Asianet Suvarna News Asianet Suvarna News

ಕನ್ನಡದ ನಂ.1 ಧಾರಾವಾಹಿ ಯಾವುದು? ಟಾಪ್ 5 ಸೀರಿಯಲ್‌ಗಳ ಲಿಸ್ಟ್ ಇಲ್ಲಿದೆ

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಟಾಪ್ 5 ಸ್ಥಾನದಲ್ಲಿರುವ ಸೀರಿಯಲ್‌ಗಳ ಲಿಸ್ಟ್ ಇಲ್ಲಿದೆ 
 

Kannada Daily soap Gattimela tops the TRP chart sgk
Author
First Published Jan 20, 2023, 5:40 PM IST

ಕನ್ನಡ ಕಿರುತೆರೆ ಲೋಕದಲ್ಲಿ ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಪ್ರತಿಯೊಂದು ಧಾರಾವಾಹಿಗಳು  ಪ್ರೇಕ್ಷಕರನ್ನು ಸೆಳೆಯುತ್ತಾ ಮುನ್ನುಗ್ಗುತ್ತಿವೆ.ಕೆಲವು ಸೀರಿಯಲ್‌ಗಳ ನಡುವೆ ಭಾರಿ ಪೈಪೋಟಿ ಏರ್ಪಪ್ಪಟ್ಟಿದೆ. ಆದರೆ ಇನ್ನು ಕೆಲವು ಧಾರಾವಾಹಿಗಳು ಸ್ಪರ್ಧೆ ಒಡ್ಡೆಲು ಸಾಧ್ಯವಾಗದೆ, ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿ ಪ್ರಸಾರವನ್ನು ಅರ್ಧಕ್ಕೆ ನಿಲ್ಲಿಸಿದ ಉದಾಹರಣೆಗಳು ಇವೆ. ಇದೀಗ ಕನ್ನಡ ಕಿರುತೆರೆಯಲ್ಲಿ ನಂಬರ್ 1 ಧಾರಾವಾಹಿಯಾಗಿ ಹೊರಹೊಮ್ಮಿದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಸೀರಿಯಲ್. 

ಇತ್ತೀಚಿನ TRP ಲಿಸ್ಟ್ ಔಟ್ ಆಗಿದ್ದು ಗಟ್ಟಿಮೇಳ ಧಾರಾವಾಹಿ ನಂಬರ್ 1 ಸ್ಥಾನದಲ್ಲಿದೆ. ಅನೇಕ ಸಮಯದ ನಂತರ ಗಟ್ಟಿಮೇಳ ಧಾರಾವಾಹಿ ಟಿಆರ್‌ಪಿ ಲಿಸ್ಟ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನ ಗಿಟ್ಟಿಸಿಕೊಂಡಿರುವುದು ಧಾರಾವಾಹಿ ತಂಡಕ್ಕೆ ಖುಷಿ ತಂದಿದೆ. ಗಟ್ಟಿಮೇಳ ಕನ್ನಡ ಪ್ರೇಕ್ಷಕರು ಅತಿ ಹೆಚ್ಚು ವೀಕ್ಷಿಸಿದ ಟಿವಿ ಧಾರಾವಾಹಿಯಾಗಿ ಹೊರಹೊಮ್ಮಿದೆ. ಗಟ್ಟಿಮೇಳಾ ಧಾರಾವಾಹಿಯಲ್ಲಿ ನಾಯಕ ಹಾಗೂ ಪ್ರಮುಖ ಪಾತ್ರದಲ್ಲಿ ರಕ್ಷ್ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ನಟನೆ ಜೊತೆಗೆ ರಕ್ಷ್ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 

ಗಟ್ಟಿಮೇಳ ಧಾರಾವಾಹಿಯಲ್ಲಿ ರಕ್ಷ್, ವೇದಾಂತ್ ವಸಿಷ್ಠ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ಉದ್ಯಮಿ ರಕ್ಷ್ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇದೀಗ ಮತ್ತೆ ನಂಬರ್ 1 ಸ್ಥಾನಕ್ಕೆ ಬಂದ ಬಗ್ಗೆ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಸ್ತ್ ಫೋಟೋ ಶೇರ್ ಮಾಡಿ 'ಮತ್ತೆ ನಮ್ಮನ್ನು ನಂಬರ್ 1 ಮಾಡಿದ್ದಕ್ಕೆ ಧನ್ಯವಾದಗಳು ಪ್ರೀತಿಯ ಜನತೆಗೆ'  ಎಂದು ಹೇಳಿದ್ದಾರೆ. 

