Kangana Ranaut: ಕೇದಾರನಾಥಕ್ಕೆ ಕಂಗನಾ ಭೇಟಿ: ಜೊತೆಗೆ ಇದ್ದವರು ಗೊತ್ತಾ?
ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ನಂತರ, ಈಗ ನಟಿ ಕಂಗನಾ ರಣಾವತ್ (Kangana Ranaut) ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ. ಕಂಗನಾ ತನ್ನ ಆಧ್ಯಾತ್ಮಿಕ ಪ್ರವಾಸದಿಂದ ಅನೇಕ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಕಂಗನಾರ ಕೇದಾರನಾಥ್ ಯಾತ್ರೆಯ ಫೋಟೋಗಳು ಇಲ್ಲಿವೆ.
Kangana Ranaut
ಅಕ್ಷಯ್ ಕುಮಾರ್ ನಂತರ, ಕಂಗನಾ ರಣಾವತ್ ಕೇದಾರನಾಥದ ಪವಿತ್ರ ಕ್ಷೇತ್ರಗಳಿಗೆ ಇತ್ತೀಚಿಗೆ ಭೇಟಿ ನೀಡಿದ ಟಾಪ್ ಸೆಲೆಬ್ರೆಟಿ ಆಗಿದ್ದಾರೆ.
Kangana Ranaut
RRR ಬರಹಗಾರ ವಿಜಯೇಂದ್ರ ಪ್ರಸಾದ್ ಜೊತೆಗೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಕೇದಾರನಾಥಕ್ಕೆ ಭೇಟಿ ನೀಡುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು.
Kangana Ranaut
'ಇಂದು ಪರಮ ಪೂಜ್ಯ ಕೈಲಾಶಾನಂದ್ ಜಿ ಮಹಾರಾಜ್ ಮತ್ತು ವಿಜಯೇಂದ್ರ ಪ್ರಸಾದ್ ಗಾರು ಅವರ ಜೊತೆ ಕೇದಾರನಾಥ ಜೀ ಅವರ ದರ್ಶನ ಮಾಡಿದೆ. ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡುವುದು ಒಂದು ಸೌಭಾಗ್ಯ ಹರ್ ಹರ್ ಮಹಾದೇವ್' ಎಂದು ಕಂಗನಾ ಬರೆದಿದ್ದಾರೆ.
Kangana Ranaut
ಅವರು ಶಾಸಕ ಉಮೇಶ್ ಕುಮಾರ್ ಮತ್ತು RRR ಚಿತ್ರದ ಬರಹಗಾರ ವಿಜಯೇಂದ್ರ ಪ್ರಸಾದ್ ಅವರೊಂದಿಗೆ ಬೇಟಿ ನೀಡಿದ್ದಾರೆ. ಇವರು ಕಂಗನಾ ಅವರ ಮುಂದಿನ ಸಿನಿಮಾ ಎಮರ್ಜೆನ್ಸಿಯ ರೈಟರ್ ಕೂಡ ಆಗಿದ್ದಾರೆ
Kangana Ranaut
ಬಿಗಿ ಭದ್ರತೆಯ ನಡುವೆ, ಕೈಲಾಶಾನಂದ ಮಹಾರಾಜ್ ಮತ್ತು ಶಾಸಕ ಉಮೇಶ್ ಕುಮಾರ್ ಅವರೊಂದಿಗೆ ಬರಹಗಾರ ವಿಜಯೇಂದ್ರ ಪ್ರಸಾದ್ ಅವರ ಜೊತೆಗಿದ್ದರು. ಅವರ ಹಣೆಯ ಮೇಲೆ ಶ್ರೀಗಂಧದ ಪ್ರಸಾದ ಕಾಣಬಹುದು
Kangana Ranaut
ದೇವಾಲಯದ ಭೇಟಿಗಾಗಿ, ನಟಿ ಬೂಟುಗಳ ಜೊತೆ ಸಾಂಪ್ರದಾಯಿಕ ನೀಲಿ ಬಟ್ಟೆಯನ್ನು ಮತ್ತು ಚಳಿಗಾಗಿ ಧೂಳಿನ ಗುಲಾಬಿ ಬಣ್ಣದ ಬಾಂಬರ್ ಜಾಕೆಟ್ ಅನ್ನು ಆರಿಸಿಕೊಂಡರು.
Kangana Ranaut
ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಕಂಗನಾ ರಣಾವತ್, 'ದೊಡ್ಡ ಸೌಭಾಗ್ಯದಿಂದ ಈ ದಿನ ನೋಡಲು ಸಿಕ್ಕಿತು' ಎಂದು ಹೇಳಿದ್ದಾರೆ.
Kangana Ranaut
ಟ್ವೀಟರ್‌ನಲ್ಲಿ ಅಲ್ಲದೆ ಕಂಗನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸಹ ಈ ಭೇಟಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
Kangana Ranaut
'ಇಂದು ಅಂತಿಮವಾಗಿ ಕೇದಾರನಾಥದಲ್ಲಿ ದರ್ಶನ ಮಾಡಿದೆ. ಅದೂ ಕೈಲಾಶಾನಂದ್ ಮಹಾರಾಜ್ ಮತ್ತು ವಿಜೇಂದ್ರ ಪ್ರಸಾದ್ ಜಿ ಕೆ ಅವರ ಜೊತೆಯಲ್ಲಿ. ಧನ್ಯವಾದಗಳು ಉಮೇಶ್ ಭಯ್ಯಾ' ಎಂದು ಕ್ಯಾಪ್ಷನ್ ನೀಡಿದ್ದಾರೆ