Asianet Suvarna News Asianet Suvarna News

ಕನ್ನಡ ಚಿತ್ರರಂಗ ಅಸಹ್ಯ, ಅವಕಾಶ ಬೇಕೆಂದು ಮಂಚ ಏರುವುದು ಕಾಮನ್: ತೆಲುಗು ನಿರ್ದೇಶಕ ಗೀತಾ ಕೃಷ್ಣ

ಸೌತ್ ಚಿತ್ರರಂಗದಲ್ಲಿ ಶುರುವಾಯ್ತು ಕಾಸ್ಟಿಂಗ್ ಕೌಚ್. ತಮಿಳು ಮತ್ತು ಕನ್ನಡ ಚಿತ್ರರಂಗ ಅಸಹ್ಯ ಎಂದು ನಿರ್ದೇಶಕ ಗೀತಾ...

Telugu Director Geetha Krishna comments on casting couch in kannada film industry vcs
Author
Bangalore, First Published May 25, 2022, 10:39 AM IST

ತೆಲುಗು ಚಿತ್ರರಂಗದ (Tollywood) ಖ್ಯಾತ ನಿರ್ದೇಶಕ ಗೀತಾ ಕೃಷ್ಣ (Geetha Krishna) ಖಾಸಗಿ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ (Casting couch) ಬಗ್ಗೆ ಮಾತನಾಡಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ನಟಿಯಿಂದ ತಮಗಾದ ಕಾಸ್ಟಿಂಗ್ ಕೌಚ್‌ ಬಗ್ಗೆ ಸುಳಿವು ಕೊಟ್ಟಿದ್ದಾರೆ 

ಸಂಕೀರ್ತನ, ಕೋಕಿಲ, ಟೈಮ್, ಕಾಫಿ ಬಾರ್ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಗೀತಾ ಕೃಷ್ಣ 20 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹೇಗಿತ್ತು ಎಂದು ವಿವರಿಸಿದ್ದಾರೆ.  'ಕಾಸ್ಟಿಂಗ್ ವಿಚಾರದಲ್ಲಿ ತಮಿಳು ಚಿತ್ರರಂಗದವರು ತುಂಬಾನೇ ಅಸಹ್ಯ. ಕನ್ನಡದವರು ಇನ್ನೂ ಅಸಹ್ಯ. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಿಂದ. ಖ್ಯಾತ ನಟಿಯಿಂದ ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಅವಕಾಶ ಬೇಕು ಎಂದು ಮಂಚ ಏರುವುದು, ಕನ್ನಡದಲ್ಲಿ ಮಂಚ ಏರುವುದು ಕಾಮನ್ ಆಗಿಬಿಟ್ಟಿದೆ. ಹೀಗಾಗಿ ನಾನು 20 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಸಾಹವಾಸ ಬಿಟ್ಟೆ' ಎಂದು ಗೀತಾ ಕೃಷ್ಣ ಮಾತನಾಡುದ್ದಾರೆ. 

Telugu Director Geetha Krishna comments on casting couch in kannada film industry vcs

'ಸಿನಿಮಾಗಳಿಂದ ಆಫರ್ ಬೇಕೆಂದು ನಟಿಯರು ಮಂಚ ಏರುವುದು ಹೆಚ್ಚಾಗುತ್ತಿದೆ. ಇದೆಲ್ಲಾ ಆಫರ್‌ಗೋಸ್ಕರ. ಇದು ಬಿಡಿ ಸಂಗೀತ ನಿರ್ದೇಶಕರು ಕೂಡ ಗಾಯಕಿಯರ ಜೊತೆ ಮಲಗುತ್ತಿದ್ದಾರೆ. ಸಾಫ್ಟ್‌ವೇರ್ ಲೋಕದಲ್ಲಿಯೂ ಹೀಗೆ ನಡೆಯುತ್ತಿದೆ. ಕನ್ನಡವರಂತೂ ಇನ್ನೂ ಅಸಹ್ಯ ಕೊಳಕು ಜನರು. 90% ಗಂಡಸರು ಸುಂದರವಾದ ಹೆಣ್ಣು ನೋಡಿದರೆ ಸಾಕು ಆಕೆ ಜೊತೆ ಮಲಗಬೇಕು ಎಂದು ನಿರ್ಧಾರ ಮಾಡುತ್ತಾರೆ. ಅವರೆಲ್ಲಾ ಸಾಮಾನ್ಯ ಜನರಲ್ಲ ಇದೆಲ್ಲಾ ಟ್ರ್ಯಾಪ್. ಇದೆಲ್ಲಾ ಆದ ಮೇಲೆ ಹಣ ಕೊಡುವಂತೆ ತೊಂದರೆ ಕೊಡುತ್ತಾರೆ. ಅನೇಕ ಹುಡುಗಿಯರು ಈ ಟ್ರ್ಯಾಪ್‌ಗೆ ಬೀಳುವುದಕ್ಕೆ ಇಷ್ಟ ಪಡುವುದಿಲ್ಲ. ರೇಣು ದೇಸಾಯಿ ಅವರು ಪರ್ಫೆಕ್ಟ್‌ ಹುಡುಗಿ ಎಂದು ಹೇಳಿಕೊಳ್ಳುತ್ತಾರೆ ಆದರೆ ಪ್ರಭುದೇವ ನಟಿಸಿದ ಟೈಮ್ಸ್ ಸಿನಿಮಾ ಆಡಿಷನ್ ಸಮಯದಲ್ಲಿ 20 ಹುಡುಗಿಯರ ಫೋಟೋ ಕ್ಲಿಕ್ ಮಾಡಲಾಗಿತ್ತು. ಆದರೆ ನಾನು ಆಯ್ಕೆ ಮಾಡಿದ್ದು ರೇಣು ಫೋಟೋ ಮಾತ್ರ' ಎಂದು ಕಾಸ್ಟಿಂಗ್ ಕೌಚ್‌ ಬಗ್ಗೆ ಹೇಳಿಕೆ ಕೊಟ್ಟಿರುವ ಗೀತಾ ಕೃಷ್ಣ ಆರ್‌ಆರ್‌ಆರ್‌ (RRR) ಮತ್ತು ಕೆಜಿಎಫ್ (KGF) ಸಿನಿಮಾಗಳ ಬಗ್ಗೆನೂ ಮಾತನಾಡಿದ್ದಾರೆ.