ಯಾಕೆ ಎರಡನೇ ಮದುವೆ ಬೇಡ? ಜೊತೆ ಜೊತೆಯಲಿ ಪುಷ್ಪ ಸಿರಿಮನೆಗೆ ರಿಯಲ್‌ ಮಗಳ ನೇರ ಪ್ರಶ್ನೆ!

ರಕ್ಷ್ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸೂಪರ್ ಎಂದು ಹೇಳುತ್ತಿದ್ದಾರೆ. ಅನೇಕರುುನೀವು ನನ್ನ ನೆಚ್ಚಿನ ನಟ ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ. 

ಇನ್ನು ವಿಶೇಷ ಎಂದರೆ ಗಟ್ಟಿಮೇಳ ಬಳಿಕ ಜೀ ವಾಹಿನಿಯ ಮತ್ತೊಂದು ಧಾರಾವಾಹಿ 2ನೇ ಸ್ಥಾನದಲ್ಲಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ 2ನೇ ಸ್ಥಾನ ಅಲಂಕರಿಸಿದೆ. ಅನೇಕ ಸಮಯದಿಂದ ಟಿಅರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಉತ್ತಮ ಸ್ಥಾನದಲ್ಲೇ ಇತ್ತು. ಇದೀಗ ಗಟ್ಟಿಮೇಳ ಕೂಡ ಸೇರಿಕೊಂಡಿದೆ.  ಪುಟ್ಟಕ್ಕನ ಮಕ್ಕಳು ನಂತರ ಪಾರು, ಹಿಟ್ಲರ್ ಕಲ್ಯಾಣ ಮತ್ತು ಸತ್ಯ ಧಾರಾವಾಹಿಗಳು ಇವೆ. ಅತೀ ಹೆಚ್ಚು ವೀಕ್ಷಿಸಿದ ಧಾರಾವಾಹಿಗಳಲ್ಲಿ ಟಾಪ್ 5 ಧಾರಾವಾಹಿಗಳು ಜೀವಾಹಿನಿಯ ಧಾರಾವಾಹಿಗಳು. 

ಅವತ್ತು ನಾನು ಈ ಸ್ಟೇಜಲ್ಲಿದ್ದೆ, ಅಮ್ಮ ಐಸಿಯುನಲ್ಲಿದ್ರು: ರಶ್ಮಿ ಪ್ರಭಾಕರ್‌ ಕಣ್ಣೀರು

ಗಟ್ಟಿಮೇಳ ಧಾರಾವಾಹಿ ವೇದಂತ್ ಮತ್ತು ಅಮೂಲ್ಯಾ ನಡುವಿನ ಪ್ರೀತಿ, ಮುನಿಸಿನ ಕಥೆಯಾಗಿದೆ. ಸದ್ಯ ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಂತ್ ಮತ್ತು ಸಹೋದರರು ತಾಯಿನನ್ನು ಹುಡುಕುತ್ತಿದ್ದಾರೆ. ನಿಜವಾದ ತಾಯಿ ಯಾರೆಂದು ತಲೆಕೆಡಿಸಿಕೊಂಡಿದ್ದಾರೆ. ಪ್ರೇಕ್ಷಕರು ಕುತೂಹಲದಿಂದ ಧಾರಾವಾಹಿ ವೀಕ್ಷಿಸುತ್ತಿದ್ದಾರೆ.  

Follow Us:
Download App:
  • android
  • ios