ಮುಸ್ಲಿಂ ಟೋಪಿ, ಕ್ರೈಸ್ತರ ಕ್ರಾಸ್​, ಹಿಂದೂಗಳ ತಿಲಕ... ಬೇಕಿತ್ತಾ ಕಂಗನಾಗೆ ಇದೆಲ್ಲಾ! ಈಗೇನಾಯ್ತು ನೋಡಿ...

ಇದಾಗಲೇ ಹಲವಾರು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಕಂಗನಾ ರಣಾವತ್​ ಅವರ ವಿರುದ್ಧ 40 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಇದಕ್ಕೆ ಕಾರಣ ಏನು? 
 

Kangana Ranaut Slapped With 40 Crore Defamation Notice For Sharing Rahul Gandhis Morphed Photo suc

ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ಕಂಗನಾ ರಣಾವತ್, ನಟಿಯಾದಾಗಿನಿಂದಲೂ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಬಂದಿದ್ದಾರೆ. ​ ಇದೀಗ ಮತ್ತೊಂದು ವಿವಾದ ಇವರ ಬೆನ್ನ ಹತ್ತಿದ್ದು, 40 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಬಿಜೆಪಿಯ ಸಂಸದೆಯಾಗಿರುವ  ಕಂಗನಾ, ಕಾಂಗ್ರೆಸ್​ ಮತ್ತು ಕಾಂಗ್ರೆಸ್​ ನಾಯಕರ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರೆ. ಮಾತನಾಡುವ ಭರದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಕುರಿತಂತೆ ಫೋಟೋ ಒಂದನ್ನು ಶೇರ್​ ಮಾಡಿಕೊಂಡು ಇದೀಗ ಫಜೀತಿಗೆ ಸಿಲುಕಿದ್ದಾರೆ. 

ಇತ್ತೀಚೆಗೆ, ಸದನದಲ್ಲಿ  ರಾಹುಲ್​ ಗಾಂಧಿಯವರು ಜಾತಿ ಗಣತಿ ಕುರಿತು ಮಾತನಾಡಿದ್ದರು. ಆಗ  ಕೇಂದ್ರ ಸಚಿವ ಅನುರಾಗ್​ ಸಿಂಗ್​ ಠಾಕೂರ್​ ಅವರು,  ಜಾತಿ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹಾಸ್ಯ ಮಾಡಿದರು. ಇದು ರಾಹುಲ್​ ಗಾಂಧಿ ಅವರನ್ನು ಕೆರಳಿಸಿತು.  ಅನುರಾಗ್ ಠಾಕೂರ್ ನನ್ನನ್ನು ಅವಮಾನಿಸಿದ್ದಾರೆ. ಅವರೇನೂ ನನಗೆ ಕ್ಷಮೆ ಕೋರುವುದು ಬೇಡ ಎನ್ನುತ್ತಲೇ ಜಾತಿಯ ಬಗ್ಗೆ ಮಾತನಾಡಿದರು. ಬಿಜೆಪಿ ಸರ್ಕಾರ ಹಿಂದುಳಿದವರನ್ನು, ಎಸ್​ಸಿ, ಎಸ್​ಟಿ ಸಮುದಾಯದವರನ್ನು ಕಡೆಗಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಈ ವಿಷಯ ಸದನದಲ್ಲಿ ಬಹು ಸುದೀರ್ಘ ಚರ್ಚೆಗೆ ಕಾರಣವಾಗಿತ್ತು. ಇದರ ನಡುವೆಯೇ ಸಂಸದೆ ಕಂಗನಾ ರಣಾವತ್​ ರಾಹುಲ್​ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದ್ದರು. 