Casting Couch ಸಂತ್ರಸ್ತರು ನಟಿಯರಷ್ಟೇ ಅಲ್ಲ, ಬಾಲಿವುಡ್‌ ನಟರೂ ಅನುಭವಿಸಿದ್ದಾರಂತೆ

'ಫೋಟೋ ಹಿಂದೆ ಇರುವ ನಂಬರ್‌ಗೆ ನಾನು ಕರೆ ಮಾಡಿ ರೇಣು ಜೊತೆ ಮಾತನಾಡಿದೆ. ಆಕೆಯನ್ನು ಹೋಟೆಲ್‌ಗೆ ಕರೆದ ತಕ್ಷಣ ನನ್ನ ಮೇಲೆ ಕೋಪ ಮಾಡಿಕೊಂಡು ನಿಮ್ಮ ಬಗ್ಗೆ ಜನರು ಮಾತನಾಡುತ್ತಿದ್ದ ರೀತಿ ನಿಜವೇ? ನೀವು ನನಗೆ ತಮಾಷೆ ಮಾಡುತ್ತಿದ್ದೀರಾ?ಇಲ್ಲಿ ಎಲ್ಲರೂ ಕೊಳಕು ಜನ ನನಗೆ ಈ ರೀತಿ ಕಮಿಟ್ಮೆಂಟ್ ಬೇಡ ನಾನು ಇದಕ್ಕೆ ಸಪೋರ್ಟ್ ಮಾಡುವುದಿಲ್ಲ ಎಂದು ರೇಣು ನನ್ನ ಮುಖಕ್ಕೆ ಕೇಳಿದ್ದಳು ಅದಿಕ್ಕೆ ನಾನು ತಕ್ಷಣವೇ ನೀನೇ ನನ್ನ ಸಿನಿಮಾ ನಾಯಕಿ ಆಯ್ಕೆ ಆಗಿರುವೆ ಎಂದು ಹೇಳಿದೆ ಅದರೆ ಈ ಮಾತುಕತೆ ಸಮಯದಲ್ಲಿ ರೇಣು ಹೇಳಿದ ಕಮಿಟ್ಮೆಂಟ್‌ ಪದ ಯಾವ ರೀತಿ ಸ್ವೀಕರಿಸಬೇಕು ಎಂದು ಅರ್ಥ ಆಗಿಲ್ಲ' ಎಂದು ಗೀತಾ ಗೊಂದಲ ಮಾತುಗಳನ್ನು ನಾಯಕಿ ಬಗ್ಗೆ ಹೇಳಿದ್ದಾರೆ. 

ಒಂಟಿಯಾಗಿ ಭೇಟಿಯಾಗಲು ಕರೆದ ನಟ, ನಿರಾಕರಿಸಿದ ಇಶಾ ಕೊಪ್ಪಿಕರ್ ಸಿನಿಮಾದಿಂದ ಔಟ್‌!

'ಆರ್‌ಆರ್‌ಆರ್‌ ಮತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾ ತಲುಪಿದ ರೀತಿ ನಮ್ಮ ಸಿನಿಮಾ ತಲುಪಬೇಕು ಎಂದರೆ ಸಿನಿಮಾ ಕಂಟೆಂಟ್‌ ಚೆನ್ನಾಗಿರಬೇಕು. ಸರ್ಕಾರು ವಾರಿ ಪಾಟು ಸಿನಿಮಾದಲ್ಲಿ ಮಹೇಶ್ ಬಾಬು ಹ್ಯಾಂಡ್‌ಸಮ್‌ ಆಗಿದ್ದರೂ ಕೂಡ ಕಂಟೆಂಟ್‌ ಚೆನ್ನಾಗಿಲ್ಲ. ಅದಿಕ್ಕೆ ಸಿನಿಮಾ ಓಡಿಲ್ಲ ಕಲೆಕ್ಷನ್ ಮಾಡಿಲ್ಲ. ಇನ್ನೂ ಆಚಾರ್ಯ ಸಿನಿಮಾ ಬಗ್ಗೆ ಕೇಳಬೇಡಿ ಅದರ ಕಂಟೆಂಟ್‌ ಕೂಡ ಚೆನ್ನಾಗಿಲ್ಲ. ಸಿನಿಮಾ ಮಾಡುವಾಗ ವಯಸ್ಸಿಗೆ ತಕ್ಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಆದರೆ ಮೆಗಾಸ್ಟಾರ್ ಚಿರಂಜೀವಿ ಅವರು ವಯಸ್ಸಿಗೆ ತಕ್ಕಂತಹ ಪಾತ್ರ ಮಾಡುತ್ತಿಲ್ಲ, ಆಯ್ಕೆ ಮಾಡಿಕೊಳ್ಳುವುದಿಲ್ಲ. ನಟ ವೆಂಕಟೇಶ್ ಅವರು ಸೂಕ್ತವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಸಿನಿ ವೀಕ್ಷಕರನ್ನು ಮನೋರಂಜಿಸುತ್ತಾರೆ' ಎಂದಿದ್ದಾರೆ ಗೀತಾ ಕೃಷ್ಣ.

Follow Us:
Download App:
  • android
  • ios