ಅಮ್ಮನಿಗೆ ಬಿಗ್ ಸರ್ಪ್ರೈಸ್‌ ಕೊಟ್ಟ ಮಗಳು. ಪುಷ್ಪ ಸಿರಿಮನೆ ರಿಯಲ್ ಲೈಫ್‌ ಮಗಳು ಕೇಳಿದ ಪ್ರಶ್ನೆಗಳಿದು..

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿರುವ ಅಪೂರ್ವ ಅವರು ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ವೇಳೆ ಅಮ್ಮ-ಮಗಳ ರೌಂಡ್ ನಡೆಯುತ್ತಿದ್ದು ಅಪೂರ್ವ ಅವರಿಗೆ ಮಗಳ ಬಿಗ್ ಸರ್ಪ್ರೈಸ್‌ ಕೊಟ್ಟಿದ್ದಾರೆ. ಮಗಳ ಗಿಫ್ಟ್‌ ನೋಡಿ ಅಪೂರ್ವ ಖುಷಿಯಾಗಿದ್ದಾರೆ. 

ಮಗಳು: ನನ್ನ ಮೊದಲ ಪ್ರಶ್ನೆ ಇದು..ಯಾವತ್ತಾದ್ದರೂ ಅನಿಸಿದ್ಯಾ ನನ್ನ ಮಗಳು ಇಲ್ಲದಿದ್ದರೆ ನಾನು ಖುಷಿಯಾಗಿರುತ್ತಿದ್ದೆ ಅಥವಾ ಗಂಡು ಮಗು ಆಗಿದ್ದರೆ ಇನ್ನೂ ಖುಷಿಯಾಗಿರುತ್ತಿದ್ದೆ ಕಷ್ಟ ಪಡುತ್ತಿರಲಿಲ್ಲ ಅನಿಸಿದ್ಯಾ?

ಅಪೂರ್ವ: 100ರಲ್ಲಿ 1% ನನಗೆ ಈ ರೀತಿ ಅನಿಸಿಲ್ಲ. ಎಷ್ಟೋ ದೇವರಲ್ಲಿ ಹರಿಕೆ ಕಟ್ಟಿಕೊಂಡು ಮೊದಲು ಹೆಣ್ಣು ಮಗು ಆಗಬೇಕು ಎಂದು ಹುಟ್ಟಿರುವ ಮಗು ನೀನು. 

ಮಗಳು: ಮತ್ತೆ ಮದುವೆ ಆಗಬೇಕು ಎಂದು ಯೋಚನೆ ಕೂಡ ಮಾಡಿಲ್ಲ ಯಾಕೆ?

ಅಪೂರ್ವ: ಮದುವೆ ಅಂದ್ರೆ ಏನು ಅದರ ಮಹತ್ವ ಎಲ್ಲ ಅರ್ಥ ಆಗೋಕು ಮುಂಚೆ ಮದುವೆ ಆಗಿದ್ದು ಎಷ್ಟೊಂದು ಸಮಸ್ಯೆ ನೋಡ್ಬಿಟ್ಟು ಮದುವೆ ಆಗಬೇಕು ಅನಿಸಲಿಲ್ಲ. ಕೈಯಲ್ಲಿ ಒಂದು ಹೆಣ್ಣು ಮಗುವಿಗೆ ಬರುವ ಜನರ ಮೆಂಟಾಲಿಟಿ ಹೇಗೆ ಇರುತ್ತೆ ..ಏನೇ ಆಗಲಿ ಫಸ್ಟ್‌ ತಪ್ಪು ಎಂದು ಹೇಳುವುದು ಹೆಣ್ಣು ಮಕ್ಕಳ ಮೇಲೆ ಹೀಗಾಗಿ ಯೋಚನೆ ಮಾಡಿಲ್ಲ ಮಾಡುವ ಯೋಚನೆ ಮಾಡಲ್ಲ. ಮದ್ವೆ ಅನ್ನೋದು ಒಂದು ಜವಾಬ್ದಾರಿ ರೀತಿ ಬಂದವರನ್ನು ನಾವು ಚೆನ್ನಾಗಿ ನೋಡಿಕೊಂಡಿಲ್ಲ ಅಂದ್ರೆ ಹೇಗೆ? 

ಮಗಳು: ಯಾವತ್ತಾದರೂ ಆಕ್ಟಿಂಗ್ ನಿಲ್ಲಿಸಬೇಕು ಅನಿಸಿದ್ಯಾ

ಅಪೂರ್ವ: ನೋ ವೇ Chance ಹೇ ಇಲ್ಲ..

ಮಗಳು: ಎಲ್ಲ ಕಲಾವಿದರಿಗೂ ಒಂದು ಆಸೆ ಇರುತ್ತೆ. ಎಲ್ಲರೂ ನನ್ನನ್ನು ಗುರುತಿಸಬೇಕು ಅನ್ನೋದು ನಿನಗೆ ಅದು ಹಾಗಿದೆ. ಮುಂದೆ ನಿಮ್ಮ ಕನಸು ಏನು?

ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟಿ ಅಪೂರ್ವ; ಕರಾಳ ಸತ್ಯ ಕೇಳಿ ಎಲ್ಲರೂ ಶಾಕ್...

ಅಪೂರ್ವ: ಗುರುತಿಸಬೇಕು ಎಂದು ನನ್ನ ಮೈಂಡ್‌ನಲ್ಲಿ ಇರಲಿಲ್ಲ. ಆರ್ಟಿಸ್ಟ್‌ ಆಗಬೇಕು ಅನ್ನೋ ಆಸೆ ಅಷ್ಟೇ ನನಗೆ ಇತ್ತು. ಕಲಾವಿದೆ ಆಗಿ 30-35 ವರ್ಷ ಆಯ್ತು. ಪ್ರತಿಯೊಂದು ಸಲವೂ ವಿಭಿನ್ನ ಪಾತ್ರಗಳನ್ನು ನಾನು ಆಯ್ಕೆ ಮಾಡಿರುವೆ . ಜೊತೆ ಜೊತೆಯಲಿ ಧಾರಾವಾಹಿ ಬರುವವರೆಗೂ ಜನರು ನನ್ನನ್ನು ಗುರುತಿಸುವುದು ಕಡಿಮೆನೇ ಆಗಿತ್ತು. ನಾನು ಅಲ್ಲದ ವ್ಯಕ್ತಿತ್ವನ್ನು ತೆರೆ ಮೇಲೆ ತೋರಿಸುತ್ತಿದ್ದರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾನು ನಾನಾಗಿರುವುದಕ್ಕೆ ಜನರಿಗೆ ಹತ್ತಿರವಾಗಿರುವುದು. ಮುಂದಕ್ಕೂ ಪಾತ್ರಗಳು ವಿಭಿನ್ನವಾಗಿರಬೇಕು ಎಲ್ಲಾ ಪಾತ್ರಗಳನ್ನು ಇಷ್ಟ ಪಡಬೇಕು. 

ಈ ಮಾತುಕಥೆ ನಡೆದ ಮೇಲೆ ಅಪೂರ್ವ ಅವರಿಗೆ ಮೂರ್ನಾಲ್ಕು ರೀತಿಯಲ್ಲಿ ಗಿಫ್ಟ್‌ ಕೊಡುವ ಮೂಲಕ ಮಗಳು ಸರ್ಪ್ರೈಸ್ ಮಾಡುತ್ತಾರೆ. ಮೊದಲ ಗಿಫ್ಟ್‌ನಲ್ಲಿ ಕನ್ನಡಕವನ್ನು ನೀಡುತ್ತಾರೆ 'ನಾಲ್ಕೈದು ವರ್ಷಗಳಿಂದ ಒಂದೇ ಕನ್ನಡಕ ಬಳಸುತ್ತಿದ್ದಾರೆ. ಅವರಿಗೆ ಹೊಸ ಕನ್ನಡ ತೆಗೆದುಕೊಳ್ಳಲು ಸಮಯವಿಲ್ಲ' ಎಂದು ಮಗಳು ಹೇಳುತ್ತಾರೆ. ಎರಡನೇ ಗಿಫ್ಟ್‌ನಲ್ಲಿ ಚಿನ್ನದ ಸರ ಕೊಡುತ್ತಾರೆ. ಗಾಬರಿಗೊಂಡು ಅಪೂರ್ವ ಇದು ಚಿನ್ನವೇ? ಯಾಕೆ ಕೊಟ್ಟಿರುವೆ ಎಂದು ಪ್ರಶ್ನೆ ಮಾಡುತ್ತಾರೆ. ತಾಳಿ ಚೈನ್ ಹಾಕಿಕೊಳ್ಳಬೇಕು ಅನ್ನೋ ಆಸೆ ತಾಯಿಗೆ ತುಂಬಾನೇ ಇದೆ. ಕಾರು ತೆಗೆದುಕೊಳ್ಳಬೇಕು ಅನ್ನೋ ಆಸೆಯಲ್ಲಿ ಕೂಡಿಟ್ಟ ಹಣವಿದು. ಖುಷಿ ಅಯ್ತಾ ಅಮ್ಮ' ಎಂದು ಪ್ರಶ್ನೆ ಮಾಡುತ್ತಾರೆ. 'ನನಗೆ ತುಂಬಾ ಖುಷಿಯಾಗಿದೆ ಕಷ್ಟ ಪಟ್ಟು ಇಷ್ಟೊಂದು ಹಣ ಕೂಡಿ ಇಟ್ಟಿದ್ದೆ' ಎಂದು ಅಪೂರ್ವ ಹೇಳುತ್ತಾರೆ.