ತುಂಡುಡುಗೆಯಲ್ಲಿ ಶಿವನ ದೇವಸ್ಥಾನಕ್ಕೆ ಬಂದ ಹೆಣ್ಮಕ್ಕಳಿಗೆ ನಟಿ ಕಂಗನಾ ಕ್ಲಾಸ್
ತುಂಡುಡುಗೆಯಲ್ಲಿ ಶಿವನ ದೇವಸ್ಥಾನಕ್ಕೆ ಬಂದ ಹೆಣ್ಮಕ್ಕಳಿಗೆ ನಟಿ ಕಂಗನಾ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ಕಂಗ್ರಾದಲ್ಲಿರುವ ಬೈಜನಾಥ ಶಿವನ ದೇವಸ್ಥಾನಕ್ಕೆ ತುಂಡುಡುಗೆ ಧರಿಸಿ ಭೇಟಿ ನೀಡಿದ ಹೆಣ್ಣು ಮಕ್ಕಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈಲ್ ಆಗಿದೆ. ಇಂತವರಿಗೆ ಪ್ರವೇಶ ನಿರಾಕರಿಸಬೇಕೆನ್ನುವ ವಿಚಾರ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಟಿ ಕಂಗನಾ ರಣವಾತ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ರೀತಿಯ ಸನ್ನಿವೇಶವನ್ನು ತಾವು ಕೂಡ ಎದುರಿಸಿರುವುದಾಗಿ ಕಂಗನಾ ಬಹಿರಂಗ ಪಡಿಸಿದ್ದಾರೆ. ರಾತ್ರಿ ಧರಿಸಿರುವ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ ಹೆಣ್ಣು ಮಕ್ಕಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಾರ್ಟ್ಸ್ ಧರಿಸಿದ ಕಾರಣಕ್ಕೆ ವ್ಯಾಟಿಕನ್ ಸಿಟಿಗೆ ಎಂಟ್ರಿ ಕೊಡದೆ ಅರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಬೈಜನಾಥ ದೇವಾಲಯದ ಆವರಣದಲ್ಲಿ ಇಬ್ಬರು ಹುಡುಗಿಯರು ನಿಂತಿರುವ ಫೋಟೋಗಳನ್ನು ನೆಟ್ಟಿಗರೊಬ್ಬರು ಶೇರ್ ಮಾಡಿದ್ದರು. ಫೋಟೋದಲ್ಲಿ ಒಬ್ಬಳು ಶಾರ್ಟ್ಸ್ ಮತ್ತು ಕ್ರಾಪ್ ಟಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಫೋಟೋ ಜೊತೆಗೆ 'ಇದು ಹಿಮಾಚಲ ಪ್ರದೇಶದ ಪ್ರಸಿದ್ಧ ಶಿವ ದೇವಾಲಯವಾದ ಬೈಜನಾಥ್‌ನ ದೃಶ್ಯವಾಗಿದೆ. ಅವರು ಪಬ್ ಅಥವಾ ನೈಟ್‌ಕ್ಲಬ್‌ಗೆ ಹೋದಂತೆ ಬೈಜನಾಥ ದೇವಾಲಯಕ್ಕೂ ಬಂದಿದ್ದಾರೆ. ಅಂತಹವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಬಾರದು. ನಾನು ಅದನ್ನು ಬಲವಾಗಿ ವಿರೋಧಿಸುತ್ತೇನೆ. ಇದನ್ನೆಲ್ಲ ನೋಡಿದಾಗ ನನ್ನ ಆಲೋಚನೆಯನ್ನು ಚಿಕ್ಕದು ಅಥವಾ ಕೆಟ್ಟದ್ದು ಎಂದು ಕರೆದರೆ ಅದು ಸಹ ಸ್ವೀಕಾರಾರ್ಹವಾಗಿದೆ' ಬರೆದು ಕೊಂಡಿದ್ದಾರೆ.
