ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್ ಪಾಸ್ವಾನ್ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ
ನಟಿ, ಸಂಸದೆ ಕಂಗನಾ ರಣಾವತ್ ಮದುವೆ ಯಾವಾಗ? ನಟ, ಸಂಸದ ಚಿರಾಗ್ ಪಾಸ್ವಾನ್ ಜೊತೆಗಿನ ಸಂಬಂಧವೇನು? ಈ ಬಗ್ಗೆ ನಟಿ ಹೇಳಿದ್ದೇನು ಕೇಳಿ...
ನಟಿ, ಸಂಸದೆ ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಎಮರ್ಜೆನ್ಸಿ ಸಿನಿಮಾಕ್ಕೆ ಹಲವಾರು ಅಡೆತಡೆಗಳ ನಡುವೆ ಬರುವ ಜನವರಿಯಲ್ಲಿ ಬಿಡುಗಡೆಯ ಭಾಗ್ಯ ಸಿಕ್ಕಿದೆ. ತಮ್ಮ ನೇರ ನುಡಿಗಳಿಂದಲೇ ಸಾಕಷ್ಟು ವಿವಾದ ಸೃಷ್ಟಿಸ್ತಿರೋ ಸಂಸದೆಗೆ ಈಗ 38 ವರ್ಷ ವಯಸ್ಸು. ಇನ್ನೂ ಮದುವೆಯಾಗದ ಬಗ್ಗೆ ನಟಿಗೆ ಸಾಕಷ್ಟು ಬಾರಿ ಪ್ರಶ್ನೆಗಳು ಎದುರಾಗುತ್ತವೆ. ನಟ ಹೃತಿಕ್ ರೋಷನ್ ಸೇರಿದಂತೆ ಕೆಲವು ನಟರ ಜೊತೆ ಇವರ ಹೆಸರು ಥಳಕು ಹಾಕಿಕೊಂಡಿದ್ದರೂ ನಟಿಗೆ ಇನ್ನೂ ಮದುವೆಯಾಗಿಲ್ಲ. ಇದೀಗ ಇದೇ ಪ್ರಶ್ನೆಯನ್ನು ಶ್ರೇಯಾ ಶರ್ಮಾ ಅವರ ಚಾಟ್ ಷೋನಲ್ಲಿ ಕೇಳಲಾಗಿದೆ. ಅದಕ್ಕೆ ನಟಿ ಅರೆ ಬಾಪ್ರೆ ಎನ್ನುತ್ತಲೇ ನಗುತ್ತಾ, ನನ್ನ ಚಿತ್ರವನ್ನೇ ಬಿಡುಗಡೆ ಮಾಡಲು ಬಿಡುತ್ತಿಲ್ಲ ಈ ಜನ, ಇನ್ನು ಮದ್ವೆಯಾದರೆ ಅದನ್ನು ಬಿಡ್ತಾರಾ ಎಂದು ಪ್ರಶ್ನಿಸಿದ್ದಾರೆ. ನಂತರ ಸಂಸದ, ನಟ ಚಿರಾಗ್ ಪಾಸ್ವಾನ್ ಜೊತೆ ನಿಮ್ಮ ಹೆಸರು ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆ ಎದುರಾಗಿದೆ.
ಅಷ್ಟಕ್ಕೂ ಕಂಗನಾ ಮತ್ತು ಚಿರಾಗ್ ಇಬ್ಬರೂ ನಟರೂ ಹೌದು, ಈಗ ಸಂಸದರೂ ಹೌದು. ಜೊತೆಗೆ ಒಂದೇ ಪಕ್ಷದವರು. ಇವರಿಬ್ಬರೂ 2011ರಲ್ಲಿ ಬಿಡುಗಡೆಯಾದ ಮಿಲೇ ನಾ ಮಿಲೇ ಚಿತ್ರದ ನಾಯಕ-ನಾಯಕಿ. ಈ ಚಿತ್ರ ಸಕತ್ ಫೇಮಸ್ ಆಗಿತ್ತು. ಆ ಬಳಿಕ ಚಿರಾಗ್ ಚಿತ್ರಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ, ಈ ಜೋಡಿ ಸಕತ್ ಫೇಮಸ್ ಆಗಿತ್ತು. ಕಾಂಟ್ರವರ್ಸಿ ಕ್ವೀನ್ ಎಂದೇ ಎನಿಸಿಕೊಂಡಿರೋ ಕಂಗನಾ ರಣಾವತ್ ಹಾಗೂ ತರುಣಿಯರ ಕ್ರಷ್ ಎಂದೇ ಹೇಳುತ್ತಿರುವ ಚಿರಾಗ್ ಪಾಸ್ವಾನ್ ಅವರ ಬಗ್ಗೆ ಎಲ್ಲರ ಗಮನ ನೆಟ್ಟಿದ್ದೂ ಇದೇ ಕಾರಣಕ್ಕೆ. ಸದ್ಯ ಇವರಿಬ್ಬರೂ ಲೋಕಸಭೆಯಲ್ಲಿ ಸ್ಟಾರ್ ಅಟ್ರಾಕ್ಷನ್. ಕಂಗನಾ ಬಿಜೆಪಿಯವರಾದರೆ, ಲೋಕ್ ಜನ ಶಕ್ತಿ ಪಕ್ಷದವರಾಗಿರುವ ಚಿರಾಗ್ ಅವರ ತಂದೆ ರಾಮ್ವಿಲಾಸ್ ಪಾಸ್ವಾನ್ ಅವರು , ವಾಜಪೇಯಿ ಕಾಲದಿಂದಲೂ ಎನ್ಡಿಎ ಜೊತೆ ಗುರುತಿಸಿಕೊಂಡವರು. ಇವರಿಬ್ಬರೂ ಲೋಕಸಭೆಯ ಮೊದಲ ದಿನ ಕೈಹಿಡಿದು ಹೋಗುವ ವಿಡಿಯೋಗಳು ಸಾಕಷ್ಟು ವೈರಲ್ ಆಗಿ ಹಂಗಾಮಾ ಸೃಷ್ಟಿಸಿದ್ದವು. ಇವರಿಬ್ಬರೂ ಇನ್ನೂ ಮದುವೆಯಾಗದ ಕಾರಣ, ಇಬ್ಬರ ಹೆಸರನ್ನೂ ಸೇರಿಸಿ ಗಾಸಿಪ್ ಹರಿಬಿಡಲಾಗುತ್ತಿದೆ.
