Asianet Suvarna News Asianet Suvarna News

ಕಾನ್ಸ್‌ ಚಿತ್ರೋತ್ಸವದಲ್ಲಿ ಕನ್ನಡ ಜಾನಪದ ಕಿರುಚಿತ್ರ ಪ್ರದರ್ಶನ

ಶಿವಮೊಗ್ಗ ಮೂಲದವರಾದ ಹಾಗೂ ಈಗ ಮೈಸೂರಿನಲ್ಲಿ ವಾಸಿಸುತ್ತಿರುವ ಚಿದಾನಂದ ಎಸ್‌. ನಾಯ್ಕ್‌ ಅವರು ನಿರ್ದೇಶಿಸಿರುವ 16 ನಿಮಿಷದ ಕಿರುಚಿತ್ರದಲ್ಲಿ ಬಂಜಾರ ಸಮುದಾಯದ ಹಳ್ಳಿಯೊಂದರಲ್ಲಿ ಹುಂಜವನ್ನು ಕದ್ದೊಯ್ದಾಗ ಗ್ರಾಮದಲ್ಲಿ ಬೆಳಕೇ ಮೂಡದೆ ಅಂಧಕಾರದಲ್ಲಿ ವೃದ್ಧೆ ಪರಿತಪಿಸುತ್ತಿರುವ ಕುರಿತು ಚಿತ್ರಿಸಲಾಗಿದೆ. 

Kannada Folk Short Film Screening at Cannes Film Festival 2024 grg
Author
First Published May 23, 2024, 10:17 AM IST

ಕಾನ್ಸ್ (ಫ್ರಾನ್ಸ್‌)(ಮೇ.23):  ವಿಶ್ವವಿಖ್ಯಾತ ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಕನ್ನಡ ಜಾನಪದ ಕಿರುಚಿತ್ರ ‘ಸನ್‌ಫ್ಲವರ್ಸ್‌ ವರ್‌ ದಿ ಫಸ್ಟ್‌ ಒನ್ಸ್‌ ಟು ನೋ’ ಮಂಗಳವಾರ ಪ್ರದರ್ಶನಗೊಂಡಿದೆ. 

ಶಿವಮೊಗ್ಗ ಮೂಲದವರಾದ ಹಾಗೂ ಈಗ ಮೈಸೂರಿನಲ್ಲಿ ವಾಸಿಸುತ್ತಿರುವ ಚಿದಾನಂದ ಎಸ್‌. ನಾಯ್ಕ್‌ ಅವರು ನಿರ್ದೇಶಿಸಿರುವ 16 ನಿಮಿಷದ ಕಿರುಚಿತ್ರದಲ್ಲಿ ಬಂಜಾರ ಸಮುದಾಯದ ಹಳ್ಳಿಯೊಂದರಲ್ಲಿ ಹುಂಜವನ್ನು ಕದ್ದೊಯ್ದಾಗ ಗ್ರಾಮದಲ್ಲಿ ಬೆಳಕೇ ಮೂಡದೆ ಅಂಧಕಾರದಲ್ಲಿ ವೃದ್ಧೆ ಪರಿತಪಿಸುತ್ತಿರುವ ಕುರಿತು ಚಿತ್ರಿಸಲಾಗಿದೆ. ಈ ನಿಮಿತ್ತ ಚಿತ್ರೋತ್ಸವಕ್ಕಾಗಿ ನಾಯಕ್‌, ಫೋಟೋಗ್ರಫಿ ನಿರ್ದೇಶಕ ಊರಜ್ ಠಾಕೂರ್‌, ಸೌಂಡ್‌ ಡಿಸೈನರ್‌ ಅಭಿಷೇಕ್‌ ಕದಂ, ಪ್ರೊಡಕ್ಷನ್‌ ಡಿಸೈನರ್‌ ಪ್ರಣವ್‌ ಖೋತ್‌ ಕಾನ್ಸ್‌ಗೆ ಆಗಮಿಸಿದ್ದಾರೆ.

ಪತ್ನಿ ಮೇಲೆ ರೇಪ್ ಮಾಡುವ, ನಿಮಿರು ದೌರ್ಬಲ್ಯದಿಂದ ಬಳಲುವ ಟ್ರಂಪ್; ಬಯೋಪಿಕ್ ವಿರುದ್ಧ ಸಿಡಿದು ಬಿದ್ದ ಅಮೆರಿಕ ಮಾಜಿ ಅಧ್ಯಕ್ಷ

ಈ ಚಿತ್ರವನ್ನು ಚಲನಚಿತ್ರ ಶಾಲಾ ಪ್ರಶಸ್ತಿ ವಿಭಾಗದಲ್ಲಿ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯನ್ನು ಪ್ರತಿನಿಧಿಸಿದ್ದು, ಗುರುವಾರ ಈ ವಿಭಾಗದಲ್ಲಿ ಪ್ರದರ್ಶನಗೊಂಡ ಚಿತ್ರಗಳಿಗೆ ಪ್ರಶಸ್ತಿ ಘೋಷಣೆಯಾಗಲಿದೆ.

Latest Videos
Follow Us:
Download App:
  • android
  • ios