ತಮ್ಮವರ ಮೇಲೆಯೇ ಈ ಪರಿ ಹಿಂಸಾಚಾರ, ಇನ್ನು... ಎನ್ನುತ್ತಲೇ ಸನಾತನ ಧರ್ಮದ ಮಹತ್ವ ತಿಳಿಸಿದ ಕಂಗನಾ

ಕಂಗನಾ ಅವರು ರಾಹುಲ್​ ಗಾಂಧಿಯವರನ್ನು ಉದ್ದೇಶಿಸಿ, ತಮ್ಮ ಸ್ವಂತ ಜಾತಿ ಯಾವುದು ಎಂದು ಗೊತ್ತಿಲ್ಲದವರು, ಜಾತಿಯ ಬಗ್ಗೆ ಮಾತನಾಡಲು ಬರುತ್ತಾರೆ ಎಂದು ಲೇವಡಿ ಮಾಡಿದ್ದರು. ಅವರಿಗೆ ತಮ್ಮ ಸ್ವಂತ ಜಾತಿ ಯಾವುದು ಎಂದೇ ಗೊತ್ತಿಲ್ಲ.  ತಾತ ಮುಸ್ಲಿಂ, ತಂದೆ ಪಾರ್ಸಿ, ತಾಯಿ  ಕ್ರಿಶ್ಚಿಯನ್.... ಈಗ ಜಾತಿಯ ಬಗ್ಗೆ ಮಾತನಾಡುತ್ತಾ ಇದ್ದಾರೆ. ಇದು ಹೇಗಿದೆ ಎಂದರೆ,  ಯಾರೋ ಪಾಸ್ತಾಗೆ ಕರಿಬೇವಿನ ಒಗ್ಗರಣೆ ಕೊಟ್ಟು ಖಿಚಡಿ ಮಾಡಲು ಪ್ರಯತ್ನಿಸಿದಂತೆ... ಹಾಗಾಯ್ತು ಎಂದಿದ್ದರು. ಸಾಲದು ಎನ್ನುವುದಕ್ಕೆ ರಾಹುಲ್​ ಅವರ ಫೋಟೋವನ್ನು ಮಾರ್ಫ್​ ಮಾಡಿ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಇದರಲ್ಲಿ ರಾಹುಲ್​  ಗಾಂಧಿ, ಮುಸ್ಲಿಂ ಟೋಪಿ, ಕ್ರೈಸ್ತರ ಕ್ರಾಸ್​, ಹಿಂದೂಗಳ ತಿಲಕ... ಧರಿಸಿದಂತೆ ಚಿತ್ರ ರಚನೆ ಮಾಡಿದ್ದಾರೆ. ಇದಕ್ಕಾಗಿ ಈಗ ಕಂಗನಾ ವಿರುದ್ಧ  40 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.  ಕಂಗನಾ ರಣಾವತ್​ ವಿರುದ್ಧ ಸುಪ್ರೀಂ ಕೋರ್ಟ್​ ವಕೀಲ ನರೇಂದ್ರ ಮಿಶ್ರಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಯಾವುದೇ ವ್ಯಕ್ತಿಯ ಪೋಟೋವನ್ನು ತಿರುಚಿ, ಅದನ್ನು ಆನ್​ಲೈನ್​ನಲ್ಲಿ ಶೇರ್​ ಮಾಡುವುದು ಮಾಹಿತಿ-ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಅಪರಾಧ ಆಗುತ್ತದೆ. ಇದರಿಂದ ರಾಹುಲ್ ಗಾಂಧಿ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದಂತೆ ಆಗಿದೆ ಎಂದು ನರೇಂದ್ರ ಮಿಶ್ರಾ ಅರ್ಜಿಯಲ್ಲಿ ತಿಳಿಸಿದ್ದಾರೆ.  ಸದ್ಯ ಕೋರ್ಟ್​  ಏನು ತೀರ್ಪು ನೀಡುತ್ತದೆಯೋ ನೋಡಬೇಕಿದೆ. 

ಸಂಸತ್ತಿಗೆ ಬರುವ ಮೊದಲು ರಾಹುಲ್​ ಗಾಂಧಿ ಪರೀಕ್ಷೆ ನಡೆಸಿ ಎಂದ ಕಂಗನಾ! ಏನಿದು ಹೊಸ ವರಸೆ?

 

Latest Videos
Follow Us:
Download App:
  • android
  • ios