಾರೆ.  ನಾನು ಅಭಿನಯ ಶಾಲೆಗೆ ಹೋಗುತ್ತಿದ್ದಾಗ ಅಲ್ಲಿ ಮಂಜು ಅವರು ನನಗೆ ನಟನೆಯ ಬಗ್ಗೆ ಹಿಂಟ್ಸ್ ಕೊಟ್ಟಿದ್ದರು, ಈಗ ಅವರು ನಿರ್ದೇಶಿಸಿರುವ 'ಕನ್ನೇರಿ' ಚಿತ್ರದಲ್ಲಿ ಉತ್ತಮ ಪಾತ್ರ ನೀಡಿದ್ದಾರೆ, ನನ್ನ ಶಕ್ತಿ ಮೀರಿ ಉತ್ತಮ ಅಭಿನಯ ಮಾಡಿದ್ದೇನೆ ಎಂದು ಚಿತ್ರದ ನಾಯಕಿ ಅರ್ಚನ ಮಧುಸೂದನ್ (Archana Madhusudhan) ಹೇಳಿದ್ದಾರೆ.

Vikranth Rona ಸಿನಿಮಾದ ಇಂಗ್ಲೀಷ್ ವರ್ಷನ್‌ಗೆ ಕಿಚ್ಚ ಸುದೀಪ್ ಡಬ್ಬಿಂಗ್!

ಕರಿಸುಬ್ಬು ಮಾತನಾಡಿ, ರೋಡ್ ರಂಗಣ್ಣ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾನು ದಲ್ಲಾಳಿ ಥರದ ರೋಲ್‍ನಲ್ಲಿ ಕಾಡಿನ ಜನರಿಗೆ ನಾಡಿನಲ್ಲಿ ಕೆಲಸ ಕೊಡಿಸುವವನಾಗಿ ಕಾಣಿಸಿಕೊಂಡಿದ್ದೇನೆ. ಇಂದು ಕಾಡು ಕುರುಬ ಜನಾಂಗದ ಅಳಿವಿನ ಅಂಚಿಗೆ ಹೋಗುತ್ತಿರುವಾಗಲೇ ನಿರ್ದೇಶಕರು ಮಾಡಿರುವ ಈ ಚಿತ್ರ ತುಂಬಾ ಪರಿಣಾಮಕಾರಿಯಾಗಿದೆ ಎಂದು ಹೇಳಿದರು. ಅರುಣ್‌ ಸಾಗರ್‌ (Arun Sagar), ‘ನಾನು ಈ ಚಿತ್ರದಲ್ಲಿ ಮಗುವಿಗೆ ನ್ಯಾಯ ಕೊಡಿಸುವ ಲಾಯರ್‌ ಪಾತ್ರದಲ್ಲಿದ್ದೇನೆ’ ಎಂದರು. ಈ ಸಂದರ್ಭದಲ್ಲಿ ಕಲಾವಿದರಾದ ಅನಿತಾ ಭಟ್‌, ಪ್ರಮೀಳಾ ಜೋಷಾಯ್‌, ಎಂ ಕೆ ಮಂಜು, ಮಾ. ಗೌರವ್‌, ಅರ್ಚನಾ ಮಧುಸೂದನ್‌, ಸೀತಾರಾಂ ಹಾಜರಿದ್ದರು.

Archana Madhusudhan Starrer Kanneri Film Ready to Release gvd

'ಕನ್ನೇರಿ' ಮಹಿಳಾ ಪ್ರಧಾನ ಹಾಗು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಮತ್ತು ಕ್ಷೀರಸಾಗರ ಅವರ 'ಜೇನು: ಆಕಾಶದ ಅರಮನೆ' ಕಾದಂಬರಿ ಎಳೆಯನ್ನು ಚಿತ್ರದಲ್ಲಿ ಬಳಸಿಕೊಂಡು ಕಥೆ ಹೆಣೆಯಲಾಗಿದೆ. ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು. ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ.

KGF Chapter 2: ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್: 'ಕೆಜಿಎಫ್ 2' ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್!

ಇನ್ನು ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರದ ಕಥೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸದ್ಯ ನೈಜತೆಗೆ ಹೆಚ್ಚು ಒತ್ತು ನೀಡಿರುವ ಚಿತ್ರತಂಡ ಬುಡಕಟ್ಟು ಜನರನ್ನೂ ಕೂಡ ಚಿತ್ರದಲ್ಲಿ ತೊಡಗಿಸಿಕೊಂಡಿದೆ ಎನ್ನುವುದು 'ಕನ್ನೇರಿ'ಯ ಮತ್ತೊಂದು ಹೈಲೈಟ್. ಬೆಂಗಳೂರು. ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಿದ್ದು, ಗಣೇಶ್ ಹೆಗ್ಡೆ ಕ್ಯಾಮೆರಾಕೈಚಳಕ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದ್ದು, ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತರು ಚಿತ್ರದ ಪಾತ್ರಗಳಿಗೆ ಜೀವ ತುಂಬಿದ್ದಾರೆ. 

Follow Us:
Download App:
  • android
  • ios