ರಿಯಲ್ ಲೈಫ್‌ನಲ್ಲೂ ಕಂಗನಾ ಢಾಕಡ್‌? ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಕ್ಕೆ ಏನೆಲ್ಲಾ ಸಮಸ್ಯೆ ಆಗುತ್ತಿದೆ ಎಂದು ರಿವೀಲ್ ಮಾಡಿದ ನಟಿ... 

ಬಾಲಿವುಡ್ (Bollywood) ಬೋಲ್ಡ್‌ ನಟಿ ಕಂಗನಾ ರಣಾವತ್ (Kangana Ranaut) ದಿನೇ ದಿನೇ ವೃತ್ತಿ ಜೀವನದಲ್ಲಿ ಬೆಳೆಯುತ್ತಿರುವ ರೀತಿ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಕಳೆದ ವರ್ಷ ಭಾರತದ ರಾಷ್ಟ್ರಪತಿಗಳಿಂದ ಪದ್ಮಶ್ರೀ (Padma Shri) ಪ್ರಶಸ್ತಿ ಸ್ವೀಕರಿಸಿದ ನಟಿ ನಿರ್ಮಾಣ ಸಂಸ್ಥೆ ತೆರೆದರು. ಟಿಂಕು ವೆಡ್ಸ್‌ ಶೀರು ಮೊದಲ ನಿರ್ಮಾಣ ಸಿನಿಮಾ ಆಗಿದ್ದು, ಶೇಘ್ರದಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ (Amazon prime) ಬಿಡುಗಡೆಯಾಗಲಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿರುವ ಕಂಗನಾ ತಮ್ಮ ಢಾಕಡ್‌ ಮತ್ತು ತೇಜಸ್‌ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕಂಗನಾ ಪರ್ಸನಲ್‌ ಲೈಫ್‌ ಬೇರೆ ರೂಟ್‌ನಲ್ಲಿ ನಡೆಯುತ್ತಿದೆ...

ಕೆಲವು ದಿನಗಳ ಹಿಂದೆ ಸಿದ್ಧಾರ್ಥ್‌ ಕನ್ನಾ (Siddharth Kannan) ಅವರೊಂದಿಗೆ ಮಾಡಿದ ಸಂದರ್ಶನದಲ್ಲಿ ಕಂಗನಾ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಸ್ಪೈ ಥ್ರಿಲರ್ ಆಕ್ಷನ್‌ ಢಾಕಡ್‌ ಸಿನಿಮಾದಲ್ಲಿ ಕಂಗನಾ ಏಜೆಂಟ್‌ ಅಗ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರಿಯಲ್ ಲೈಫ್‌ನಲ್ಲೂ ಈ ಪಾತ್ರನ ಕಂಗನಾ ಕನೆಕ್ಟ್‌ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಲಾಗಿತ್ತು. 'ನೀವು ಅಂದುಕೊಂಡ ರೀತಿಯಲ್ಲಿ ಏನೂ ಇಲ್ಲ. ರಿಯಲ್ ಲೈಫ್‌ನಲ್ಲಿ ಯಾರಿಗೆ ಹೊಡೆಯಲಿ? ನಾನು ಮದುವೆ ಆಗದಿರಲು ಕಾರಣವೇ ನಿಮ್ಮಂತರವರು ನನ್ನ ಬಗ್ಗೆ ಈ ರೀತಿ ಸುದ್ದಿ ಹಬ್ಬಿಸುತ್ತಿರುವುದಕ್ಕೆ' ಎಂದು ನಗು ನಗುತ್ತಲೇ ಕಂಗನಾ ಉತ್ತರಿಸಿದ್ದಾರೆ.

ಹಾಗಿದ್ರೆ ನೀವು ಮದುವೆ ಆಗದಿರಲು ಕಾರಣವೇ ಜನರು ಸೃಷ್ಟಿ ಮಾಡುತ್ತಿರುವ ಗಾಳಿ ಮಾತುಗಳಿಂದ ನಾ? ಎಂದು ಸಿದ್ಧಾರ್ಥ್ ಕೇಳಿದ್ದಾರೆ. 'ಹೌದು ನನ್ನ ಬಗ್ಗೆ ಕೆಟ್ಟದಾಗಿ ಗಾಸಿಪ್ ಹರಿದಾಡುತ್ತಿದೆ ನಾನು ಕೆಲವರಿಗೆ ಹೊಡೆದೆ ಎಂದು ಕೂಡ ಹೇಳುತ್ತಿದ್ದಾರೆ' ಎಂದು ಕಂಗನಾ ಹೇಳಿದ್ದಾರೆ. ಇನ್ನು ಮದುವೆ, ಮಕ್ಕಳ ಮತ್ತು ಫ್ಯೂಚರ್‌ ಬಗ್ಗೆ ಕಂಗನಾ ಏನೆಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಟೈಮ್ಸ್‌ ನೌ ಸಂದರ್ಶನಲ್ಲಿ ಹಂಚಿಕೊಂಡಿದ್ದರು.

ಲಾಕ್‌ಅಪ್ ಶೋ ಗೆದ್ದು ಬೀಗಿದ ಮುನಾವರ್ ಫರೂಖಿ; ಗಳಿಸಿದ ಹಣವೆಷ್ಟು?