ಅವ್ರ ಹೆಸರನ್ನೇನಾದ್ರೂ ಹೇಳಿದ್ದಿದ್ರೆ, ಕಟ್ಕೊಂಡಾಕೆ ಜೀವ ಕಳ್ಕೋತಿದ್ರು: ಲೀಲಾವತಿ ಹಳೇ ವಿಡಿಯೋ ವೈರಲ್
ಇದೀಗ ಅದೇ ಪ್ರಶ್ನೆಯನ್ನು ಕಂಗನಾಗೆ ಕೇಳಲಾಯಿತು. ನಿಮ್ಮನ್ನು ಕಂಡರೆ ಚಿರಾಗ್ ಅವರು ದೂರ ಹೋಗ್ತಾರಂತೆ ನಿಜನಾ ಎನ್ನುವ ಪ್ರಶ್ನೆಗೆ ಕಂಗನಾ ನಕ್ಕು, ಹಾಗೇನಿಲ್ಲ, ದೂರ ಓಡಿ ಹೋಗಲ್ಲ. ಆದರೆ ನಮ್ಮಿಬ್ಬರ ಬಗ್ಗೆ ಜನರು ಮಾತನಾಡುವುದು ಅವರಿಗೆ ಹೆದರಿಕೆ ತರುತ್ತಿದೆ ಎಂದಿದ್ದಾರೆ. ಈ ಹಿಂದೆ ಚಿರಾಗ್ ಅವರಿಗೆ ಕಂಗನಾ ಬಗ್ಗೆ ಕೇಳಲಾಗಿತ್ತು. ಆಗ ಅವರು, ಆಕೆ ನನ್ನ ಬೆಸ್ಟ್ ಫ್ರೆಂಡ್. ನನಗೆ ಸಿಕ್ಕಿರುವುದು ಮಾತ್ರ ತುಂಬಾ ಸಂತೋಷ ಎಂದಿದ್ದರು. ಆ ಚಿತ್ರದ ಬಳಿಕ ನನ್ನ ಮತ್ತು ಅವರ ಸಂಪರ್ಕ ಹೆಚ್ಚಿಗೆ ಇರಲಿಲ್ಲ. ಆದರೆ ಇಬ್ಬರೂ ಸಂಸದರಾಗಿ ಹೀಗೆ ಒಟ್ಟಿಗೇ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನಿಜಕ್ಕೂ ಇದು ವಿಸ್ಮಯವಾದದ್ದೇ ಎಂದಿದ್ದರು.
ಅಂದಹಾಗೆ ಈ ಚಿತ್ರಕ್ಕೂ ಮುನ್ನ ಚಿರಾಗ್ ಅವರು, ದಿಲ್ ದೋಸ್ತಿ ದೀವಾನಗಿ, ಮರಾಠಿ ಪಾಲ್ ಪಡ್ತೆ ಪುಧೆ, ನಾಯಕಾ ದೇವಿ: ದಿ ವಾರಿಯರ್ ಕ್ವೀನ್, ಹ್ಯಾಂಗೊವರ್ ಮತ್ತು ಬದ್ರಿ: ದಿ ಕ್ಲೌಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರ ಕಂಗನಾ ರಣಾವತ್ ಅವರ ಜೊತೆ ನಟಿಸಿರುವ ಮಿಲೇ ನಾ ಮಿಲೇ ಚಿತ್ರ. ಕಂಗನಾ ಅವರಿಗೆ ಈಗ 38 ವರ್ಷ ವಯಸ್ಸಾದರೆ, ಚಿರಾಗ್ ಅವರಿಗೆ 41 ವರ್ಷ ವಯಸ್ಸು. ಇಷ್ಟಿದ್ದರೂ ಇಬ್ಬರು ಮದುವೆಯಾಗದೇ ಇರುವುದರಿಂದ ಸುಲಭವಾಗಿ ಎಲ್ಲರ ಬಾಯಿಗೆ ಆಹಾರವಾಗುತ್ತಿದ್ದಾರೆ.
ಕಳೆದ ವಾರ ಗಂಡ-ಹೆಂಡ್ತಿ ಗೋವಾಕ್ಕೆ ಹೋಗಿದ್ರು: ನಟಿ ಶೋಭಿತಾ ಸಾವಿಗೆ ನಟ ಹರ್ಷ ಹೇಳಿದ್ದೇನು?