ಬಾಲಿವುಡ್‌ ಮಂದಿ ಕಂಗನಾ ಪರ ಅಥವಾ ವಿರೋಧವಾಗಿ ಮಾತನಾಡೋಕೆ ಹೆದರೋ ಪರಿಸ್ಥಿತಿಯಾಗಿದೆ. ಆಕೆಯನ್ನು ಬೆಂಬಲಿಸಲೂ ಆಗದೆ, ವಿರೋಧಿಸಲೂ ಆಗದೆ ಸ್ಟಾರ್ ನಟರು ನಿರ್ಲಿಪ್ತ ಭಾವ ತೋರಿಸುತ್ತಿದ್ದಾರೆ.

ನಟಿ ಇತ್ತೀಚೆಗೆ ಕೊಟ್ಟ ಹೇಳಿಕೆಯೇ ಇದಕ್ಕೆ ಸಾಕ್ಷಿ. ನಟಿಯ ತಲೈವಿ ಸಿನಿಮಾ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಟ್ರೈಲರ್‌ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮಾದ ಹಾಡು ಕೂಡಾ ಹಿಟ್ ಆಗಿದೆ. ಆದರೆ ಬಾಲಿವುಡ್ ಮಂದಿ ಯಾರೂ ನಟಿಯ ಅಭಿನಯವನ್ನು ಹೊಗಳೋ ಹೇಳಿಕೆಯಾಗಲಿ, ಸಾಂಗ್, ಟ್ರೇಲರ್ ಮೆಚ್ಚಿ ಟ್ವೀಟ್ ಮಾಡಿದ್ದಾಗಲೀ ನಡೆದಿಲ್ಲ.

ಕಂಗನಾ ರಣಾವತ್ ಕ್ವೀನ್‌ಗೆ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ!

ನಟಿ ಕಂಗನಾ ರಣಾವತ್ ಅವರು ಬುಧವಾರ ತಡರಾತ್ರಿ ಟ್ವೀಟ್ ಮಾಡಿದ್ದು, ಅಕ್ಷಯ್ ಕುಮಾರ್ ಸೇರಿ ಅನೇಕ ಸೂಪರ್‌ ಸ್ಟಾರ್‌ಗಳು ತಲೈವಿಯಲ್ಲಿ ಅವರ ಕೆಲಸವನ್ನು ಶ್ಲಾಘಿಸಿ ರಹಸ್ಯ ಕರೆ ಮತ್ತು ಸಂದೇಶಗಳನ್ನು ಕಳುಹಿಸುತ್ತಿರುವುದಾಗಿ ನಟಿ ಹೇಳಿದ್ದಾರೆ.

ತನ್ನ ಕೆಲಸವನ್ನು ಶ್ಲಾಘಿಸುವ ಟ್ವೀಟ್‌ಗೆ ಉತ್ತರಿಸಿದ ನಟಿ "ಬಾಲಿವುಡ್ ತುಂಬಾ ಪ್ರತಿಕೂಲವಾಗಿದೆ, ನನ್ನನ್ನು ಹೊಗಳಿದ್ದಕ್ಕೂ ಸಹ ಜನರನ್ನು ತೊಂದರೆಯಲ್ಲಿ ಸಿಲುಕಿಸಬಹುದು, ಅಕ್ಷಯ್ ಕುಮಾರ್‌ನಂತಹ ದೊಡ್ಡ ತಾರೆಯರಿಂದಲೂ ನನಗೆ ಅನೇಕ ರಹಸ್ಯ ಕರೆಗಳು ಮತ್ತು ಸಂದೇಶಗಳು ಬಂದಿವೆ. ಅವರು ತಲೈವಿ ಟ್ರೈಲರ್ ಹೊಗಳಿದರು. ಆದರೆ ಆಲಿಯಾ ಮತ್ತು ದೀಪಿಕಾ ಚಿತ್ರಗಳಂತೆ ಅವರು ಅದನ್ನು ಬಹಿರಂಗವಾಗಿ ಹೊಗಳಲು ಸಾಧ್ಯವಿಲ್ಲ. ಮೂವಿ ಮಾಫಿಯಾ ಭಯೋತ್ಪಾದನೆ. " ಚಿತ್ರಕಥೆಗಾರ ಅನಿರುದ್ಧ ಗುಹಾ, ಕಂಗನಾ ರಣಾವತ್ ಅಸಾಧಾರಣ, ತಲೆಮಾರಿನ ನಟಿ ಎಂದು ಕಮೆಂಟಿಸಿದ್ದಾರೆ.