Asianet Suvarna News Asianet Suvarna News

ಕನ್ನಡ ಚಿತ್ರರಂಗ ಏನು ಅಂತ ಇಡೀ ಜಗತ್ತಿಗೆ ಗೊತ್ತಾಗಿದೆ; ತೆಲುಗು ನಿರ್ದೇಶಕನ ಮಾತಿಗೆ ಶಿವಣ್ಣ ತಿರುಗೇಟು

ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ನಿರ್ದೇಶಕ ಗೀತಕೃಷ್ಣ ಮಾತಿಗೆ ಶಿವರಾಜ್ ಕುಮಾರ್ ತಿರುಗೇಟು ನೀಡಿದ್ದಾರೆ. ಯಾರೋ ಏನೋ ಹೇಳಿದರು ಅಂತ ಕೇಳೋದು ಬೇಡ. ಕನ್ನಡ ಇಂಡಸ್ಟ್ರೀ ಏನು ಅಂತ ಜಗತ್ತಲ್ಲಿ ಪ್ರೂ ಆಗಿದೆ ಎಂದು ಶಿವಣ್ಣ ಹೇಳಿದ್ದಾರೆ.  

Kannada Actor Shivaraj Kumar reacts to telugu director Geethakrishna statement about Kannada indutry sgk
Author
Bengaluru, First Published May 26, 2022, 4:57 PM IST

ಎರಡು ದಿನಗಳ ಹಿಂದೆಯಷ್ಟೇ ಟಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಗೀತಕೃಷ್ಣ(Geethakrishna) ಸ್ಯಾಂಡಲ್ ವುಡ್(Sandalwood) ಬಗ್ಗೆ ಕೆಟ್ಟದಾಗಿ ಮಾತನಾಡಿ ವಿವಾದ ಸೃಷ್ಟಿ ಮಾಡಿಕೊಂಡಿದ್ದರು. ಕನ್ನಡದ ನಟಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಗೀತಾಕೃಷ್ಣ ಅವರನ್ನು ಕನ್ನಡಿಗರು ತರಾಟೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡಿ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಶಿರಸಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನಟ ಶಿವರಾಜ್ ಕುಮಾರ್(Shivaraj Kumar), ಯಾರೋ ಏನೋ ಹೇಳಿದರು ಅಂತ ಕೇಳೋದು ಬೇಡ. ಕನ್ನಡ ಇಂಡಸ್ಟ್ರೀ ಏನು ಅಂತ ಜಗತ್ತಲ್ಲಿ ಪ್ರೂ ಆಗಿದೆ ಎಂದು ತಿರುಗೇಟು ನೀಡಿದ್ದಾರೆ.

'ಕನ್ನಡ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಿದೆ. ಕೆಜಿಎಪ್ 2 ನಿಂದ ಅದು ಫ್ರೂವ್ ಆಗಿದೆ. ಯಾರೋ ಏನು ಹೇಳಿದರು ಅಂದರೆ ಈ ಕಿವಿಯಲ್ಲಿ ಕೇಳಬೇಕು, ಈ ಕಿವಿಯಲ್ಲಿ ಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನು ತೋರಿಸುತ್ತೆ. ಇಂಥವರ ಬಗ್ಗೆ ಪ್ರತಿಕ್ರಿಯೆ ಕೊಟ್ಟಷ್ಟು ಅವರಿಗೆ ಪ್ರಯೋಜನ ಜಾಸ್ತಿ ಆಗುತ್ತೆ. ನಮ್ಮ ಚಿತ್ರರಂಗ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು. ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರೆಗೂ ಎಲ್ಲಾ ಕಲಾವಿದರು ಇಂಡಸ್ಟ್ರಿಯನ್ನು ದೊಡ್ಡ ಮಟ್ಟಕ್ಕೆ ಬೆಳಿಸಿದ್ದಾರೆ. ಇಂಥವರ ಕೀಳು ಮಾತಿಗೆ ಕಿವಿ ಕೊಡದೆ, ಅವರು ಯಾರು ಅಂತ ನೆಗ್ಲೆಟ್ ಮಾಡಬೇಕು'.

