ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಆಡಿಯೋ ಅದ್ದೂರಿಯಾಗಿ ರಿಲೀಸ್ ಆಗಿದೆ. ಕಾರ್ಯಕ್ರಮದಲ್ಲಿ ಶಿವಣ್ಣ ಚೆನ್ನೈ ನೆನಪನ್ನು ಮೆಲುಕು ಹಾಕಿದ್ದಾರೆ. 

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಜೈಲರ್ ಸಿನಿಮಾದ ಆಡಿಯೋ ಅದ್ದೂರಿಯಾಗಿ ರಿಲೀಸ್ ಆಗಿದೆ. ಈಗಾಗಲೇ ಸಿನಿಮಾದಿಂದ ಕಾವಾಲ ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಸಿನಿಮಾದ ಸಂಪೂರ್ಣ ಆಡಿಯೋ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಚೆನ್ನೈನಲ್ಲಿ ನಡೆದ ಅದ್ದೂರಿ ಈವೆಂಟ್ ನಲ್ಲಿ ಇಡೀ ಸಿನಿಮಾತಂಡ ಹಾಜರಾಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಕನ್ನಡದ ಸ್ಟಾರ್ ಶಿವರಾಜ್ ಕುಮಾರ್, ತಮನ್ನಾ, ನೆಲ್ಸನ್ ದಿಲೀಪ್ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. 

Add Asianetnews Kannada as a Preferred SourcegooglePreferred

ಅಂದಹಾಗೆ ಜೈಲರ್ ಆಡಿಯೋ ಸಾವೀರಾರು ಅಭಿಮಾನಿಗಳ ನಡುವೆ ರಿಲೀಸ್ ಮಾಡಲಾಯಿತು. ಅದ್ದೂರಿ ಸಮಾರಂಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಮಾತನಾಡಿ ಚೆನ್ನೈ ನೆನಪನ್ನು ಮೆಲುಕು ಹಾಕಿದರು. ತಾನು ಚೆನ್ನೈನಲ್ಲೇ ಹುಟ್ಟಿ ಬೆಳೆದಿದ್ದು ಎಂದು ಶಿವಣ್ಣ ಹೇಳಿದ್ದಾರೆ. 'ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಚೆನ್ನೈನಲ್ಲಿ. ಆಕ್ಟಿಂಗ್ ಕೋರ್ಸ್ ಮಾಡಿದ್ದು ಇಲ್ಲೇ. ಚೆನ್ನೈ ಎಂದರೆ ಎಮೋಷನಲ್ ಸ್ಥಳ. ನನಗೆ ಚೆನ್ನೈ ತುಂಬಾ ಇಷ್ಟ' ಎಂದು ಹೇಳಿದ್ದಾರೆ. 

'ಒಂದು ದಿನ ನನ್ನ ತಂದೆ ಶಬರಿಮಲೆಗೆ ಹೋದಾಗ ರಜನಿ ನಾನು ಸರ್ ಅವರ ಹಿಡಿದುಕೊಂಡು ಹೋಗಿದ್ದೆ. ಬಾಲ್ಯದಲ್ಲಿ ಕೈ ಹಿಡಿದು ಅಂದು ತೋರಿದ ಪ್ರೀತಿಯನ್ನು ಈಗಲೂ ತೋರಿಸುತ್ತಾರೆ. ಅವರು ನನ್ನ ಚಿಕ್ಕಪ್ಪನ ಹಾಗೆ ಎಂದು ಹೇಳಿದರೆ ತಪ್ಪಾಗದು. ನನಗೆ ತಮಿಳು ಚಿತ್ರರಂಗದಲ್ಲಿ ಬಹಳಷ್ಟು ಮಂದಿ ಇಷ್ಟವಾಗುತ್ತಾರೆ. ಬೀಸ್ಟ್ ಚಿತ್ರೀಕರಣದ ನಂತರ ನೆಲ್ಸನ್ ನನಗೆ ಕರೆ ಮಾಡಿದರು. ನಂತರ ನಾನು ವಿಜಯ್ ಸರ್ ಅವರನ್ನು ಭೇಟಿಯಾದೆ. ಅದೇ ರೀತಿ ನಾನು ಧನುಷ್ ಅವರ ದೊಡ್ಡ ಅಭಿಮಾನಿ' ಎಂದು ಶಿವಣ್ಣ ಹೇಳಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ರಜನಿಕಾಂತ್: ಕೆಂಪು ಟಿ ಶರ್ಟ್, ಕಪ್ಪು ಚಡ್ಡಿಯಲ್ಲಿ ತಲೈವ ಮಸ್ತ್ ಎಂಜಾಯ್

ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜೊತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ರಜನಿ ಜೊತೆ ಶಿವಣ್ಣ ಆಕ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ನಟಿಸಿರುವುದರಿಂದ ಕನ್ನಡಿಗರಿಗೂ ಈ ಕೂಡ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಶಿವರಾಜ್ ಕುಮಾರ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ.

ರಜನಿಕಾಂತ್ 'ಜೈಲರ್' ಕರ್ನಾಟಕ ವಿತರಣೆ ಹಕ್ಕು ಸೋಲ್ಡ್ ಔಟ್: ಮತ್ತೆ ಜಯಣ್ಣ ಪಾಲಿನ ಆಪದ್ಬಾಂಧವ ಆಗ್ತಾರಾ ಶಿವಣ್ಣ?

ಜೈಲರ್ ಸಿನಿಮಾ ಬಗ್ಗೆ ಹೇಳುವುದಾದರೆ ಈ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಯೋಗಿ ಬಾಬು, ಮಲಯಾಳಂ ಸ್ಟಾರ್ ಮೋಹನ್ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದಾರೆ. ಆಗಸ್ಟ್ ನಲ್ಲಿ ತೆರೆಗೆ ಬರಲಿದೆ ಜೈಲರ್.