ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಾಯಿ ಆಶಾ ರಣಾವತ್ ಪುತ್ರಿಯ ಬೆಂಬಲಕ್ಕೆ ಬಂದಿದ್ದಾರೆ. ಬಿಎಂಸಿ ನಟಿಯ ಮುಂಬೈ ಬಂಗಲೆಯಲ್ಲಿ ಅಕ್ರಮ ಕಟ್ಟಡ ಎಂದು ಕೆಲವು ಭಾಗಗಳನ್ನು ಗುರುತಿಸಿ ಕೆಡವಿದ ನಂತರ ಬಿಎಂಸಿ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಮಹಾರಾಷ್ಟ್ರ ಸರ್ಕಾರ ಏನು ಮಾಡಿದೆಯೋ, ಅದು ಖಂಡನಾರ್ಹ. ನಾನು ಆ ಆಕ್ಷೇಪಾರ್ಹ ಪದಬಳಕೆಯನ್ನು ವಿರೋಧಿಸುತ್ತೇನೆ. ಭಾರತ ನನ್ನ ಮಗಳೊಂದಿಗಿದೆ, ಜನರ ಆಶಿರ್ವಾದ ಆಕೆ ಮೇಲಿದೆ. ನನಗೆ ಅವಳ ಬಗ್ಗೆ ಹೆಮ್ಮೆ ಇದೆ. ಅವಳೂ ಯಾವಾಗಲೂ ಸತ್ಯದ ಜೊತೆ ನಿಂತಿದ್ದಾಳೆ, ಇನ್ನೂ ಇರುತ್ತಾಳೆ ಎಂದಿದ್ದಾರೆ.

ಕಂಗನಾಳನ್ನು ಭಗತ್ ಸಿಂಗ್‌ಗೆ ಹೋಲಿಸಿ Hats Off ಎಂದು ಕೆಜಿಎಫ್‌ ವಿತರಕ

ಇತ್ತೀಚೆಗಷ್ಟೇ ನಟಿಗೆ ವೈ+ ಭದ್ರತೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ನಟಿಯ ತಾಯಿ, ಮಗಳಿಗೆ ಭದ್ರತೆ ಒದಗಿಸಿದ್ದಕ್ಕಾಗಿ ಅಮಿತ್ ಶಾ ಅವರಿಗೆ ಧನ್ಯವಾದ. ಆಕೆಗೆ ಭದ್ರತೆ ನೀಡಿರದಿದ್ದರೆ ಏನಾಗುತ್ತಿತ್ತು ಎಂದು ಊಹಿಸಬಹುದು ಎಂದಿದ್ದಾರೆ.