ಕನ್ನಡ ಚಿತ್ರರಂಗ ಅಸಹ್ಯ, ಅವಕಾಶ ಬೇಕೆಂದು ಮಂಚ ಏರುವುದು ಕಾಮನ್: ತೆಲುಗು ನಿರ್ದೇಶಕ ಗೀತಾ ಕೃಷ್ಣ

ಇನ್ನು ಇದೇ ಸಮಯದಲ್ಲಿ ತನ್ನ ಮುಂದಿನ ಸಿನಿಮಾದ ಬಗ್ಗೆಯೂ ಮತನಾಡಿದ್ದಾರೆ. 'ನನ್ನ ಮುಂದಿನ ಸಿನಿಮಾ ಬೈರಾಗಿ. ಇದು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಇದು ಭಾವನೆಗಳ ಕಥೆ. ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಅರ್ಥ ಇದೆ, ನನ್ನ ಪಾಲಿಗೆ ಬಂದ ಸಿನಿಮಾಗಳನ್ನು ಮಾಡುತ್ತಿದ್ದೇನೆ' ಎಂದು ಶಿವಣ್ಣ ಹೇಳಿದ್ದಾರೆ.

ನಿರ್ದೇಶಕ ಗೀತಕೃಷ್ಣ ಹೇಳಿದ್ದೇನು?

ನಿರ್ದೇಶಕ ಗೀತಕೃಷ್ಣ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಕನ್ನಡದಲ್ಲಿ ಸಿನಿಮಾ ಮಾಡಲು ಹೋಗಿದ್ದೆ. ಅಲ್ಲಿನ ಖ್ಯಾತ ನಟಿಯೊಬ್ಬಳು ನನ್ನನ್ನೇ ಮಂಚಕ್ಕೆ ಕರೆದುಬಿಟ್ಟಳು. ಲೈಂಗಿಕ ಕಿರುಕುಳ ಹೆಣ್ಣುಮಕ್ಕಳ ಮೇಲೆ ಆಗುತ್ತದೆ ಎಂದು ಕೇಳಿದ್ದೀರಿ. ಕನ್ನಡದಲ್ಲಿ ಗಂಡು ಮಕ್ಕಳ ಮೇಲೂ ಹೀಗೆ ಆಗುತ್ತಿದೆ ಎಂದು ನಾನು ಸ್ವತಃ ಅನುಭವಿಸಿದೆ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು. ವಿವಾದ ದೊಡ್ಡದಾಗುತ್ತಿದ್ದಂತೆ ತಾನು ಹೀಗೆ ಹೇಳಿಲ್ಲ. ಕನ್ನಡ ಸಿನಿಮಾರಂಗವನ್ನು ಅವಹೇಳನ ಮಾಡಿಲ್ಲ ಎಂದು ಉಲ್ಟಾ ಹೊಡೆದಿದ್ದರು.

ಕನ್ನಡಿಗರ ತಾಕತ್ತು ಏನೆಂದು ಎಲ್ರಿಗೂ ಗೊತ್ತು: ಗೀತಾ ಕೃಷ್ಣಗೆ ಟಾಂಕ್‌ ಕೊಟ್ಟ ರಾಘವೇಂದ್ರ ರಾಜ್‌ಕುಮಾರ್

‘ನಾನು ಕನ್ನಡ ಸಿನಿಮಾ ರಂಗದ ಕುರಿತು ಅವಹೇಳನವಾಗುವಂತಹ ಯಾವುದೇ ಮಾತಗಳನ್ನು ಹೇಳಿಲ್ಲ. ಕನ್ನಡದ ನಟಿಯೊಬ್ಬರು ಮಂಚಕ್ಕೆ ಕರೆದಿದ್ದರು ಎಂದು ಹೇಳಿಲ್ಲ. ಸಿನಿಮಾ ರಂಗದಲ್ಲಿ ಕಾಮನ್ ಆಗಿ ಹೀಗೆ ನಡೆಯುತ್ತದೆ ಎಂದು ಹೇಳಿದ್ದೆ. ಅದನ್ನೇ ಇಷ್ಟೊಂದು ದೊಡ್ಡದು ಮಾಡಲಾಗುತ್ತಿದೆ. ನಾನು ಆ ರೀತಿಯಲ್ಲಿ ಹೇಳಿಯೇ ಇಲ್ಲ' ಎಂದು ಹೇಳಿದ್ದಾರೆ.

Follow Us:
Download App:
  • android
  • ios