ಶಿವಸೇನಾ ಮುಖಂಡ ಸಂಜಯ್ ರಾವತ್‌ಗೆ ಬೆದರಿಕೆ ಕರೆಗಳನ್ನು ಮಾಡಿದ್ದಕ್ಕಾಗಿ ಗುರುವಾರ ಸಂಜೆ ಕಂಗನಾ ಫ್ಯಾನ್‌ನ್ನು ಬಂಧಿಸಲಾಗಿದೆ. ಶಿವಸೇನೆ ಮುಖಂಡ, ಸಂಸದ ಸಂಜಯ್ ರಾವತ್‌ಗೆ ಬೆದರಿಕೆ ಕರೆ ಮಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿಮಾನಿಯನ್ನು ದಕ್ಷಿಣ ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ.

ವ್ಯಕ್ತಿಯನ್ನು ಪಲಾಶ್ ಬೋಸ್ ಎಂದು ಗುರುತಿಸಲಾಗಿದ್ದು, ಈತ ಟಾಲಿಗುಂಜ್ ನಿವಾಸಿಯಾಗಿದ್ದಾನೆ. ಮುಂಬೈ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆತನನ್ನು ಇಂದು ಅಲಿಪುರ್ ಕೋರ್ಟ್‌ನಲ್ಲಿ ಹಾಜರುಪಡಿಸಲಿದ್ದಾರೆ ಎಂದು ಕೊಲ್ಕತ್ತಾ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

'ನನ್ನ ಮಗಳು ಸತ್ಯದ ಜೊತೆ', ಮಹಾರಾಷ್ಟ್ರ ಸರ್ಕಾರದ ನಡೆ ಖಂಡಿಸಿದ ಕಂಗನಾ ತಾಯಿ

ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಸಂಬಂಧ ಕಂಗನಾ ರಣಾವತ್ ಹಾಗೂ ಶಿವಸೇನಾ ಮುಖಂಡನ ನಡುವೆ ವಾಕ್ಸಮರ ನಡೆಯುತ್ತಲೇ ಇತ್ತು. ಈ ನಡುವೆ ಶಿವಸೇನಾ ಮುಖಂಡರಿಂದ ಬೆದರಿಕೆ ಬಂದಿರುವುದಾಗಿ ನಟಿ ಹೇಳಿದ್ದರು. ಮುಂಬೈಯನ್ನು ನಟಿ ಪಿಒಕೆಗೆ ಹೋಲಿಸಿದ್ದರು.

ಶಿವಸೇನಾ ಎಂಪಿಗೆ ಕರೆ ಮಾಡಿದ್ದ ವ್ಯಕ್ತಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದ. ರಾವತ್ ಮಾತ್ರವಲ್ಲದೆ, ಅಂಡರ್‌ ವಲ್ರ್ಡ್‌ ಸೇರಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರಿಗೂ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.