ಪೋಸ್ಟ್ ಶೇರ್ ಮಾಡಿರುವ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. 'ಇವು ಪಾಶ್ಚಿಮಾತ್ಯ ಬಟ್ಟೆಗಳು. ಇವುಗಳನ್ನು ಬಿಳಿಯರು ಕಂಡುಹಿಡಿದು ಪ್ರಚಾರ ಮಾಡಿದ್ದಾರೆ. ನಾನು ಒಮ್ಮೆ ವ್ಯಾಟಿಕನ್‌ನಲ್ಲಿ ಶಾರ್ಟ್ಸ್ ಮತ್ತು ಟಿ-ಶರ್ಟ್‌ಗಳನ್ನು ಧರಿಸಿದ್ದೆ. ಆಗ ನನ್ನನ್ನು ಆವರಣದಲ್ಲಿ ಅನುಮತಿಸಲಿಲ್ಲ. ನಾನು ನನ್ನ ಹೋಟೆಲ್‌ಗೆ ವಾಪಾಸ್ ಹೋಗಿ ಬಟ್ಟೆ ದಬಲಾಯಿಸಿ ಬಂದೆ. ನೈಟ್ ಡ್ರೆಸ್‌ಗಳನ್ನು ಕ್ಯಾಶುಯಲ್‌ಗಳಂತೆ ಧರಿಸುವ ಅವರು ಸೋಮಾರಿಗಳೇ ಹೊರತು ಬೇರೇನೂ ಅಲ್ಲ. ಅವರು ಬೇರೆ ಯಾವುದೇ ಉದ್ದೇಶವನ್ನು ಹೊಂದಲು ಸಮರ್ಥರಾಗಿದ್ದಾರೆಂದು ನಾನು ಭಾವಿಸುವುದಿಲ್ಲ ಆದರೆ ಅಂತಹ ಮೂರ್ಖರಿಗೆ ಕಠಿಣ ನಿಯಮಗಳು ಇರಬೇಕು' ಎಂದು ಹೇಳಿದ್ದಾರೆ.
Kangana Ranaut: ಕೇದಾರನಾಥಕ್ಕೆ ಕಂಗನಾ ಭೇಟಿ: ಜೊತೆಗೆ ಇದ್ದವರು ಗೊತ್ತಾ?
ಕಂಗನಾ ಹಿಮಾಚಲ ಪ್ರದೇಶದ ಮನಾಲಿ ಮೂಲದವರಾಗಿದ್ದು ಇನ್ಸ್ಟಾಗ್ರಾಮ್ನಲ್ಲಿ ಆಗಾಗ್ಗೆ ತಮ್ಮ ರಾಜ್ಯದ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾರೆ. ಅನೇಕ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕಂಗನಾ ಹರಿದ್ವಾರಕ್ಕೆ ತೆರಳಿದ್ದರು. ತನ್ನ ಪ್ರವಾಸದ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. ಗಂಗಾ ನದಿಯ ದಡದಲ್ಲಿ ಕುಳಿತ ಸುಂದರ ಶೇರ್ ಮಾಡಿದ್ದರು.
ತುಕ್ಡೇ ಗ್ಯಾಂಗ್ ವಿರುದ್ಧ ಮಾತಾಡಿ 30 ರಿಂದ 40 ಕೋಟಿ ಕಳ್ಕೊಂಡೆ ಎಂದ ಕಂಗನಾ
ಕಂಗನಾ ಸಿನಿಮಾ ವಿಚಾರಕ್ಕೆ ಬರುವುದಾದರೇ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿತ್ತು ವೈರಲ್ ಆಗಿತ್ತು. ಈ ಸಿನಿಮಾ ಜೊತೆಗೆ ತೇಜಸ್ ಸಿನಿಮಾದ ಶೂಟಿಂಗ್ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಭಾರತೀಯ ವಾಯುಪಡೆ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಎರಡು ಸಿನಿಮಾಗಳ ಜೊತೆಗೆ ಮತ್ತೆರಡು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ನಟನೆಯ ಜೊತೆಗೆ ಕಂಗನಾ ನಿರ್ಮಾಣ ಮತ್ತು ನಿರ್ದೇಶನದಲ್ಲೂ ನಿರತರಾಗಿದ್ದಾರೆ.