ನಟಿ ಕಂಗನಾ ಹೊಸ ರೆಸ್ಟೋರೆಂಟ್​ ಓಪನ್​: ವೆಜ್​-ನಾನ್​ ವೆಜ್​; ಎಷ್ಟೆಷ್ಟು ರೇಟ್? ಇಲ್ಲಿದೆ ಡಿಟೇಲ್ಸ್​...

ಪ್ರೇಮಿಗಳ ದಿನದಂದೇ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ ನಟಿ ಕಂಗನಾ ರಣಾವತ್​. ಇವರ ಕೆಫೆಯಲ್ಲಿ ಏನೇನು ಸಿಗತ್ತೆ ನೋಡಿ... 
 

Kangana Ranaut shares glimpses of her new restaurants inauguration in Manali  V  Day suc

 ಹಿಮಾಚಲ ಪ್ರದೇಶದ ಸಂಸದೆಯೂ ಆಗಿರುವ ನಟಿ ಕಂಗನಾ ರಣಾವತ್​ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ನಿನ್ನೆ ಪ್ರೇಮಿಗಳ ದಿನದಂದು  ಹಿಮಾಚಲ ಪ್ರದೇಶದ ಮನಾಲಿಯಲ್ಲಿ   'ದಿ ಮೌಂಟೇನ್ ಸ್ಟೋರಿ' ಎಂಬ ಕೆಫೆಯನ್ನು ಅವರು ಉದ್ಘಾಟಿಸಿದ್ದಾರೆ.  ಕೆಫೆಯ ಸುಂದರ ದೃಶ್ಯಗಳನ್ನು ಹಾಗೂ  ಒಳಾಂಗಣದ ಸೌಂದರ್ಯವನ್ನು, ತಾವು ಆಹಾರ ನೀಡುತ್ತಿರುವ ವಿಡಿಯೋಗಳನ್ನು ಹಿಮಾಚಲ ಪ್ರದೇಶದ ಕೆಲವು ಜನರ ಜೊತೆಗೂಡಿ ಇರುವ ದೃಶ್ಯಗಳನ್ನು ಕಂಗನಾ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕೆಫೆ ಆರಂಭಿಸುವುದು ನನ್ನ ಬಾಲ್ಯದ ಆಸೆಯಾಗಿತ್ತು. ಬಹು ವರ್ಷಗಳ ಕನಸು ಈಡೇರಿದೆ ಎಂದು ನಟಿ, ಸಂಸದೆ ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ.  

ಮೊದಲೇ ದಿನವೇ  ಪ್ರವಾಸಿಗರ ಗುಂಪು ಹರಿದು ಬಂತು.  ಯಾವುದೇ ರಿಬ್ಬನ್ ಕತ್ತರಿಸಲಾಗಿಲ್ಲ ಅಥವಾ ಯಾವುದೇ ಪೂಜೆಯನ್ನು ನಡೆಸಲಾಗಿಲ್ಲ. ಬದಲಿಗೆ ಪ್ರವಾಸಿಗರ ಆಗಮನದೊಂದಿಗೆ ಉದ್ಘಾಟನೆ ಮಾಡಿರುವುದು ವಿಶೇಷ.  ದಿ ಮೌಂಟೇನ್ ಸ್ಟೋರಿ ಕೆಫೆಯ ಮೊದಲ ದಿನ, ಕಂಗನಾ ಅವರು ತಮ್ಮ ಕುಟುಂಬದೊಂದಿಗೆ ಸಂಜೆ ಕೆಫೆಯನ್ನು ತಲುಪಿದರು.  ಕುಟುಂಬದ ಸದಸ್ಯರ ಜೊತೆಯಲ್ಲಿ  ಕೆಲವು ಗಂಟೆಗಳ ಕಾಲ ಕಳೆದರು ಮತ್ತು ಅಲ್ಲಿಗೆ ಬಂದ ಪ್ರವಾಸಿಗರನ್ನು ಸಹ ಭೇಟಿಯಾದರು.  ದಿ ಮೌಂಟೇನ್ ಸ್ಟೋರಿಯಲ್ಲಿ ಜನರು ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲಿದ್ದಾರೆ. ಇಲ್ಲಿ ಸಸ್ಯಾಹಾರಿ ಥಾಲಿಯ ಬೆಲೆ 780 ರೂ.ಗಳಾಗಿದ್ದರೆ, ಮಾಂಸಾಹಾರಿ ಥಾಲಿ 850 ರೂ.ಗಳಿಗೆ ಲಭ್ಯವಿರುತ್ತದೆ. ಮತ್ತು ಇಲ್ಲಿ ಚಹಾಕ್ಕೆ 30 ರೂಪಾಯಿ ನಿಗದಿದ ಮಾಡಲಾಗಿದೆ. ಈ ಕೆಫೆ ಮನಾಲಿಯಿಂದ 4 ಕಿ.ಮೀ ದೂರದಲ್ಲಿರುವ ಪರಿಣಿಯಲ್ಲಿದೆ.  ದೀಪಿಕಾ ಪಡುಕೋಣೆಗೆ ನಟಿ ಆಹ್ವಾನ ಇತ್ತಿದ್ದರು. ಬಹುಶಃ ಅವರು ಸದ್ಯ ಭೇಟಿ ಕೊಟ್ಟಂತೆ ಕಾಣುತ್ತಿಲ್ಲ. 
 
 ಅವರು ಬೆಂಕಿ ಹಚ್ತಿದ್ದಾರೆ, ನಾವು ಸುಡ್ತಿದ್ದೇವೆ, ತುಂಬಾ ನೋವಾಗ್ತಿದೆ... ಕಂಗನಾ ರಣಾವತ್​ ವಿಡಿಯೋ ವೈರಲ್​


ಇದೇ ಸಂದರ್ಭದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಕಂಗನಾ ಮಾತನಾಡಿರುವ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಈ ವಿಡಿಯೋಗೂ, ಕಂಗನಾ ತಮ್ಮ ಮೊದಲ ಅತಿಥಿ ದೀಪಿಕಾ ಪಡುಕೋಣೆ ಎನ್ನುವುದಕ್ಕೂ ಒಂದು ನಂಟಿದೆ. ಅದೇನೆಂದರೆ  2013ರಲ್ಲಿ ಕಂಗನಾ ಸಂದರ್ಶನವೊಂದನ್ನು ನೀಡಿದ್ದರು. ಆ ಸಮಯದಲ್ಲಿ  ದೀಪಿಕಾ ಪಡುಕೋಣೆ ಕೂಡ ಹಾಜರಿದ್ದರು. ಆಗ ಕಂಗನಾ ಅವರು, ನಾನು ಪ್ರಪಂಚದ ಹಲವು ದೇಶಗಳಲ್ಲಿ, ಹಲವು ಹೋಟೆಲ್​ಗಳಲ್ಲಿ  ಊಟ ಸವಿದಿರುತ್ತೇನೆ. ಹಲವಾರು ರೀತಿಯ ಪಾಕವಿಧಾನಗಳನ್ನು ಆಸ್ವಾದಿಸಿರುತ್ತೇನೆ. ನಾನು ಒಂದು ತುಂಬಾ ಸುಂದರವಾದ, ಚಿಕ್ಕ ಕೆಫೆಟೇರಿಯಾವನ್ನು ಹೊಂದಲು ಬಯಸುತ್ತೇನೆ. ಇದು ನನ್ನ ಬಾಲ್ಯದ ಕನಸು. ನನಗೆ ಆಹಾರದ ಬಗ್ಗೆ ತುಂಬಾ ಚೆನ್ನಾಗಿ ತಿಳಿದಿದೆ ಎಂದಿದ್ದರು.  ಆಗ ತಕ್ಷಣ ಅಲ್ಲಿಯೇ ಹಾಜರು ಇದ್ದ ದೀಪಿಕಾ,  "ನಾನು ನಿಮ್ಮ ಮೊದಲ ಗ್ರಾಹಕಿ ಆಗುತ್ತೇನೆ" ಎಂದಿದ್ದರು. ಇದೇ ಕಾರಣಕ್ಕೆ, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೆಫೆ ವಿಡಿಯೋದ ಜೊತೆಗೆ ಆ ಹಳೆಯ ಸಂದರ್ಶನದ ವಿಡಿಯೋ ಕೂಡ ಶೇರ್​ ಮಾಡಿರುವ ಕಂಗನಾ, ದೀಪಿಕಾಗೆ ಅದನ್ನು  ಟ್ಯಾಗ್ ಮಾಡಿದ್ದಾರೆ. ನೀವೇ ಮೊದಲ ಗ್ರಾಹಕಿಯಾಗಬೇಕು" ಎಂದು  ಆಹ್ವಾನಿಸಿದ್ದಾರೆ.

ಇನ್ನು ಕಂಗನಾ ಅವರ ಎಮರ್ಜೆನ್ಸಿ ಚಿತ್ರದ ಕುರಿತು ಹೇಳುವುದಾದರೆ,   ಕಳೆದ ಜನವರಿ 17ರಂದು ಚಿತ್ರ ತೆರೆ ಕಂಡಿದೆ.  ನಾಲ್ಕೈದು ಬಾರಿ ಚಿತ್ರ ಬಿಡುಗಡೆಯ ಸಮೀಪಕ್ಕೆ ಬಂದು ನಂತರ ಬಿಡುಗಡೆ ಸ್ಟಾಪ್​ ಆಗಿತ್ತು. ಕಳೆದ ಬಾರಿ ಇನ್ನೇನು ಬಿಡುಗಡೆಗೆ ಸೆನ್ಸಾರ್​ ಮಂಡಳಿ ಅನುಮತಿ ಸಿಕ್ಕಿದ್ದರೂ ಕುತೂಹಲದ ಘಟ್ಟದಲ್ಲಿ, ಅಚ್ಚರಿಯ ಬೆಳವಣಿಗೆಯ ನಡುವೆ, ಸೆನ್ಸಾರ್​ ಮಂಡಳಿ ಯೂಟರ್ನ್​ ಹೊಡೆದಿತ್ತು.  ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಮೊದಲ ಮಹಿಳಾ ಪ್ರಧಾನಿ  ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ. ಇದಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ಚಿತ್ರಕ್ಕೆ ಮುಕ್ತಿ ಸಿಕ್ಕಿದ್ದರೂ ಕೆಲವು ಕಡೆಗಳಲ್ಲಿ ನಿಷೇಧದ ಬಿಸಿಯೂ ಮುಟ್ಟಿದೆ. ಆದರೆ ಇದೀಗ ಹೇಳಿಕೊಳ್ಳುವಷ್ಟು ಕಮಾಯಿ ಮಾಡಲಿಲ್ಲ. 
ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್‌ ಪಾಸ್ವಾನ್‌ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ

Latest Videos
Follow Us:
Download App:
  • android
  • ios