'ಇನ್ನು 5 ವರ್ಷದಲ್ಲಿ ನಾನು ತಾಯಿಯಾಗಿ ಮಕ್ಕಳ ಜೊತೆ ಸಮಯ ಕಳೆಯಬೇಕು ಅಂದುಕೊಂಡಿರುವೆ. ನಾನು ಮದುವೆಯಾಗುವವರು ಭಾರತದಲ್ಲಿ ತುಂಬಾ ಆಕ್ಟೀವ್ ಆಗಿರಬೇಕು' ಎಂದು ಕಂಗನಾ ಹೇಳಿಕೊಂಡಿದ್ದಾರೆ. ಇನ್ನೂ ಸಿನಿಮಾ ಬಗ್ಗೆ ಹೇಳುವುದಾದರೆ 'ಸಿನಿಮಾದಲ್ಲಿ ನಾಯಕಿಯರಿಗೆ ಪ್ರಾಮುಖ್ಯತೆ ಇರುವುದಿಲ್ಲ ಅದರಲ್ಲೂ ಆಕ್ಷನ್ ಸೀನ್ ತುಂಬಾ ಕಡಿಮೆ. ಇನ್ನು ಢಾಕಡ್ ಸಿನಿಮಾ ಬಗ್ಗೆ ನನಗೆ ಹೆಮ್ಮೆ ಇದೆ ಏಕೆಂದರೆ ಕಮರ್ಷಿಯಲ್ ಸಿನಿಮಾದಲ್ಲಿ ಮಹಿಳೆಯರಿಗೆ ಈ ರೀತಿ ಪಾತ್ರ ಕೊಡುವುದು ಗ್ರೇಟ್. ಜನರು ಹಾಕಿರುವ ಬ್ಯಾರಿಯರ್‌ನ ಬ್ರೇಕ್ ಮಾಡುವುದರಲ್ಲಿ ನಾನು ಸದಾ ಮುಂದು. ಸಿನಿಮಾ ನೋಡಿ ಆನಂತರ ಹೇಳಿ ಇದು ಕಮರ್ಷಿಯಲ್ ಸಿನಿಮಾನಾ ಅಂತ' ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ಸಂಭಾವನೆ:

ಫ್ರಿ ಪ್ರೆಸ್ ಜರ್ನಲ್ ಆಂಗ್ಲ ಮಾಧ್ಯಮದ ಜೊತೆ ಮಾತನಾಡಿದ ಕಂಗನಾ, ನಾನು ಕಡಿಮೆ ಸಂಭಾವನೆ ಪಡೆದಿಲ್ಲ. ನನ್ನ ಜರ್ನಿಯಲ್ಲಿ ಅನೇಕ ಪುರುಷರು ಸಹಾಯ ಮಾಡಿದ್ದಾರೆ. ನಾನು ಕೆಲವು ಸಮಯ ಯೋಚಿಸಿದೆ ನಾನ್ಯಾಕೆ ಪುರುಷರಷ್ಟೆ ಸಮಾನ ಸಂಭಾವನೆ ಪಡೆಯಬಾರದು ಎಂದು. ನಾನು ಇಂದು ಸಂತೋಷದಿಂದ ಹೇಳುತ್ತೇನೆ. ನಾನು ಕಡಿಮೆ ಸಂಭಾವನೆ ಪಡೆದಿಲ್ಲ ಎಂದು. ಅಂತ ಕಂಗನಾ ಹೇಳಿದ್ದಾರೆ. ಇದೇ ಸಮಯದಲ್ಲಿ ಕಂಗನಾ ಹಿರಿಯ ನಟಿಯರಾದ ರೇಖಾ ಮತ್ತು ಹೇಮ ಮಾಲಿನಿ ಅವರ ಬಗ್ಗೆಯೂ ಹೇಳಿದ್ದಾರೆ.

Salman Khan ಈದ್‌ ಪಾರ್ಟಿಯಲ್ಲಿ Kangana Ranaut, ಸಖತ್‌ ಖುಷಿಯಲ್ಲಿದ್ದ ನಟಿ!

ನಾನು ಅನೇಕ ಪುರುಷ ಪ್ರಧಾನ ಸಿನಿಮಾಗಳನ್ನಿ ರಿಜೆಕ್ಟ್ ಮಾಡಿದ್ದೀನಿ. ಖಾನ್ ಪ್ರಧಾನ ಸಿನಿಮಾಗಲು, ಕುಮಾರ್ ಪ್ರಧಾನ ಸಿನಿಮಾಗಳನ್ನು ಮತ್ತು ಎಲ್ಲಾ ರೀತಿಯ ದೊಡ್ಡ ಹೀರೋಗಳ ಸಿನಿಮಾಗಳನ್ನು ನಾನು ತಿರಸ್ಕರಿಸಿದ್ದೀನಿ. ನಾನು ಯಾವಗಲೂ ದೃಷ್ಟಿಕೋನವನ್ನು ಹೊಂದಿದ್ದೇನೆ ಆದರೆ ಏಕಾಂಗಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಯಶಸ್ವಿ ಮಹಿಳೆಯರಿಗೆ ಅನೇಕ ಪುರುಷರು ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ.