ಪತ್ನಿ ಮೇಲೆ ರೇಪ್ ಮಾಡುವ, ನಿಮಿರು ದೌರ್ಬಲ್ಯದಿಂದ ಬಳಲುವ ಟ್ರಂಪ್; ಬಯೋಪಿಕ್ ವಿರುದ್ಧ ಸಿಡಿದು ಬಿದ್ದ ಅಮೆರಿಕ ಮಾಜಿ ಅಧ್ಯಕ್ಷ
ಡೊನಾಲ್ಡ್ ಟ್ರಂಪ್ ಬಯೋಪಿಕ್ ದಿ ಅಪ್ರೆಂಟಿಸ್ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶಿತವಾಗಿದ್ದು, ಇದರಲ್ಲಿ ಮಾಜಿ ಅಮೆರಿಕ ಅಧ್ಯಕ್ಷರು ಪತ್ನಿಯ ಮೇಲೆ ಅತ್ಯಾಚಾರವೆಸಗುವ ಸೀನ್ ಇದೆ. ಇದೀಗ ಟ್ರಂಪನ್ನು ಕೆರಳಿಸಿದ್ದು ಚಿತ್ರದ ವಿರುದ್ಧ ಕೇಸ್ ಹಾಕಲು ತೀರ್ಮಾನಿಸಿದ್ದಾರೆ.
ಕೇನ್ಸ್, ಫ್ರಾನ್ಸ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ತೋರಿಸುವ ಸ್ಫೋಟಕ ಬಯೋಪಿಕ್‌ನ ನಿರ್ದೇಶಕರು ಮಂಗಳವಾರ ವಿವಾದಾತ್ಮಕ ದೃಶ್ಯವನ್ನು ಸಮರ್ಥಿಸಿಕೊಂಡಿದ್ದಾರೆ, ಆಪಾದಿತ ಘಟನೆಯು 'ಪ್ರಸಿದ್ಧವಾಗಿದೆ' ಮತ್ತು ಮಾಜಿ ಅಧ್ಯಕ್ಷರ ಪಾತ್ರದ ಮೇಲೆ ಬೆಳಕು ಚೆಲ್ಲಿದೆ ಎಂದವರು ಹೇಳಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ತಂಡವು ಈ ಚಿತ್ರವನ್ನು ದುರುದ್ದೇಶಪೂರಿತವಾಗಿದ್ದು, ಇದರ ನಿರ್ಮಾಪಕರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಗುಡುಗಿದೆ.
ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡ ಡೊನಾಲ್ಡ್ ಟ್ರಂಪ್ ಅವರ ಜೀವನಚರಿತ್ರೆ 'ದಿ ಅಪ್ರೆಂಟಿಸ್', ನ್ಯೂಯಾರ್ಕ್‌ನಲ್ಲಿ 1970 ಮತ್ತು 1980ರ ಸಮಯದಲ್ಲಿ ಮಹತ್ವಾಕಾಂಕ್ಷೆಯ ಯುವ ಪ್ರಾಪರ್ಟಿ ಡೆವಲಪರ್ ಆಗಿ ಉದ್ಯೋಗ ಆರಂಭಿಸಿದ ಡೊನಾಲ್ಡ್ ಮೂಲವನ್ನು ಗುರುತಿಸುತ್ತದೆ.
ಪಾಸಿಟಿವ್ ವೈಬ್ಸ್ ಬೇಕಾ? ಡ್ರೈವ್ ಮಾಡುತ್ತಾ ಕಾರಲ್ಲೇ ಮೆಹಫಿಲ್ ನಡೆಸಿದ ಅಪ್ಪ ಮಗಳ ಈ ವಿಡಿಯೋ ನೋಡಿ
ಪತ್ನಿ ಮೇಲೆ ಅತ್ಯಾಚಾರ
ಚಿತ್ರದಲ್ಲಿ ಅತ್ಯಂತ ವಿವಾದಾತ್ಮಕ ದೃಶ್ಯವೆಂದರೆ ಟ್ರಂಪ್ ತನ್ನ ಮೊದಲ ಪತ್ನಿ ಇವಾನಾ ಮೇಲೆ ಅತ್ಯಾಚಾರವೆಸಗಿದ್ದು. ನಿಜ ಜೀವನದಲ್ಲಿ, ಇವಾನಾ ವಿಚ್ಛೇದನ ಪ್ರಕ್ರಿಯೆಯಲ್ಲಿಈ ಆರೋಪ ಮಾಡಿದ್ದರು. ಆದರೆ ನಂತರ ಆರೋಪವನ್ನು ರದ್ದುಗೊಳಿಸಿದರು. ಇವಾನಾ 2022ರಲ್ಲಿ ನಿಧನರಾದರು.
'ಈ ನಿರ್ದಿಷ್ಟ ವಿಷಯವು ಬಹಳ ಜನರಿಗೆ ತಿಳಿದಿದೆ. ಈ ಘಟನೆಯನ್ನು ಇವಾನಾ ಟ್ರಂಪ್ ಪ್ರಮಾಣ ವಚನದಲ್ಲಿ ಹೇಳಿದ್ದಾರೆ,' ಎಂದು ಚಲನಚಿತ್ರ ನಿರ್ಮಾಪಕ ಅಲಿ ಅಬ್ಬಾಸಿ ಹೇಳಿದ್ದಾರೆ.
ಈ ದೃಶ್ಯವನ್ನು ಏಕೆ ಸೇರಿಸಲಾಗಿದೆ ಎಂದು ಕೇಳಿದಾಗ, ಅಬ್ಬಾಸಿಯು ಈ ಚಲನಚಿತ್ರವು 'ಟ್ರಂಪ್ ತನ್ನನ್ನು ವ್ಯಾಖ್ಯಾನಿಸುವ ಮತ್ತು ಅವರನ್ನು ಮನುಷ್ಯನಂತೆ ಹಿಡಿತದಲ್ಲಿಟ್ಟುಕೊಳ್ಳುವ ಆ ಮಾನವ ಸಂಬಂಧಗಳಿಂದ ಹೇಗೆ ದೂರವಾಗುತ್ತಾರೆ ಎಂಬುದರ ಕುರಿತು ಹೇಳುತ್ತದೆ. ನಿಸ್ಸಂಶಯವಾಗಿ ಇವಾನಾ ಟ್ರಂಪ್ ಸಂಬಂಧವು ತುಂಬಾ ಮುಖ್ಯವಾಗಿದೆ. ಏಕೆಂದರೆ ಇವಾನಾ ಅವರಿಗೆ ತುಂಬಾ ಹತ್ತಿರವಿದ್ದ ವ್ಯಕ್ತಿ' ಎಂದಿದ್ದಾರೆ.
ಇತರ ದೃಶ್ಯಗಳು ಟ್ರಂಪ್ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ(ಎರೆಕ್ಟೈಲ್ ಡಿಸ್‌ಫಂಕ್ಷನ್) ಬಳಲುತ್ತಿದ್ದಾರೆ ಮತ್ತು ಕೂದಲು ಉದುರುವಿಕೆಗಾಗಿ ಲಿಪೊಸಕ್ಷನ್ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತೋರಿಸುತ್ತವೆ.
ಮಾರ್ವೆಲ್ ಸೂಪರ್ ಹೀರೋ ಚಿತ್ರಗಳಿಂದ ಪ್ರಸಿದ್ಧರಾದ ಸೆಬಾಸ್ಟಿಯನ್ ಸ್ಟಾನ್ ಅವರು ಟ್ರಂಪ್ ಆಗಿ ನಟಿಸಿದ್ದಾರೆ.
ಗರ್ಭಿಣಿಯಾಗ್ಬೇಕಂತೆ ನಟಿ ಕಿಯಾರಾ; ಕಾರಣ ಮಾತ್ರ ವಿಚಿತ್ರ!
ಮೊಕದ್ದಮೆ
ಡೊನಾಲ್ಡ್ ಟ್ರಂಪ್ ಅವರ ತಂಡವು ನಿರ್ಮಾಪಕರ ವಿರುದ್ಧ ಮೊಕದ್ದಮೆ ಹೂಡಲು ಪ್ರತಿಜ್ಞೆ ಮಾಡಿದೆ. ಚಿತ್ರವನ್ನು ಒಂದು 'ಕಸ', 'ಕಾಲ್ಪನಿಕ' ಮತ್ತು 'ಶುದ್ಧ ದುರುದ್ದೇಶಪೂರಿತ' ಎಂದು ಕರೆದಿದೆ.
ಟ್ರಂಪ್ ಹಗರಣ
ಟ್ರಂಪ್ ಮ್ಯಾನ್‌ಹ್ಯಾಟನ್‌ನಲ್ಲಿ ಅಶ್ಲೀಲ ತಾರೆಯೊಬ್ಬರನ್ನು ಒಳಗೊಂಡ ಹಗರಣದ ವಿಚಾರಣೆಯಲ್ಲಿರುವಾಗಲೇ 'ದಿ ಅಪ್ರೆಂಟಿಸ್' ಪ್ರಥಮ ಪ್ರದರ್ಶನಗೊಂಡಿತು. ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗಲೇ ಈ ಚಿತ್ರ ಬಿಡುಗಡೆಯಾಗಿದೆ.